More

    ಚೆಕ್‌ಪೋಸ್ಟ್‌ಗಳ ಮೇಲೂ ಹದ್ದಿನಕಣ್ಣು

    ಚಿತ್ರದುರ್ಗ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ ಸ್ಥಾಪಿಸಿರುವ ಅಂತರ್‌ರಾಜ್ಯಗಡಿ ಹಾಗೂ ಅಂತರ್ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿಯ ವಿದ್ಯಾಮಾನಗಳ ಮೇಲಿನ ನಿಗಾಕ್ಕೆ ಜಿಲ್ಲಾಚುನಾವಣಾಧಿಕಾರಿ ಹಾಗೂ ರಾಜ್ಯಚುನಾವಣಾಧಿಕಾರಿ ಕಚೇರಿ ಗಳು ಹದ್ದಿನಕಣ್ಣಿಟ್ಟಿವೆ.
    ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಯಾವುದೇ ಚೆಕ್‌ಪೋಸ್ಟ್‌ನಲ್ಲಿ ಏನೂ ನಡೆಯುತ್ತಿದೆ ಎಂಬುದನ್ನು ಅರಿಯಲು ವೆಬ್‌ಕಾ ಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ರಾಜದ ಪ್ರತಿ ಜಿಲ್ಲಾಕೇಂದ್ರದಲ್ಲೂ ಚುನಾವಣಾ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಇಲ್ಲಿ 28-30 ಅಧಿಕಾರಿ,ಸಿಬ್ಬಂದಿ 24/7 ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ.
    ಜಿಲ್ಲಾ ಸಹಾಯವಾಣಿ ಸಂಖ್ಯೆಗೆ ಬರುವಂಥ ದೂರುಗಳ ನಿರ್ವಹಣೆ,ಸಿ-ವಿಜಿಲ್ ಆ್ಯಪ್,ಜಿಲ್ಲಾ ಸಂಚಾರಿ ಜಾಗೃತದಳ(ಎಫ್‌ಎಸ್ ಎಲ್‌ಟಿ),ಚೆಕ್‌ಪೋಸ್ಟ್‌ಗಳು,ಸುವಿಧಾ-ವಾಹನ,ಹೆಲಿಕಾಫ್ಟರ್ ಹಾರಾಟ ಮತ್ತಿತರ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಅನುಮತಿಗಾಗಿ ಏಕಾಗವಾಕ್ಷಿ ಹಾಗೂ ಸೀಜರ್(ಇಎಸ್‌ಎಂಎಸ್)ತಂಡಗಳ ಚಟುವಟಿಕೆಗಳೆಡೆ ಹಾಗೂ ಜಿಪಿಎಸ್ ಅಳವಡಿಸಿ ವಾಹನಗಳ ಸಂಚಾರದ ಈ ನಿಯಂತ್ರಣ ಕೊಠಡಿ ಕಣ್ಗಾವಲು ಇಟ್ಟಿರುತ್ತದೆ.
    ಹೊರರಾಜ್ಯಗಳಿಂದ ರಾಜ್ಯಕ್ಕೆ ಬರಬಹುದಾದ ಅಕ್ರಮ ಮದ್ಯ,ಹಣ,ವಿವಿಧ ವಸ್ತಗಳ ಅಕ್ರಮ ಸಾಗಾಟಕ್ಕೆ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು, ರಾಜ್ಯದ ವಿವಿಧ ಗಡಿಗಳಿಗೆ ಹೊಂದಿಕೊಂಡಿರುವ ಚೆಕ್ ಪೋಸ್ಟ್‌ಗಳ ಸಹಿತ ಸಾವಿರಾರು ಚೆಕ್‌ಪೋಸ್ಟ್‌ಗಳನ್ನು ರಾಜ್ಯ ದಲ್ಲಿ ಸ್ಥಾಪಿಸಲಾಗಿದೆ. ಪ್ರತಿಚೆಕ್‌ಪೋಸ್ಟ್‌ನಲ್ಲಿ ಸಿಸಿ ಕ್ಯಾಮರಾಗಳು,ವಿಡಿಯೊ ಸರ್ವಲೈನ್ಸ್ ಟೀಂ,ಪೊಲೀಸ್,ಕಂದಾಯ ಮತ್ತಿತರ ಇಲಾಖೆ ಸಿಬ್ಬಂದಿ ನಿಯೋ ಜಿತರಾಗಿದ್ದು,ಮುಂದೆ ಇಲ್ಲಿಗೆ ಅರೆಸೇನಾ ಸಿಬ್ಬಂದಿ ನಿಯೋಜಿಸುವ ಸಾಧ್ಯತೆ ಇದೆ.
    ಡಿಜಿಟಿಟಲ್ ವ್ಯವಹಾರದ ಮೇಲೂ ನಿಗಾ
    ಯುಪಿಐ ಪಾವತಿ ಮೇಲೂ ನಿಗಾ ವಹಿಸಲಾಗಿದೆ. ಪ್ರತಿ ಜಿಲ್ಲೆ ಲೀಡ್‌ಬ್ಯಾಂಕ್ ಅಧಿಕಾರಿಗಳು ಶಂಕಾಸ್ಪದ ಪಾವತಿ,ಏಕಕಾಲಕ್ಕೆ ಹಲವು ಖಾತೆಗಳಿಗೆ ಹಣ ಜಮಾ ಆಗುವುದು,ಸಾಕಷ್ಟು ಮೊತ್ತದ ವರ್ಗಾವಣೆ ಇತ್ಯಾದಿ ಬ್ಯಾಂಕಿಂಗ್ ವಹಿವಾಟಿನ ಮೇಲೆ ನಿಗಾ ಇಟ್ಟಿದ್ದಾರೆ.ಆಯಾ ಜಿಲ್ಲೆಯ ಬ್ಯಾಂಕಿಂಗ್‌ನಲ್ಲಿ ನಡೆಯುವಂಥ ಅನುಮಾನಸ್ಪದ ದೈನಂದಿನ ವಹಿವಾಟು ವರದಿಯನ್ನು ಡಿಇಒಗೆ ರವಾನಿಸುವ ವ್ಯವಸ್ಥೆ ಕೂಡ ಆಗಿದೆ.


    ಕೋಟ್
    ಅಂತರ್‌ರಾಜ್ಯಗಡಿಯ 8 ಸೇರಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 36 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲಿಯ ಚಟುವಟಿಕೆ ಗ ಳನ್ನು ಮೊಬೈಲ್ ಮೂಲಕವೂ ನೇರವಾಗಿ ವೀಕ್ಷಿಸಲು ಸಾಧ್ಯವಿದೆ. ನಮ್ಮ ಎಆರ್‌ಒಗಳು ಕೂಡ ಗಮನಿಸುತ್ತಾರೆ. ರಾಜ್ಯಚುನಾವಣಾ ಕ ಚೇರಿ ಅಧಿಕಾರಿಗಳು ನೇರವಾಗಿ ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದರೆ 1950 ಅಥವಾ 08194200959ಗೆ ಕರೆ ಮಾಡಿ ತಿಳಿಸಬಹುದು. ಸಿ-ವಿಜಿಲ್ ಆ್ಯಪ್‌ಮೂಲಕವೂ ಮಾಹಿತಿ ಕೊಡಬಹುದು.
    ಟಿ.ವೆಂಕಟೇಶ್,ಜಿಲ್ಲಾ ಚುನಾವಣಾಧಿಕಾರಿ,ಜಿಲ್ಲಾಧಿಕಾರಿ,ಚಿತ್ರದುರ್ಗ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts