More

    ಹಾಸನದಲ್ಲಿ ಮತ್ತೆ 5 ಕೇಸ್ ಪಾಸಿಟಿವ್

    292ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

    ಹಾಸನ: ಜಿಲ್ಲೆಯಲ್ಲಿ ಭಾನುವಾರ 5 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 292ಕ್ಕೆ ಏರಿಕೆಯಾಗಿದೆ.
    ಇಲ್ಲಿವರೆಗೆ 203 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 88 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಬೆಳಕಿಗೆ ಬಂದ ಐದು ಜನ ಚನ್ನರಾಯಪಟ್ಟಣದ 36 ವರ್ಷದ ಪುರುಷ, 42 ವರ್ಷದ ವ್ಯಕ್ತಿ, 54 ವರ್ಷದ ವ್ಯಕ್ತಿ, 17 ವರ್ಷದ ಯುವಕ ಹಾಗೂ ಹೊಳೆನರಸೀಪುರದ 43 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಚನ್ನರಾಯಪಟ್ಟಣದ 42 ವರ್ಷದ ಪುರುಷ ತಮಿಳುನಾಡಿನಿಂದ ಬಂದಿದ್ದು ಉಳಿದ ನಾಲ್ವರು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಸೇವಾ ಸಿಂಧು ಆ್ಯಪ್ ಮೂಲಕ ಬಂದಿದ್ದ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಏಳು ದಿನಗಳ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
    ಆಲೂರಿನ 4, ಅರಕಲಗೂಡು ತಾಲೂಕಿನ 10, ಅರಸೀಕೆರೆಯ 3, ಬೇಲೂರಿನ 4, ಚನ್ನರಾಯಪಟ್ಟಣ ತಾಲೂಕಿನ 51, ಹಾಸನದ 14, ಹೊಳೆನರಸೀಪುರದ 2 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts