More

    ಜಿಟಿಜಿಟಿ ಮಳೆಯಲ್ಲೇ ಬೃಹತ್ ಜಾಥಾ

    ಹುಮನಾಬಾದ್: ಜಿಟಿಜಿಟಿ ಮಳೆಯಲ್ಲೂ ನಿರೀಕ್ಷೆಗೆ ಮೀರಿ ಹೆಜ್ಜೆ ಹಾಕಿದ ಶಾಲಾ-ಕಾಲೇಜು ವಿದ್ಯಾಥರ್ಿಗಳು, ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ಸ್ವಾಗತ, ಪಟಾಕಿ ಚಿತ್ತಾರ, ರಾಷ್ಟ್ರಭಕ್ತಿಯ ಜೈಘೋಷಗಳು… ಇದು ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ತಾಲೂಕು ಆಡಳಿತ ಹಾಗೂ ಪುರಸಭೆ ಸಹಯೋಗದಡಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡ ಒಂದು ಕಿಲೋಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ ಕಾಲ್ನಡಿಗೆ ಜಾಥಾ ವೇಳೆ ಕಂಡುಬಂದ ದೃಶ್ಯ.

    ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಬಸವೇಶ್ವರ ವೃತ್ತ, ಪುರಸಭೆ ಹಳೇ ಕಚೇರಿ, ಛತ್ರಪತಿ ಶಿವಾಜಿ ವೃತ್ತ, ತಹಸಿಲ್ ಹಳೇ ಕಚೇರಿ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಪ್ರವಾಸಿ ಮಂದಿರ ಮಾರ್ಗವಾಗಿ ನೂತನ ತಹಸಿಲ್ವರೆಗೆ ನಡೆದ ಜಾಥಾದಲ್ಲಿ ವಿದ್ಯಾಥರ್ಿಗಳು, ಅಧಿಕಾರಿಗಳು, ಗಣ್ಯರು, ಸಂಘ- ಸಂಸ್ಥೆಗಳ ಪ್ರಮುಖರು, ವ್ಯಾಪಾರಸ್ಥರು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

    ವೀರಭದ್ರೇಶ್ವರ ದೇವಸ್ಥಾನ ಎದುರು ಶಾಸಕ ರಾಜಶೇಖರ ಪಾಟೀಲ್ ಪಾರಿವಾಳ ಹಾರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. 8.15ರ ಸುಮಾರಿಗೆ ಶುರುವಾದ ಜಾಥಾ 11.15ಕ್ಕೆ ನೂತನ ತಹಸಿಲ್ ಕಚೇರಿಗೆ ತಲುಪಿತು.

    ರಸ್ತೆಯುದ್ದಕ್ಕೂ ಬೋಲೊ ಭಾರತ ಮಾತಾಕೀ ಜೈ, ಒಂದೇ ಮಾತರಂ, ಜೈ ಜವಾನ್- ಜೈ ಕಿಸಾನ್, ಹರ್ ಘರ್ ತಿರಂಗಾ, ಇಂಡಿಯಾ ಈಸ್ ಎ ಸೂಪರ್ ಸ್ಟಾರ್ ಸೇರಿ ರಾಷ್ಟ್ರಭಕ್ತಿಯ ಜಯಘೋಷಗಳು ಮೊಳಗಿದವು.

    ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಪುರಸಭೆ ಅಧ್ಯಕ್ಷೆ ರೀತು ಶಮರ್ಾ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಪ್ರಮುಖರಾದ ಡಾ.ಸಿದ್ದು ಪಾಟೀಲ್, ಗೋರೆಮಿಯಾ, ವೀರೇಶ ಸೀಗಿ, ಸುನೀಲ ಪಾಟೀಲ್, ಶಿವಶಂಕರ ತರನಳ್ಳಿ, ಮಹಾಂತಯ್ಯ ತೀರ್ಥ, ಎಸಿ ರಮೇಶ ಕೋಲಾರ, ಎಎಸ್ಪಿ ಶಿವಾಂಸು ರಜಪೂತ್, ತಹಸೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ, ತಾಪಂ ಇಒ ಡಾ.ಗೋವಿಂದ, ಬಿಇಒ ವೆಂಕಟೇಶ, ಪುರಸಭೆ ಸಿಒ ಶಿವರಾಜ ರಾಠೋಡ್, ಸಿಡಿಪಿಒ ಶಿವಪ್ರಕಾಶ ಹಿರೇಮಠ, ಸಮಾಜ ಕಲ್ಯಾಣಧಿಕಾರಿ ನಿಂಗರಾಜ ಅರಸ್, ಬಿಸಿಎಂ ಅಧಿಕಾರಿ ವಿಠ್ಠಲ್ ಸೇಡಂಕರ್, ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್ಐಗಳಾದ ಮಂಜನಗೌಡ ಪಾಟೀಲ್, ಬಸವರಾಜ ಹೇರೂರ ಇತರಿದ್ದರು.

    ಪೂರ್ವಜರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರೃ ಸಿಕ್ಕಿದೆ. ಅದನ್ನು ಉಳಿಸಿಕೊಂಡು ಹೋಗಲು ನಮ್ಮಲ್ಲಿ ಸದಾ ದೇಶಭಕ್ತಿ, ದೇಶ ಪ್ರೇಮ ಬೆಳೆಸಿಕೊಳ್ಳುವ ಅಗತ್ಯವಿದೆ. ಸ್ವಾತಂತ್ರೃ ಅಮೃತೋತ್ಸವ ನಿಮಿತ್ತ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಒಂದು ಕಿಮೀ ಉದ್ದದ ರಾಷ್ಟ್ರ ಧ್ವಜದ ಕಾಲ್ನಡಿಗೆ ಅಭಿಯಾನಕ್ಕೆ ಮಳೆಯಲ್ಲೂ ನಿರೀಕ್ಷೆಗೆ ಮೀರಿ ಸ್ಪಂದನೆ ಸಿಕ್ಕಿದೆ.
    | ರಾಜಶೇಖರ ಪಾಟೀಲ್, ಶಾಸಕ

    ಆರತಿ, ಪುಷ್ಪವೃಷ್ಟಿ ಮಾಡಿ ಸ್ವಾಗತ: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಒಂದು ಕಿಮೀ ಉದ್ದದ ರಾಷ್ಟ್ರಧ್ವಜದೊಂದಿಗೆ ನಡೆದ ಕಾಲ್ನಡಿಗೆ ಜಾಥಾ ಮನೆ ಎದುರು ಬರುತ್ತಿದ್ದಂತೆ ಶಾಸಕ ರಾಜಶೇಖರ ಪಾಟೀಲ್, ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಕುಟುಂಬ ಸಮೇತ ರಾಷ್ಟ್ರಧ್ವಜಕ್ಕೆ ಆರತಿ ಮತ್ತು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ವಿದ್ಯಾಥರ್ಿಗಳಿಗೆ ತಹಸಿಲ್ ಕಚೇರಿಯಲ್ಲಿ ಉಪಾಹಾರ ವ್ಯವಸ್ಥೆ ಮಾಡಿದರು. ಬಸವೇಶ್ವರ ಹಾಗೂ ಅಂಬೇಡ್ಕರ್ ವೃತ್ತಗಳಲ್ಲಿ ಪುರಸಭೆ ಸದಸ್ಯ ಸುನೀಲ ಪಾಟೀಲ್, ಮುಖಂಡ ಸಂತೋಷ ಪಾಟೀಲ್ ಇತರರು ಜಾಥಾಕ್ಕೆ ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿದರು. ರಸ್ತೆಯುದ್ದಕ್ಕೂ ಅಲ್ಲಲ್ಲಿ ವ್ಯಾಪಾರಸ್ಥರು, ಪ್ರಮುಖರು ಜಾಥಾಕ್ಕೆ ಸ್ವಾಗತಿಸುವುದರ ಜತೆಗೆ ಮಕ್ಕಳಿಗೆ ನೀರು, ಬಿಸ್ಕತ್, ಹಣ್ಣು, ಚಾಕ್ಲೇಟ್ ನೀಡಿ ದೇಶಪ್ರೇಮ ಮೆರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts