More

    ಚಿಕ್ಕಬಳ್ಳಾಪುರದಲ್ಲಿ ಮಾಸ್ಕ್ ಧರಸಿದಿದ್ರೆ 100 ರೂ.ದಂಡ

    ಚಿಕ್ಕಬಳ್ಳಾಪುರ: ಕರೊನಾ ಸೋಂಕಿನ ಭಯದ ನಡುವೆಯೂ ಮಾಸ್ಕ್ ಧರಿಸದೇ ರಾಜಾರೋಷವಾಗಿ ಅಡ್ಡಾಡುತ್ತಿರುವವರಿಗೆ ಇಲ್ಲಿನ ನಗರಸಭೆ ದಂಡ ವಿಧಿಸುವ ಮೂಲಕ ಪಾಠ ಕಲಿಸುತ್ತಿದೆ.

    ನಗರದಲ್ಲಿ ಎರಡು ದಿನಗಳಲ್ಲಿ 73 ಮಂದಿಗೆ ತಲಾ 100 ರೂ.ದಂಡ ವಿಧಿಸಲಾಗಿದೆ ಎಂದು ಪೌರಾಯುಕ್ತ ಲೋಹಿತ್ ಧನುಂಜಯ ತಿಳಿಸಿದ್ದಾರೆ.

    ನಗರದ ಎಲ್ಲ 31 ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಮೇ 3 ರಿಂದ ಮೂರನೇ ಹಂತಕ್ಕೆ ಲಾಕ್‌ಡೌನ್ ವಿಸ್ತರಣೆಯಾಗಿದ್ದು ಅಗತ್ಯವಸ್ತು ಮತ್ತು ತುರ್ತು ಸೇವೆಯ ಜತೆಗೆ ಇತರ ವಾಣಿಜ್ಯ ಚಟುವಟಿಕೆಗೆ ಷರತ್ತುಬದ್ಧ ಅವಕಾಶ ನೀಡಲಾಗುತ್ತಿದೆ. ಇದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಆದರೆ, ನಿಯಮ ಉಲ್ಲಂಘಿಸುತ್ತಿದ್ದು ದಂಡ ವಿಧಿಸಲಾಗುತ್ತಿದೆ.

    ವಿವಿಧೆಡೆ ಕಾರ್ಯಾಚರಣೆ :ನಗರದ ಗಂಗಮ್ಮನಗುಡಿ ರಸ್ತೆ, ಭುವನೇಶ್ವರಿ ವೃತ್ತ, ಬಜಾರ್ ರಸ್ತೆ ಸೇರಿ ಹಲವೆಡೆ ನೋಡಲ್ ಅಧಿಕಾರಿ ಎನ್.ಭಾಸ್ಕರ್ ನೇತೃತ್ವದಲ್ಲಿ ಪೊಲೀಸರು, ಪೌರಾಯುಕ್ತ, ಆರೋಗ್ಯ ನಿರೀಕ್ಷಕರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದೆ. ಮಾಸ್ಕ್ ಧರಿಸದಿರುವವರಿಗೆ ಸೋಂಕು ಹರಡುವಿಕೆಯ ಅರಿವು ಮೂಡಿಸಿ, ತಲಾ 100 ರೂ ದಂಡ ವಿಧಿಸಲಾಗಿದೆ.

    ಕರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಜನರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಅನವಶ್ಯಕವಾಗಿ ಓಡಾಡಬಾರದು. ಹೊರ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುತ್ತದೆ.
    ಲೋಹಿತ್ ಧನುಂಜಯ, ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts