More

    ಜನಪರ ಯೋಜನೆ ಪ್ರಚಾರಕ್ಕೆ ಬೀದಿನಾಟಕ ಆರಂಭಿಸಿ

    ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಜನಪರ ಯೋಜನೆಗಳ ಪ್ರಚಾರಕ್ಕೆ ಬೀದಿನಾಟಕ ಕಾರ್ಯಕ್ರಮಗಳನ್ನು ಕೂಡಲೆ ಆರಂಭಿಸಬೇಕು ಎಂದು ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದಿಂದ ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವಿವಿಧ ಇಲಾಖೆಗಳು ಬೀದಿನಾಟಕ ಕಲಾವಿದರ ಬಳಸಿಕೊಳ್ಳುತ್ತಿದ್ದವು. ಆದರೆ, ಕರೊನಾ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಬಂದ್ ಮಾಡಲಾಗಿದೆ. ಈ ಕಲೆಯನ್ನು ಅವಲಂಬಿಸಿ 4,500 ಕಲಾವಿದರ ಕುಟುಂಬಗಳು ಬದುಕು ಕಟ್ಟಿಕೊಂಡಿದ್ದವು. ಆದರೆ ಸದ್ಯದ ಹಂತದಲ್ಲಿ ಸರ್ಕಾರದ ಕೆಲ ಇಲಾಖೆಗಳು ಜಾಗೃತಿ ಕಾರ್ಯಕ್ರಮ ಆಯೋಜಿಸುವುದನ್ನು ನಿಲ್ಲಿಸಿವೆ. ಹಲವು ಇಲಾಖೆಗಳು 10ರಿಂದ 15ಸಾವಿರ ಕಾರ್ಯಕ್ರಮಗಳ ಬದಲಾಗಿ 500ರಿಂದ 1000 ಕಾರ್ಯಕ್ರಮಗಳಿಗೆ ಕಡಿತಗೊಳಿಸಿವೆ. ಸರ್ಕಾರದ ಜಾಗೃತಿ ಕಾರ್ಯಕ್ರಮಗಳನ್ನೇ ಅವಲಂಬಿಸಿರುವ ಬೀದಿನಾಟಕ ಕಲಾವಿದರ ಬದುಕು ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಮುಖ್ಯಮಂತ್ರಿಗಳು ಸಾಮಾಜಿಕ ಕಳಕಳಿಯುಳ್ಳವರಾಗಿದ್ದು, ಕೂಡಲೆ ಸರ್ಕಾರದ ಜನಪರ ಯೋಜನೆಗಳ ಜಾಗೃತಿಗೆ ಬೀದಿನಾಟಕ ಕಾರ್ಯಕ್ರಮಗಳನ್ನು ಆಯೋಜಿಸಲು ಕಲಾವಿದರನ್ನು ಬಳಸಿಕೊಳ್ಳುವಂತೆ ಇಲಾಖೆಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಬೀದಿನಾಟಕ ಕಲಾತಂಡಗಳ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಗುರುನಾಥ ಹುಬ್ಬಳ್ಳಿ, ಜಿಲ್ಲಾಧ್ಯಕ್ಷ ಪರಶುರಾಮ ಬಣಕಾರ, ಉಪಾಧ್ಯಕ್ಷೆ ಲತಾ ಪಾಟೀಲ, ಕಾರ್ಯದರ್ಶಿ ಬಸವರಾಜ ಕರಡಿ, ಸಹಕಾರ್ಯದರ್ಶಿ ಶಿವಕುಮಾರ ಜಾಧವ, ವೀರಯ್ಯ ಸಂಕಿನಮಠ, ಬಸವರಾಜ ಗೊಬ್ಬಿ, ಗುಡ್ಡಪ್ಪ ರ್ಬಾ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts