More

    ಚಂದ್ರಾಸಿಂಗರಿಂದ ಬಿರುಸಿನ ಮತಯಾಚನೆ

    ಬೀದರ: ಪಕ್ಷೇತರ ಅಭ್ಯರ್ಥಿಯಾದ ಚಂದ್ರಾಸಿಂಗ ಅವರು ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಬಿರುಸಿನಿಂದ ಮತಯಾಚನೆ ನಡೆಸಿದರು.
    ಕಾಂಗ್ರೆಸ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಚಂದ್ರಾಸಿಂಗ ಅವರು. ತಮಗೆ ಚುನಾವಣಾ ಆಯೋಗವು ನೀಡಿರುವ ಕ್ರಮ ಸಂಖ್ಯೆ 9ರ ವಿದ್ಯುತ್ ಕಂಬದ ಗುರುತಿಗೆ ಮತ ನೀಡುವಂತೆ ಮತದಾರರ ಮನವೊಲಿಸಿದರು.
    ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೋಸ್ಕರ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತದಾರರು ಆಶೀರ್ವಾದ ಮಾಡಬೇಕೆಂದರು.
    ಹೋದಲ್ಲೆಲ್ಲ ಅತ್ಯುತ್ತಮವಾಗಿ ಮತದಾರರು ನನಗೆ ಸ್ಪಂದಿಸುತ್ತಿದ್ದಾರೆ. ಕ್ಷೇತ್ರದ ಜನತೆ ನನ್ನೊಂದಿಗೆ ಇದ್ದಾರೆ. ವಿದ್ಯುತ ಕಂಬದ ಗುರುತಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಪಕ್ಷೇತರ ಅಭ್ಯರ್ಥಿ ಚಂದ್ರಾಸಿಂಗ ವ್ಯಕ್ತಪಡಿಸಿದ್ದಾರೆ.
    ಕ್ಷೇತ್ರದ ನಿರ್ಣಾ ಹೋಬಳಿ ವ್ಯಾಪ್ತಿಯ ಭಾದಲಾಪುರ. ಮದರಗಿ, ಗುಡಿ ತಾಂಡಾ, ಗೋವಿಂದ ತಾಂಡಾ, ಮುತ್ತಂಗಿ, ನಿರ್ಣಾ ವಾಡಿ, ನಿರ್ಣಾ, ಉಡಬಾಳ, ಬನ್ನಳ್ಳಿ, ನಾಗನಕೇರಾ, ಮಂಗಲರಿ ಗ್ರಾಮಗಳಲ್ಲಿ ಚಂದ್ರಾಸಿಂಗ ಅವರು ಮತಯಾಚನೆ ಮಾಡಿದರು.
    ಈ ಸಂಧರ್ಭದಲ್ಲಿ ಚಂದ್ರಸಿಂಗ್ ಅವರ ಅಭಿಮಾನಿ ಬಳಗದವರು. ಕಾರ್ಯಕರ್ತರು,. ವಿವಿಧ ಗ್ರಾಮಗಳ ಹಿರಿಯ ಮುಖಂಡರು. ಯುವ ನಾಯಕರು. ಗ್ರಾಮ ಪಂಚಾಯತ ಸದಸ್ಯರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts