More

    ಜಲಗಾರರಿಂದ ಭಗೀರಥ ಪ್ರಯತ್ನ

    ರಾಯಲ್ಪಾಡು: ರಾಜ್ಯದ ಭೂಭಾಗದಲ್ಲಿ ಬಿದ್ದ ಮಳೆ ನೀರು ನೆರೆ ರಾಜ್ಯ ಆಂಧ್ರದ ಭಾಗಕ್ಕೆ ಹರಿಯುವುದನ್ನು ತಡೆದು ಸ್ಥಳೀಯ ಕೆರೆಗಳಿಗೆ ಹರಿಸಲು, ಶ್ರೀನಿವಾಸಪುರ ತಾಲೂಕಿನ ಪುಲಗೂರಕೊಟೆ ಗ್ರಾಪಂ ವ್ಯಾಪ್ತಿಯ ಜಲಗಾರರು ಭಗೀರಥ ಪ್ರಯತ್ನ ಮಾಡಿದ್ದಾರೆ.

    ಗ್ರಾಪಂನ ಕಮತಂಪಲ್ಲಿಯ ಅಡಿವಿ ಓಬಳನಾಯನ ಕೆರೆಯಿಂದ ರಾಜ್ಯದ ಸ್ಥಳೀಯ ಕೆರೆಗಳಿಗೆ ಹರಿಯಲು ಈ ಹಿಂದೆ ನಿರ್ಮಿಸಿದ್ದ ಕಾಲುವೆ ಮಣ್ಣಿನಿಂದ ಮುಚ್ಚಿಹೋಗಿದ್ದ ಕಾರಣ ಕಾಲುವೆಯ ತಾತ್ಕಾಲಿಕ ದುರಸ್ತಿಗೆ ಭಾನುವಾರ ಸ್ವಯಂ ಪ್ರೇರಣೆಯಿಂದ ಕೈ ಹಾಕಿದ ಜಗಾರರು, ಕಾಲುವೆಯಲ್ಲಿನ ಮಣ್ಣು, ಗಿಡಗಂಟಿ ತೆರವು ಮಾಡುವ ಕೆಲಸ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಗ್ರಾಪಂ ಕಾರ್ಯದರ್ಶಿ ಮುನಿಶಾಮಿರೆಡ್ಡಿ, ಜಲಗಾರರ ಸಂದ ಅಧ್ಯಕ್ಷ ಆಂಜಪ್ಪ, ಕರವಸೂಲಿಗಾರರಾದ ಗಂಗುಲಪ್ಪ, ಶಂಕರಪ್ಪ, ಬಿ.ಎಫ್.ಹರಿನಾಥ್ ಹಾಗೂ ಪಂಚಾಯಿತಿ ಸಿಬ್ಬಂದಿ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    30 ಕೆರೆಗಳು ತುಂಬಿದ್ದವು: ಕಮತಂಪಲ್ಲಿಯ ಅಡಿವಿ ಓಬಳನಾಯನ ಕೆರೆ ನೀರು ನೆರೆ ರಾಜ್ಯಕ್ಕೆ ಪೋಲಾಗುತ್ತಿದ್ದನ್ನು ಈ ಹಿಂದೆ ಜಿಪಂ ವಾಜಿ ಉಪಾಧ್ಯಕ್ಷ ಜಿ.ಸೋಮಶೇಖರ್ ಗಮನಿಸಿ ಕೆರೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಿ ಪೋಲಾಗುತ್ತಿದ್ದ ನೀರನ್ನು ತಡೆದಿದ್ದರು. ನಂತರ ಆ ನೀರನ್ನು ನಮ್ಮ ರಾಜ್ಯದ ಕೆರೆಗೆ ನೀರು ತರಲು ದೊಡ್ಡ ಪ್ರವಾಣದ ಗುಡ್ಡ ಅಡ್ಡಲಾಗಿತ್ತು. ಅದಕ್ಕೆ ಜಿಲ್ಲಾ ಪಂಚಾಯಿತಿ ಅನುದಾನ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಪಡೆದು ದೊಡ್ಡ ಗುಡ್ಡವನ್ನು ಶಿಥಿಲ ವಾಡಿ ದೊಡ್ಡ ಗಾತ್ರದ ಕಾಲುವೆ ನಿರ್ವಾಣ ವಾಡಲಾಯಿತು. ಆ ಕಾಲುವೆಯಿಂದ ಬಂದ ನೀರಿನಿಂದ ಸುವಾರು 30 ಕೆರೆಗಳು ತುಂಬಿದ್ದವು.

    ಶಾಶ್ವತ ಕಾಮಗಾರಿಗೆ ಮನವಿ: 8 ವರ್ಷದ ಹಿಂದೆ ನಾನು ಜಿಪಂ ಉಪಾಧ್ಯಕ್ಷನಾಗಿದ್ದಾಗ ಬೆಟ್ಟಗಡ್ಡಗಳ ಮಧ್ಯೆ ಕಾಲುವೆ ವಾಡಿ ರಾಜ್ಯದ ಕೆರೆಗಳಿಗೆ ಹರಿಸುವ ಪ್ರಯತ್ನ ವಾಡಿದ್ದೆ. ಈಗ ಕಾಲುವೆ ಮುಚ್ಚಿ ಹೋಗಿರುವುದರಿಂದ ಮತ್ತೆ ರಾಜ್ಯದ ನೀರು ಆಂಧ್ರಕ್ಕೆ ಹರಿಯುತ್ತಿದೆ. ಸಂಬಂದಪಟ್ಟ ಇಲಾಖೆಯು ಕಾಲುವೆಯನ್ನು ಶಾಶ್ವತವಾಗಿ ದುರಸ್ತಿಗೊಳಿಸುವ ಪ್ರಯತ್ನ ವಾಡಬೇಕು ಎಂದು ಜಿಪಂ ವಾಜಿ ಉಪಾಧ್ಯಕ್ಷ ಜಿ.ಸೋಮಶೇಖರ್ ಮನವಿ ವಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts