More

    ಚಂಡಿಕಾಯಾಗದಿಂದ ದೈವಿಗುಣಗಳು ಸಮೃದ್ಧಿ : ಕನ್ನೂರು ಶ್ರೀ

    ವಿಜಯಪುರ : ಚಂಡಿಕಾಯಾಗಕ್ಕೆ ಭಾರತೀಯ ಪರಂಪರೆಯಲ್ಲಿ ಪವಿತ್ರ ಸ್ಥಾನವಿದೆ ಎಂದು ಗುರುಮಠದ ಶ್ರೀ ಸೋಮನಾಥ ಶಿವಾಚಾರ್ಯರು ಹೇಳಿದರು.
    ತಾಲೂಕಿನ ಕನ್ನೂರಿನ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಮಂಗಳವಾರ ಹಮ್ಮಿಕೊಂಡಿದ್ದ ಚಂಡಿಕಾಯಾಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಋಷಿಮುನಿಗಳ ಕಾಲದಿಂದಲೂ ಇಲ್ಲಿಯವರೆಗೆ ಪ್ರಕೃತಿ ಅಸಮತೋಲನ ಕಾಡುತ್ತಿದೆ. ಭೀಕರ ಬರಗಾಲದ ಸಮಯದಲ್ಲಿ ಜಗತ್ತಿನಲ್ಲಿ ಅಶಾಂತಿ ತಾಂಡವಾಡುತ್ತಿರುವ ಘಟ್ಟದಲ್ಲಿ ಯಜ್ಞ ಯಾಗಗಳ ಮುಖಾಂತರ ಪ್ರಕೃತಿಯ ಶುದ್ಧೀಕರಣ ಅಗತ್ಯ. ಅದಕ್ಕಾಗಿ ಲೋಕಕಲ್ಯಾಣಾರ್ಥವಾಗಿ ಶಾಂತಿ, ಸಮೃದ್ಧಿಗೋಸ್ಕರ ಯಾಗಗಳನ್ನು ಮಾಡುವ ಪರಂಪರೆ ಭಾರತೀಯ ಸನಾತನ ಪರಂಪರೆಯಾಗಿದೆ ಎಂದರು.
    ಪ್ರತಿಯೊಬ್ಬ ಮನುಷ್ಯನು ತಮ್ಮ ದೇಹದಲ್ಲಿರುವ ಅಹಂಕಾರ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಸ್ವಾರ್ಥ, ದುರಾಚಾರ, ಅಧರ್ಮದ ಹಾದಿಯನ್ನು ಬಿಡುವಂತೆ ಆಗಬೇಕು. ದುರ್ಗಾಷ್ಟಮಿ ಶುಭದಿನದಂದು ಚಂಡಿಕಾಯಾಗ ಮಾಡುವ ಮುಖಾಂತರ ಪ್ರೀತಿ, ತ್ಯಾಗ, ಸ್ನೇಹ, ವಾತ್ಸಲ್ಯ, ಮಮತೆ, ಕರುಣೆಯನ್ನು ಹೆಚ್ಚಿಸಿಕೊಳ್ಳಬೇಕು. ಪ್ರತಿ ಮನೆ-ಮನೆಯಲ್ಲಿಯೂ ಸ್ತ್ರೀಯರನ್ನು ಗೌರವಿಸಬೇಕು. ಆಗ ಮಾತ್ರ ನವರಾತ್ರಿ ಉತ್ಸವ ಮಾಡಿದರೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
    ದೇವಿಯ ಆರಾಧನೆ, ಉಪಾಸನೆಗಳ ಮುಖಾಂತರ ದೈವತ್ವದ ಸಾಮಿಪ್ಯವನ್ನು ಪ್ರತಿಯೊಬ್ಬ ಮಾನವನ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ಮನುಷ್ಯನ ಅಸುರೀಗುಣಗಳನ್ನೂ ದೂರೀಕರಿಸಿ, ದೈವೀಗುಣಗಳನ್ನು ಸಮೃದ್ಧಿಗೊಳಿಸಬೇಕು. ಚಂಡಿಕಾಯಾಗ ಪೂಜೆಯಲ್ಲಿ ಪಾಲ್ಗೊಳ್ಳುವ ಮುಖಾಂತರ ಮಾಟ-ಮಂತ್ರ ವಾಮಾಚಾರ ಪ್ರಯೋಗಗಳ ಬಾಧೆ ನಿವಾರಿಸಿಕೊಳ್ಳಬಹುದು. ಅಪಮೃತ್ಯು, ಗಂಡಾಂತರ, ದೋಷ ಪರಿಹಾರದ ಮುಖಾಂತರ ಆಯುಷ್ಯವೃದ್ಧಿ, ಆರೋಗ್ಯವೃದ್ಧಿ, ಸಕಲ ಸಮೃದ್ಧಿಯನ್ನು ಪಡೆದುಕೊಳ್ಳಬಹುದು ಎಂದರು.
    ಬಂಜಾರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಎಲ್.ಚವಾಣ್, ಸಂಜಯಗೌಡ ಪಾಟೀಲ (ಕನಮಡಿ), ಎ.ಟಿ.ಹಿರೇಮಠ, ಮುತ್ತನಗೌಡ ಪಾಟೀಲ, ಸಂಜೀವಕುಮಾರ ಯಾದವಾಡ, ಅಪ್ಪು ಬೆಳ್ಳುಂಡಗಿ, ಕಲ್ಲಪ್ಪ ಬೆಳ್ಳುಂಡಗಿ, ಶ್ರೀಕಾಂತ ಹಾವಿನಾಳ, ಶಿವಾನಂದ ಡೊಳ್ಳಿ, ಪ್ರಕಾಶ್ ವನದುರ್ಗಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts