More

    ಚೆಕ್​ಪೋಸ್ಟ್​ನಲ್ಲಿ ಶಿಕ್ಷಕರ ನಿಯೋಜನೆ

    ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ಕರೊನಾ ಲಾಕ್ ಡೌನ್ ಯಶಸ್ವಿಯಾಗಿ ನಡೆಸಬೇಕೆನ್ನುವ ಉದ್ದೇಶದಿಂದ ಹೊರಗಿನಿಂದ ಯಾರೂ ತಾಲೂಕಿಗೆ ಬರಬಾರದೆನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಾಲೂಕಿನ ಮೂರು ಚೆಕ್ ಪೋಸ್ಟ್​ನಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿದ್ದು, ಹೆಚ್ಚುವರಿಯಾಗಿ ಶಿಕ್ಷಕರನ್ನು ನೇಮಕ ಮಾಡಿದೆ.

    ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆಯ್ದ 50 ಶಿಕ್ಷಕರು ಚೆಕ್​ಪೋಸ್ಟ್​ನಲ್ಲಿ ಕಾರ್ಯನಿರ್ವಹಿಸಲು ಸಿದ್ಧರಾಗಿದ್ದಾರೆ.

    ಕೆಲವು ಶಿಕ್ಷಕರು ತಮ್ಮ ತಮ್ಮ ಊರುಗಳಿಗೆ ತೆರಳಿ ದ್ದರು. ಇನ್ನು ಕೆಲವರು ಪಟ್ಟಣದಲ್ಲಿಯೇ ವಾಸ ವಾಗಿದ್ದರು. ಊರಿಗೆ ತೆರಳಿದ ಹಾಗೂ ಪಟ್ಟಣದಲ್ಲಿರುವ ಕೆಲವು ಶಿಕ್ಷಕರಿಗೆ ಚೆಕ್​ಪೊಸ್ಟ್​ನಲ್ಲಿ ಕಾರ್ಯನಿರ್ವಹಿಸುವುದಕ್ಕೆ ತಿಳಿಸಿದ್ದರಿಂದ ಊರಿಗೆ ತೆರಳಿದ ಶಿಕ್ಷಕರು ಮಂಗಳವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಶಿವಮೊಗ್ಗ ಹಾಗೂ ಉತ್ತರ ಕನ್ನಡ ಗಡಿ ಭಾಗವಾದ ಚೂರಿಕಟ್ಟೆ, ಘಟ್ಟದ ಕೆಳಗೆ ಹಾಗೂ ಘಟ್ಟದ ಮೇಲಿನ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಮಾವಿನಗುಂಡಿ ಹಾಗೂ ಸಿದ್ದಾಪುರ ಮತ್ತು ಸೊರಬ ತಾಲೂಕಿನ ಗಡಿಯಾಗಿರುವ ಶಿರಳಗಿ ಚೆಕ್​ಪೋಸ್ಟ್ ನಲ್ಲಿ ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು ಹಾಗೂ ಹೋಂಗಾರ್ಡ್ ಇವರು ನಿತ್ಯ ಮೂರು ಶಿಫ್ಟ್ (ಪಾಳಿ)ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಿಯೋಜನೆಗೊಂಡ ಶಿಕ್ಷಕರು ಮೂರು ದಿನಕ್ಕೊಮ್ಮೆ ಚೆಕ್ ಪೋಸ್ಟ್​ನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಉಳಿದ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಿಬ್ಬಂದಿ ನಿತ್ಯವೂ ಶಿಫ್ಟ್ (ಪಾಳಿ)ಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.

    ಒಳ ಬರುವ ಹಾಗೂ ಹೊರಗೆ ಹೋಗುವ ವಾಹನದ ನಂಬರ್, ಪರವಾನಗಿ ಇದೆಯೋ ಇಲ್ಲವೋ ಎನ್ನುವುದರ ಕುರಿತು, ದೂರವಾಣಿ ಸಂಖ್ಯೆ ರಜಿಸ್ಟರ್​ನಲ್ಲಿ ಬರೆಯಲಾಗುತ್ತಿದೆ. ಅದರ ಮಾಹಿತಿಯನ್ನು ನಿತ್ಯ ಸಂಜೆ 4 ಗಂಟೆಗೆ ಚೆಕ್ ಪೋಸ್ಟ್ ನಿಂದ ಪಡೆದು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗುತ್ತದೆ. ಅನಗತ್ಯವಾಗಿ ಓಡಾಡುವವರ ಮೇಲೆ ಹಾಗೂ ಸಂಚರಿಸುವ ವಾಹನದ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. | ಮಂಜುಳಾ ಎಸ್. ಭಜಂತ್ರಿ ತಹಸೀಲ್ದಾರ್

    ಚೆಕ್ ಪೋಸ್ಟ್​ನಲ್ಲಿ ಕಾರ್ಯನಿರ್ವಹಿಸಲು ಶಿಕ್ಷಕರನ್ನು ಮಾತ್ರ ನಿಯೋಜನೆ ಮಾಡಲಾಗಿದೆ. ನಿಯೋಜನೆಗೊಂಡ ಎಲ್ಲ ಶಿಕ್ಷಕರು ಮಂಗಳವಾರ ಹಾಜರಾಗಿದ್ದು ಅವರಿಗೆ ಅಧಿಕೃತವಾಗಿ ಪಾಸ್ ನೀಡಲಾಗಿದೆ. | ಸದಾನಂದ ಸ್ವಾಮಿ ಬಿಇಒ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts