More

    ಜಿಲ್ಲೆಗೆ ಪ್ರತ್ಯೇಕ ಮೆಗಾ ಡೇರಿ

    ಹಾವೇರಿ: ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟದ ಬದಲು ಮೆಗಾ ಡೇರಿ ಸ್ಥಾಪನೆ ಕುರಿತು ಮುಂದಿನ ಬಜೆಟ್​ನಲ್ಲಿ ಘೊಷಿಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ನೀಡಿದರು.

    ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಜಿಲ್ಲಾಡಳಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬಾಳಂಬೀಡ ಮತ್ತು ಇತರ 162, ಸಣ್ಣ ನೀರಾವರಿ, ಜಿಪಂ ಕೆರೆಗಳಿಗೆ, ಹಿರೇಕಾಂಶಿ ಮತ್ತು ಇತರ 77 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ 504 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

    ಸಿಎಂ ಭಾಷಣ ಮಾಡುತ್ತಿದ್ದ ವೇಳೆ ಹಾಲು ಒಕ್ಕೂಟದ ಘೊಷಣೆ ಕುರಿತು ಸಚಿವ ಬಸವರಾಜ ಬೊಮ್ಮಾಯಿ ಅವರು ಚೀಟಿ ಕಳುಹಿಸಿದರು. ಆದರೆ, ಭಾಷಣದಲ್ಲಿ ಒಕ್ಕೂಟ ವಿಷಯ ಪ್ರಸ್ತಾಪಿಸಲಿಲ್ಲ. ನಂತರ ಬೊಮ್ಮಾಯಿ ಅವರ ಒತ್ತಡಕ್ಕೆ ಮಣಿದು ಮೆಗಾ ಡೇರಿ ಸ್ಥಾಪಿಸುವ ಭರವಸೆ ನೀಡಿದರು. ಜನಸಮೂಹ ಚಪ್ಪಾಳೆ ಮೂಲಕ ಸಿಎಂಗೆ ಅಭಿನಂದಿಸಿದರು.

    ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಜಿಲ್ಲೆಯಲ್ಲಿ ಸರ್ವಜ್ಞ ಏತ ನೀರಾವರಿ, ಆಣೂರ, ಬಾಳಂಬೀಡ, ಹಿರೇಕಾಂಶಿ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮೆಡಿಕಲ್ ಕಾಲೇಜ್​ಗೂ ಅನುದಾನ ನೀಡಲಾಗಿದೆ ಎಂದರು.

    ದಶಕದಿಂದ ಸಮರ್ಪಕವಾಗಿ ಮಳೆಯಾಗದಿರುವ ಪರಿಣಾಮ ಹಾನಗಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಬೇಡಿಕೆಯಿತ್ತು. ಅದು ಇಂದು ಸಾಕಾರಗೊಂಡಿದೆ. ರಾಜ್ಯದಲ್ಲಿ ಉಂಟಾದ ನೆರೆ ಹಾಗೂ ಅತಿವೃಷ್ಟಿಗೂ ಹಣಕಾಸಿನ ಹೊಂದಾಣಿಕೆ

    ಜತೆಗೆ ಅಭಿವೃದ್ಧಿಗೆ ಯಾವುದೇ ಆರ್ಥಿಕ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯ ವಿವಿಧ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು ಎಂದರು.

    ರಾಜ್ಯದ ಆರ್ಥಿಕ ಪ್ರಗತಿಗೆ ಹಾವೇರಿ ಜಿಲ್ಲೆ ತನ್ನದೇ ಕೊಡುಗೆ ನೀಡುತ್ತಿದೆ. ಬ್ಯಾಡಗಿಯೂ ಮೆಣಸಿನಕಾಯಿ, ರಾಣೆಬೆನ್ನೂರ ತಾಲೂಕು ಬೀಜೋತ್ಪಾದನೆಗೆ ಪ್ರಸಿದ್ಧಿಯಾಗಿದೆ. ಕೃಷಿ ಜತೆಗೆ ಕೈಗಾರಿಕೆ ಕ್ಷೇತ್ರವು ಬೆಳವಣಿಗೆ ಆಗಬೇಕು. ರಾಜ್ಯಕ್ಕೆ ಹೊಸ ಉದ್ಯಮಿಗಳನ್ನು ಆಹ್ವಾನಿಸಬೇಕು. ರಾಜ್ಯದ ಎಲ್ಲ ಭಾಗಗಳು ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

    ರೈತರು ಟ್ರ್ಯಾಕ್ಟರ್ ಹಾಗೂ ಟ್ರಾಲಿ, ಪಂಪ್​ಸೆಟ್ ಖರೀದಿಸಲು ಪಿಎಲ್​ಡಿ, ಡಿಸಿಸಿ, ಸಹಕಾರ ಬ್ಯಾಂಕ್​ಗಳಲ್ಲಿ ಮಾಡಿರುವ ಸಾಲದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ರೈತರು ಸಾಲದ ಅಸಲು ತುಂಬಿ ಋಣಮುಕ್ತರಾಗಬೇಕು. ಇದರಿಂದ ರೈತ ಸಮೂಹಕ್ಕೆ ಅನುಕೂಲವಾಗಲಿದೆ.
    | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts