More

    ಜಿಲ್ಲೆಗೆ ಕೊಳ್ಳೇಗಾಲ ಅಗ್ರಗಣ್ಯ

    ಕೊಳ್ಳೇಗಾಲ: 2022-23ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಚಾಮರಾಜನಗರ ಜಿಲ್ಲೆಗೆ ಕೊಳ್ಳೆಗಾಲ ಮೊದಲು ಸ್ಥಾನದಲ್ಲಿದ್ದು, ಜಿಲ್ಲೆಯ ಪ್ರಥಮ, ದ್ವಿತೀಯ, ತೃತೀಯ ಮೂರೂ ಸ್ಥಾನವನ್ನು ಕೊಳ್ಳೇಗಾಲದ ವಿದ್ಯಾರ್ಥಿಗಳೇ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ವಿಚಾರ.


    ಈ ಬಾರಿ ಚಾಮರಾಜನಗರ ಜಿಲ್ಲೆಯ 4 ತಾಲೂಕಿನ ಪೈಕಿ ಕೊಳ್ಳೇಗಾಲ ತಾಲೂಕು ವಿಶೇಷ ಸ್ಥಾನಗಟ್ಟಿಸಿದ್ದು, ಶೈಕ್ಷಣಿಕ ಪ್ರಗತಿಯಲ್ಲಿ ದಾಪುಗಾಲಿಡುತ್ತಿದೆ. 2021-22ನೇ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಫಲಿತಾಂಶ ಪಡೆದಿದ್ದ ಕೊಳ್ಳೇಗಾಲ 2022-23 ನೇ ಸಾಲಿನಲ್ಲಿ ಶೇ.98.5ರಷ್ಟು ಫಲಿತಾಂಶ ಗಳಿಸಿ ಗಣನೀಯ ಸಾಧನೆ ಮಾಡಿರುವುದು ಪ್ರಶಂಸನೀಯ.

    ಪಟ್ಟಣದ ಶ್ರೀ ವಾಸವಿ ವಿದ್ಯಾ ಕೇಂದ್ರದ ಜಿ.ಬಿ ಶ್ರೀಜಾ 619 ಮತ್ತು ಕೆ. ಪಲ್ಲವಿ 619, ನಿಸರ್ಗ ವಿದ್ಯಾನೀಕೇತನ ಶಾಲೆಯ ಆರ್. ತೇಜಶ್ವಿನಿ 619 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
    ನಿಸರ್ಗ ವಿದ್ಯಾನಿಕೇತನ ಶಾಲೆಯ ಎಸ್.ಲಿಖಿತಾ 618, ಶ್ರೀ ವಾಸವಿ ವಿದ್ಯಾ ಕೇಂದ್ರದ ಆರ್.ಮೋನಿಷಾ 618, ಗುಂಡ್ಲುಪೇಟೆಯ ಸೆಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಗಂರ್ಧವಿನಿ 618 ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಇವರಲ್ಲಿ ಇಬ್ಬರು ಕೊಳ್ಳೇಗಾಲ ವಿದ್ಯಾರ್ಥಿ ಗಳಿಸಿರುವುದು ಕೊಳ್ಳೇಗಾಲಕ್ಕೆ ಗರಿಮೆ ತಂದಿದೆ. ಇನ್ನು ಆದರ್ಶ ಶಾಲೆಯ ವಿದ್ಯಾರ್ಥಿನಿ ಮಾನಸ 617 ಅಂಕ ಪಡೆದು ತೃತೀಯ ಸ್ಥಾನವನ್ನು ಅಲಂಕರಿಸಿರುವುದು ವಿಶೇಷವಾಗಿದೆ.

    ಕೊಳ್ಳೇಗಾಲಕ್ಕೆ 98.5ರಷ್ಟು ಫಲಿತಾಂಶ : 2022-23ನೇ ಸಾಲಿನಲ್ಲಿ ಕೊಳ್ಳೇಗಾಲ ತಾಲೂಕಿನಲ್ಲಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದ 2,079 ವಿದ್ಯಾರ್ಥಿಗಳ ಪೈಕಿ 2,058 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 2,028 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ತಾಲೂಕಿನ 41 ಶಾಲೆಗಳಲ್ಲಿ 25 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ 14 ಸರ್ಕಾರಿ ಶಾಲೆಗಳಲ್ಲಿ 11 ಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸಿರುವುದು ಗಮನಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts