More

    ಜನವರಿಯೊಳಗೆ ಆತ್ಮ ನಿರ್ಭರ್ ವಿಶೇಷ ಯೋಜನೆಯಡಿ ಸಾಲದ ನೆರವು ಸಿಕ್ಕಿರಬೇಕು; ಜಿಪಂ ಸಿಇಒ ಪಿ.ಶಿವಶಂಕರ್ ಸೂಚನೆ

    ಚಿಕ್ಕಬಳ್ಳಾಪುರ: ಬೀದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ್ ವಿಶೇಷ ಯೋಜನೆ ಮತ್ತು ಕಿರು ಸಾಲಸೌಲಭ್ಯ ಯೋಜನೆಯಡಿ ತ್ವರಿತವಾಗಿ ಸಾಲ ಮಂಜೂರು ಮಾಡುವಂತೆ ಜಿಪಂ ಸಿಇಒ ಪಿ.ಶಿವಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಫಲಾನುಭವಿಗಳಿಗೆ ಜನವರಿಯೊಳಗೆ ಸಾಲದ ನೆರವು ಸಿಕ್ಕಿರಬೇಕೆಂದು ತಾಕೀತು ಮಾಡಿದರು.

    ಲಾಕ್‌ಡೌನ್ ಪರಿಣಾಮದಿಂದಾಗಿ ಬೀದಿ ಬದಿ ವ್ಯಾಪಾರಿಗಳೂ ತೊಂದರೆ ಅನುಭವಿಸಿದ್ದು, ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಯೋಜನೆ ಜಾರಿಗೊಳಿಸಿದೆ, ಈಗಾಗಲೇ ಆನ್‌ಲೈನ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಅರ್ಹರ ಖಾತೆಗೆ ಸಾಲದ ಹಣ ಜಮೆ ಮಾಡುವಂತೆ ಸೂಚಿಸಿದರು.

    ಜಿಲ್ಲೆಯ ಬೀದಿ ವ್ಯಾಪಾರಿಗಳಿಂದ 2,969 ಅರ್ಜಿಗಳನ್ನು ಸ್ವೀಕರಿಸಿದ್ದು 762 ಅರ್ಜಿಗಳಿಗೆ ಮಂಜೂರಾತಿ ದೊರಕಿದೆ. ಈ ಪೈಕಿ 322 ಅರ್ಜಿಗಳಿಗೆ ಹಣ ಬಿಡುಗಡೆಗೊಳಿಸಲಾಗಿದ್ದು, 440 ಅರ್ಜಿಗಳಿಗೆ ಹಣ ಬಿಡುಗಡೆಯಾಗಬೇಕಾಗಿದೆ. 2,207 ಅರ್ಜಿಗಳಿಗೆ ವಿವಿಧ ಬ್ಯಾಂಕ್‌ಗಳಲ್ಲಿ ಮಂಜೂರಾತಿ ನೀಡಿ ಹಣ ಬಿಡುಗಡೆಗೊಳಿಸಬೇಕಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್ ಮಾಹಿತಿ ನೀಡಿದರು.

    ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರವಾಗಿ ಕಿರು ಸಾಲ ಕೊಡಿಸಲು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ, ನಿತ್ಯ 10 ವ್ಯಾಪಾರಿಗಳನ್ನು ಬ್ಯಾಂಕ್‌ಗಳಿಗೆ ಕರೆದುಕೊಂಡು ಹೋಗಿ ಸಾಲ ಮಂಜೂರು ಮಾಡಿಸಿಕೊಡಲಾಗುತ್ತಿದೆ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಸಾದ್ ಹೇಳಿದರು.
    ಜಿಲ್ಲಾ ವ್ಯವಸ್ಥಾಪಕ ವೆಂಕಟಾಚಲಪತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts