More

    ಜಿಲ್ಲಾದ್ಯಂತ ಮೊಳಗಿದ ಪಂಚಾಕ್ಷರಿ ಮಂತ್ರ

    ಹುಬ್ಬಳ್ಳಿ: ಶಿವರಾತ್ರಿ ಹಬ್ಬದ ನಿಮಿತ್ತ ನಗರದ ವಿವಿಧ ದೇವಸ್ಥಾನಗಳಲ್ಲಿ ಮಂಗಳವಾರ ಭಕ್ತರ ದಂಡು ಸೇರಿತ್ತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು.

    ಉಣಕಲ್​ನ ರಾಮಲಿಂಗೇಶ್ವರ ದೇವಸ್ಥಾನ, ರೈಲ್ವೆ ಸ್ಟೇಷನ್ ಈಶ್ವರ ದೇವಸ್ಥಾನ, ಕೇಶ್ವಾಪುರ ಕಾಶಿವಿಶ್ವನಾಥ, ಜೆಪಿ ನಗರದ ಶಿವ ಮಂದಿರ, ಶಿವಪುರ ಕಾಲನಿಯ ಶಿವನ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತಿದ್ದರು.

    ಉಪಾವಾಸವಿದ್ದವರು ದೇವರಿಗೆ ಕಜ್ಜೂರ ಅರ್ಪಿಸಿ ತಾವೂ ಸೇವಿಸಿದರು. ಶ್ರೀ ಸಿದ್ಧಾರೂಢ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ಶ್ರೀ ಸಿದ್ಧಾರೂಢರ ಪಲ್ಲಕ್ಕಿ ಉತ್ಸವ ಅದ್ದೂರಿಯಿಂದ ಜರುಗಿತು. ಶ್ರೀ ಗುರುನಾಥರೂಢರಿಗೆ ಪೂಜೆ, ಅಭಿಷೇಕ, ಅರ್ಚನೆ ನೆರವೇರಿಸಲಾಯಿತು.

    ಹೆಬ್ಬಳ್ಳಿ ಅಗಸಿ: ಧಾರವಾಡದ ಹೆಬ್ಬಳ್ಳಿ ಅಗಸಿಯ ಶ್ರೀ ಈಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ಶ್ರೀ ಈಶ್ವರ ದೇವಸ್ಥಾನ ವಿಶ್ವಸ್ಥ ಕಮಿಟಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಸಿದ್ಧಿ ವಿನಾಯಕ ಯುವಕ ಮಂಡಳ ಹೆಬ್ಬಳ್ಳಿ ಅಗಸಿ ಅಧ್ಯಕ್ಷ ಸುಧೀರ ಪುರಾಣೆ, ಭೋಯಿ ಸಮಾಜದ ಜಿಲ್ಲಾ ಅಧ್ಯಕ್ಷ ಜಗನ್ನಾಥ ಗಡದೆ, ಚನ್ನಪ್ಪ ನವಲಗುಂದ, ಶಂಕರ ಜಮದಾಳೆ, ಈರಣ್ಣ ಬಡಕಟ್ಟೆ, ಬಸವರಾಜ ಬೆಟಗೇರಿ, ಹೇಮಂತ ಬಡಿಗೇರ, ಕಾಳಪ್ಪ ಬಡಿಗೇರ, ಮಲ್ಲಪ್ಪ ನವಲಗುಂದ, ಅಭಿಷೇಕ ಗಡದೆ, ಲಾಕಿನ್ಸ ಝುಳಕೆ, ಪುಂಡಲೀಕರಾವ್ ದಂಡಿನ ಇತರರು ಭಾಗವಹಿಸಿದ್ದರು.

    ಯುದ್ಧ ಭೀತಿ ತೊಲಗಿ ಶಾಂತಿ ನೆಲೆಸಲಿ: ವಿಶ್ವದಲ್ಲಿ ಯುದ್ಧ ಭೀತಿ ತಲೆದೋರಿದೆ. ಈ ಭೀತಿ ಅಂತ್ಯ ಕಂಡು ಲೋಕ ಕಲ್ಯಾಣವಾಗಲು ಪ್ರಾರ್ಥಿಸುವುದಾಗಿ ಪಂ. ಸಮೀರಾಚಾರ್ಯ ಕಂಠಪಲ್ಲಿ ಅವರು ಹೇಳಿದರು. ವಿಜಯನಗರದ ಮುಖ್ಯಪ್ರಾಣದೇವರು ಹಾಗೂ ಮೃತ್ಯುಂಜಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ಹೋಮ-ಹವನ,ಪೂಜೆ ಸಲ್ಲಿಸಿದ ನಂತರ ಆಶೀರ್ವಚನ ನೀಡಿದರು. ನಮ್ಮಲ್ಲಿ ದ್ವಾದಶ ಲಿಂಗಗಳಿವೆ. ಹಾಗಾಗಿ ನಮ್ಮ ದೇಶ ಸುರಕ್ಷಿತವಾಗಿದೆ. ಮೇಲೆ ಕೇದಾರನಾಥ, ಕೆಳಗಡೆ ರಾಮೇಶ್ವರ ಇದ್ದಾರೆ. ಅವರು ನಮ್ಮನ್ನು ಕಾಯುತ್ತಿದ್ದಾರೆ. ಜಾಗತಿಕ ತಾಪಮಾನ ಕಡಿಮೆ ಆಗಲು ರುದ್ರದೇವನಲ್ಲಿ ಪ್ರಾರ್ಥಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts