More

    ‘ಗ್ಯಾರಂಟಿ’ ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ


    ಚಿತ್ರದುರ್ಗ: ಕಾಂಗ್ರೆಸ್‌ನ c ಯೋಜನೆಗಳು ರಾಜ್ಯದ ಜನರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ಆಗಿವೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಕಿಡಿ ಕಾರಿದರು.

    ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರನ್ನು ಭಿಕ್ಷಾಟನೆ ಸರದಿಗೆ ನಿಲ್ಲಿಸಲು ಕಾಂಗ್ರೆಸ್ ಹೊರಟಿದೆ. ಮತದಾರರಿಗೆ ಆಮಿಷವೊಡ್ಡಿ ಷಡ್ಯಂತ್ರದ ಮೂಲಕ ಅಧಿಕಾರ ಪಡೆದಿದೆ ಎಂದು ದೂರಿದರು.

    ಸಿದ್ಧಾಂತದಿಂದ ಗೆದ್ದಿದ್ದೇವೆಂದು ಹೇಳುವ ಎದೆಗಾರಿಕೆ ಯಾವ ಕಾಂಗ್ರೆಸಿಗರಿಗೂ ಇಲ್ಲ. 100 ವರ್ಷದ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಈ ಮೂಲಕ ಮಸಿ ಬಳಿಯುವ ಕೆಲಸ ಮಾಡಲಾಗಿದೆ. ಕಾಂಗ್ರೆಸ್ ನಾಯಕರು ಸ್ವಾತಂತ್ರೃ ಹೋರಾಟಗಾರರ ಕನಸನ್ನು ನುಚ್ಚುನೂರರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

    ರಾಜ್ಯದ ಸಚಿವರಿಗೆ ಪ್ರಕೃತಿ ವಿಕೋಪದ ಬಗ್ಗೆ ಗಮನ ಹರಿಸಲು ಸಮಯವಿಲ್ಲ. ಕಳೆದ 15 ದಿನಗಳಿಂದ ಗ್ಯಾರಂಟಿ ಕುರಿತು ಚರ್ಚೆ ಮಾಡುತ್ತಿದ್ದಾರೆಯೇ ಹೊರತು ರೈತರು, ಜನಸಾಮಾನ್ಯರಿಗೆ ಅನುಕೂಲವಾಗುವ ನೀರಾವರಿ ಕುರಿತು ಯೋಚಿಸುತ್ತಿಲ್ಲ. ನಾಡಿನಲ್ಲಿ ಸರ್ವತೋಮುಖ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಟೀಕಿಸಿದರು.

    ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ನೀಡಿರುವ ‘ಗ್ಯಾರಂಟಿ’ ಪತ್ರಗಳು ಎಲ್ಲರ ಬಳಿ ಇವೆ. ಅವರೇ ರುಜು ಮಾಡಿಕೊಟ್ಟಿದ್ದಾರೆ. ಷರತ್ತುಗಳಿಲ್ಲದೆ ಈಡೇರಿಸಬೇಕು ಎಂದು ಒತ್ತಾಯಿಸಿದ ಸಚಿವರು, ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆಂದು ಹೇಳುವ ಕಾಂಗ್ರೆಸಿಗರು ಅದಕ್ಕೆ ತಕ್ಕ ಸಾಕ್ಷೃ ನೀಡಬೇಕು. ಸಾಕ್ಷೃ ಒದಗಿಸಿದರೆ ನಾನು ಕ್ಷಮೆ ಕೇಳುತ್ತೇವೆ, ಇಲ್ಲವೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಸವಾಲು ಹಾಕಿದರು. ಎಂಎಲ್ಸಿ ಕೆ.ಎಸ್.ನವೀನ್, ಮುಖಂಡ ಜಿ.ಎಂ.ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts