More

    ಚೆಕ್​ಪೋಸ್ಟ್ ತೆರವಿಗೆ ಆಕ್ಷೇಪ

    ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಜಿಲ್ಲೆಯ ಕರೊನಾ ಪೀಡಿ ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿಂದ ಅಣತಿ ದೂರದಲ್ಲಿರುವ ಕಿಮ್್ಸ ಹಿಂಭಾಗದ ಪೈ ಹೋಟೆಲ್ ಬಳಿ ಇರುವ ಚೆಕ್ ಪೋಸ್ಟ್ ತೆರವುಗೊಳಿಸಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

    ಮುಲ್ಲಾ ಓಣಿ, ಕರಾಡಿ ಓಣಿಯಲ್ಲಿ ಕರೊನಾ ಪತ್ತೆಯಾದ ಕೂಡಲೆ ಪೈ ಹೋಟೆಲ್ ವೃತ್ತದಲ್ಲಿ ಚೆಕ್​ಪೋಸ್ಟ್ ನಿರ್ವಿುಸಿ ಕಟ್ಟೆಚ್ಚರ ವಹಿಸಲಾಗಿತ್ತು. ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿ, ಒಬ್ಬ ಶಿಕ್ಷಕ ಹಾಗೂ ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ನೇಮಿಸಲಾಗಿತ್ತು. 21 ದಿನಗಳಿಂದ ಈ ಭಾಗದಲ್ಲಿ

    ಕರೊನಾ ಪ್ರಕರಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಚೆಕ್​ಪೋಸ್ಟ್ ತೆರವುಗೊಳಿಸಲಾಗಿದೆ .

    ಕಿಮ್ಸ್​ನಲ್ಲೇ ಕರೊನಾ ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಆಸ್ಪತ್ರೆಯ 2 ವಾರ್ಡ್​ಗಳನ್ನು ಸೀಲ್​ಡೌನ್ ಮಾಡಲಾಗಿದೆ. ಹೀಗಿದ್ದರೂ ಪಕ್ಕದ ಚೆಕ್​ಪೋಸ್ಟ್ ತೆರವುಗೊಳಿಸಿರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕಿಮ್್ಸ ಹಿಂದಿನ ಗೇಟ್ ಮೂಲಕ ಯಾರು ಬೇಕಾದರೂ ಮುಕ್ತವಾಗಿ ಪ್ರವೇಶಿಸ ಬಹುದು. ನಿತ್ಯ ನೂರಾರು ಜನ ಕರೊನಾ ಪರೀಕ್ಷೆಗೆಂದು ಇಲ್ಲಿಗೆ ಆಗಮಿಸುತ್ತಿದ್ದಾರೆ. ಸೂಕ್ತ ಭದ್ರತೆ ಇಲ್ಲದಂತಾಗಿದೆ.

    ಎಲ್ಲ ಚೆಕ್​ಪೋಸ್ಟ್ ತೆರವು: ಅಶೋಕನಗರ ಸೇತುವೆ, ಶಾಂತಿ ನಗರ ಚರ್ಚ್ ಬಳಿ, ಕಾರವಾರ ರಸ್ತೆ, ಗಬ್ಬೂರು ಸೇರಿ ನಗರದ ವಿವಿಧೆಡೆ ಇದ್ದ ಚೆಕ್​ಪೋಸ್ಟ್​ಗಳನ್ನು ತೆರವುಗೊಳಿಸಲಾಗಿದೆ. ಮೇ 17ರವರೆಗೆ ಲಾಕ್​ಡೌನ್ ಮುಂದುವರಿಸಿದ್ದರೂ ಚೆಕ್​ಪೋಸ್ಟ್ ತೆರವುಗೊಳಿಸುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಕಮರಿಪೇಟೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ತಪಾಸಣೆ: ಕರೊನಾ ಸೋಂಕಿತರಿಂದ ಸೀಲ್​ಡೌನ್ ಆಗಿರುವ ಕಮರಿಪೇಟ ಪೊಲೀಸ್ ಠಾಣೆ ಎದುರು ಆರೋಗ್ಯ ಇಲಾಖೆ ಸಿಬ್ಬಂದಿ ಶನಿವಾರ ಥರ್ಮಲ್ ಸ್ಕ್ರೀನಿಂಗ್ ಮೂಲಕ ನೂರಾರು ಜನರ ಆರೋಗ್ಯ ತಪಾಸಣೆ ನಡೆಸಿದರು. ಸ್ವಯಂಪ್ರೇರಣೆಯಿಂದ ಠಾಣೆ ಬಳಿ ಬಂದ ಮಹಿಳೆಯರು, ಮಕ್ಕಳು ಥರ್ಮಲ್ ಸ್ಕ್ರೀನಿಂಗ್ ಮೂಲಕ ಜ್ವರ ತಪಾಸಣೆ ಮಾಡಿಸಿಕೊಂಡರು. ಜ್ವರ, ನೆಗಡಿ, ಕೆಮ್ಮು ಲಕ್ಷಣಗಳು ಇವೆಯಾ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ, ಹೆಸರು, ವಿಳಾಸ ನೋಂದಾಯಿಸಿಕೊಂಡರು. ಇಲ್ಲಿನ ಮಿರ್ಜಾನಕರ ಪೆಟ್ರೋಲ್ ಬಂಕ್​ನಿಂದ ಬಂಕಾಪುರ ಚೌಕವರೆಗೆ ಸೀಲ್​ಡೌನ್ ಮಾಡಲಾಗಿತ್ತು. ಶನಿವಾರ ಮಿರ್ಜಾನಕರ ಪೆಟ್ರೋಲ್ ಬಂಕ್ ಬಳಿ ಒಂದೆರಡು ಬ್ಯಾರಿಕೇಡ್ ತೆರವುಗೊಳಿಸಿದ್ದರಿಂದ ಕಾರು, ಬೈಕ್ ಸಂಚಾರ ಹೆಚ್ಚಾಗಿತ್ತು. ಅಲ್ಲಿ ತೆರವುಗೊಳಿಸಿ ಗವಿ ಮೊಹಲ್ಲಾದ ಬಳಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ. ಆದರೂ ಜನರ ಓಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಶ್ವಾಪುರದಲ್ಲಿ ರಸ್ತೆಬದಿ ಶನಿವಾರ ಮಾವಿನ ಹಣ್ಣು, ತರಕಾರಿ, ಕಿರಾಣಿ ಸಾಮಗ್ರಿ ಖರೀದಿ ಭರಾಟೆ ಜೋರಾಗಿತ್ತು. ಹಲವರು ಪರಸ್ಪರ ಅಂತರವಿಲ್ಲದೆ ಖರೀದಿಗೆ ಮುಗಿಬಿದ್ದದ್ದು ಕಂಡು ಬಂತು. ಸೀಲ್​ಡೌನ್ ಪ್ರದೇಶಗಳಾದ ಆಜಾದ್ ಕಾಲನಿ, ಶಾಂತಿನಗರದಲ್ಲೂ ಜನರ ಓಡಾಟ ಹೆಚ್ಚಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts