More

    ಜಮೀನುಗಳಿಗೆ ನುಗ್ಗಿದ ಹಿನ್ನೀರು- ಬೆಳೆ ನಷ್ಟ

    ಕೆ.ಆರ್.ಸಾಗರ: ಸಮೀಪವಿರುವ ಬಿಚನಕುಪ್ಪೆ ಗ್ರಾಮದ ರೈತರ ಜಮೀನಿಗಳಲ್ಲಿ ಹಿನ್ನೀರು ನಿಂತು ಬೆಳೆ ನಷ್ಟವಾಗಿದೆ.
    ಹೊಸ ಉಂಡವಾಡಿ-ಬಿಚನಕುಪ್ಪೆ ರಸ್ತೆಯನ್ನು ಗುತ್ತಿಗೆದಾರ ಅವೈಜ್ಞಾನಿವಾಗಿ ನಿರ್ಮಾಣ ಮಾಡಿದ ಕಾರಣ ಹಿನ್ನೀರು ಬೇರೆ ಕಡೆ ಹರಿಹದೆ ಒಂದೆಡೆ ಸಂಗ್ರಹವಾದ ಕಾರಣ 10ಕ್ಕೂ ಹೆಚ್ಚು ರೈತರ 50ಕ್ಕೂ ಹೆಚ್ಚು ಎಕರೆ ಜಮೀನಿಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ರಸ್ತೆಯ ಮೇಲ್ಭಾಗದಲ್ಲಿ ಕೂಡ ನೀರು ನಿಂತಿದೆ. ಗ್ರಾಮದ ಸ್ಮಶಾನಕ್ಕೂ ಹೋಗುವ ದಾರಿ ಕೂಡ ಜಲಾವೃತವಾಗಿದೆ.
    ನೀರಿನಿಂದ ಬೆಳೆ ಹಾಳಾಗಿರುವ ಕಾರಣ ಶ್ರೀರಂಗಪಟ್ಟಣ ತಹಸೀಲ್ದಾರ್ ಸ್ಥಳ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಗ್ರಾಮದ ರೈತ ಬೀಚನಕುಪ್ಪೆ ಮಧು ಆಗ್ರಹಿಸಿದ್ದಾರೆ. ಜಮೀನಿನಲ್ಲಿ ನೀರು ನಿಂತಿರುವ ಬಗ್ಗೆ ಸ್ಥಳ ಪರಿಶೀಲಿಸಿ ಬೆಳೆ ನಷ್ಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗಿದೆ ಎಂದು ಹುಲಿಕೆರೆ ವೃತ್ತದ ಗ್ರಾಮಲೆಕ್ಕಿಗ ರಮೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts