More

    ಗೋಡೆ ನಿರ್ಮಿಸದಿದ್ದರೆ ಅಪಾಯಕ್ಕೆ ತಡೆಯಿಲ್ಲ

    ಎನ್.ಮುನಿವೆಂಕಟೇಗೌಡ ಕೋಲಾರ
    ಜಿಲ್ಲೆಯ ಬಹುತೇಕ ಕೆರೆಗಳ ಏರಿ ಮೇಲೆ ಹೋಗುವ ಪ್ರಮುಖ ರಸ್ತೆಗಳಿಗೆ ತಡೆಗೋಡೆ ಇಲ್ಲದಿರುವುದರಿಂದ ವಾಹನ ಸವಾರರು ಪ್ರಾಣಭಯದಲ್ಲಿ ಸಂಚರಿಸುವಂತಾಗಿದೆ.
    ಕೆಸಿ ವ್ಯಾಲಿ ನೀರು ಬಂದ ಬಳಿಕ ಹಾಗೂ ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಜಿಲ್ಲೆಯ ಬಹುತೇಕ ಕೆರೆಗಳು ಕೋಡಿ ಹರಿದಿದ್ದವು. ಜಿಲ್ಲೆಯಲ್ಲಿ ಹಲವು ಕೆರೆಗಳ ಏರಿ ಮೇಲೆಯೇ ಪ್ರಮುಖ ರಸ್ತೆಗಳು ಹಾದು ಹೋಗುತ್ತಿವೆ. ಆದರೆ ಶೇ.80 ಕೆರೆಗಳ ಏರಿ ಮೇಲೆ ಹೋಗುವ ರಸ್ತೆಗಳಿಗೆ ತಡೆಗೋಡೆಗಳನ್ನೇ ನಿರ್ಮಿಸಿಲ್ಲ. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಿಸುವಾಗ ಹಾಗೂ ದುರಸ್ತಿಗೊಳಿಸುವಾಗ ರಸ್ತೆ ನಿಯಮಗಳನ್ನು ಪಾಲನೆ ಮಾಡದೆ ಗುತ್ತಿಗೆದಾರರಿಂದ ಕಾಮಗಾರಿ ಮಾಡಲಾಗಿದೆ. ಇದರಿಂದ ಬಹುತೇಕ ರಸ್ತೆಗಳಿಗೆ ತಡೆಗೋಡೆಗಳು ಇಲ್ಲದಂತಾಗಿದೆ.

    ಬಂಗಾರಪೇಟೆಯಿಂದ ಕೆಜಿಎಫ್‌ಗೆ ಹೋಗುವ ರಾಜ್ಯ ಹೆದ್ದಾರಿ ಎಸ್.ಎಚ್.-95 ರಲ್ಲೂ ಬಂಗಾರಪೇಟೆ ಹೊರವಲಯದ ದೇಶಿಹಳ್ಳಿ ಕೆರೆಗೆ ತಡೆಗೋಡೆ ನಿರ್ಮಿಸಿಲ್ಲ. ಬಂಗಾರಪೇಟೆ ಪಟ್ಟಣದ ದೊಡ್ಡ ಕೆರೆಯ ಮೇಲೆ ಕೆರೆ ಕೋಡಿ ಬಡಾವಣೆಗೆ ರಸ್ತೆ ನಿರ್ಮಿಸಿದ್ದರೂ ಅದಕ್ಕೂ ತಡೆಗೋಡೆ ನಿರ್ಮಾಣವಾಗಿಲ್ಲ. ಕಾಮಸಮುದ್ರದಿಂದ ತೊಪ್ಪನಹಳ್ಳಿಗೆ ಹೋಗುವ ಅಂತರ್ ರಾಜ್ಯ ರಸ್ತೆಯಲ್ಲಿ ಪೆದ್ದಬೊಂಪಲ್ಲಿ ಸಮೀಪದ ಕೆರೆ ಹಾಗೂ ಶ್ರೀನಿವಾಸಪುರದಿಂದ ನಂಬಿಹಳ್ಳಿಗೆ, ನಂಬಿಹಳ್ಳಿಯಿಂದ ಪಾಳ್ಯಕ್ಕೆ ಹಾಗೂ ಗೌಡಹಳ್ಳಿಯಿಂದ ಕೆಂಬತ್ತನಹಳ್ಳಿಗೆ ಹೋಗುವ ರಸ್ತೆಗಳನ್ನು ಹೊಸದಾಗಿ ನಿರ್ಮಿಸಿದರೂ ತಡೆಗೋಡೆ ನಿರ್ಮಿಸಿಲ್ಲ.

    ಸಾರಿಗೆ ಬಸ್ ಹಾಗೂ ನಾಲ್ಕು ಚಕ್ರ, ದ್ವಿಚಕ್ರ ವಾಹನಗಳು ಕೆರೆ ಮತ್ತು ಕಟ್ಟೆಯಿಂದ ಕೆಳಗೆ ಉರುಳಿ ಬಿದ್ದು ಪ್ರಯಾಣಿಕರು ಸಾವಿಗೀಡಾಗಿರುವ ಪ್ರಕರಣಗಳು ದಾಖಲಾಗಿವೆ. ಇಷ್ಟಾದರೂ ಈವರೆಗೂ ಕೆರೆ ಏರಿಯ ಅಪಾಯಕಾರಿ ರಸ್ತೆಗಳಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಸೂಚನಾ ಲಕಗಳನ್ನು ಅಳವಡಿಸದೆ ಜನರ ಜೀವದ ಜತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ರಾತ್ರಿ ಶ್ರೀರಂಗಪಟ್ಟಣ ತಾಲೂಕು ಗ್ರಾಮನಹಳ್ಳಿ ಬಳಿ ನಾಲೆಗೆ
    ಕಾರು ಮುಗುಚಿದ ಪರಿಣಾಮ ನಾಲ್ವರು ಮೃತಪಟ್ಟ ಬಳಿಕ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಕೆರೆ-ಕಟ್ಟೆ ಮತ್ತು ನಾಲೆಗಳ ಬಳಿ ಹೋಗುವ ರಸ್ತೆಗಳಿಗೆ ತಡೆಗೋಡೆಗಳನ್ನು ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದ್ದಾರೆ.


    ತೆರವುಗೊಳಿಸಿದ್ದ ತಡೆಗೋಡೆ ಪುನರ್ ನಿರ್ಮಿಸಿಲ್ಲ: ಕೋಲಾರದಿಂದ ಶ್ರೀನಿವಾಸಪುರಕ್ಕೆ ಹೋಗುವ ರಸ್ತೆಯ ಮುದುವಾಡಿ ಕೆರೆ ಏರಿ ಮೇಲೆ ಹೊಸದಾಗಿ ರಸ್ತೆ ದುರಸ್ತಿ ಮಾಡಲಾಗಿದೆ. ದುರಸ್ತಿ ಸಂದರ್ಭ ಈ ಹಿಂದೆ ಇದ್ದ ತಡೆಗೋಡೆಗಳನ್ನು ತೆರವುಗೊಳಿಸಿ ಮತ್ತೆ ಪುನರ್ ನಿರ್ಮಿಸಿಲ್ಲ. ಕೆರೆಯಲ್ಲಿ ಮುಕ್ಕಾಲು ಭಾಗ ನೀರು ತುಂಬಿದೆ. ಒಂದು ಕಡೆ ನೀರು ತುಂಬಿದ್ದರೆ ಮತ್ತೊಂದು ಕಡೆ ಸುಮಾರು ಮೂವತ್ತು ಅಡಿಗಳಷ್ಟು ಎತ್ತರದಲ್ಲಿ ರಸ್ತೆ ಇರುವುದರಿಂದ ಆಯತಪ್ಪಿ ವಾಹನ ರಸ್ತೆಯ ಯಾವುದಾದರೂ ಒಂದು ಬದಿಗೆ ವಾಲಿದರೂ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

    ಹಳ್ಳದ ಮಧ್ಯೆಯೇ ವಾಹನ ಸಂಚಾರ: ಕೋಲಾರದಿಂದ ಬೇತಮಂಗಲಕ್ಕೆ ಹೋಗುವ ರಸ್ತೆಯ ಐಯ್ಯಪ್ಪನಹಳ್ಳಿ ಮತ್ತು ಗೊಲ್ಲಹಳ್ಳಿ ಕೆರೆಯ ಕಟ್ಟೆಗಳ ಮೇಲೆ ರಸ್ತೆ ಹಾದು ಹೋಗುತ್ತದೆ. ಇಲ್ಲಿಯೂ ತಡೆಗೋಡೆ ನಿರ್ಮಿಸಿಲ್ಲ. ಎರಡೂ ಕೆರೆಗಳಲ್ಲಿ ನೀರು ತುಂಬಿದೆ.
    ಮತ್ತೊಂದು ಬದಿಯಲ್ಲಿ ದೊಡ್ಡ ಹಳ್ಳ ಇದ್ದು ಈ ಮಧ್ಯೆಯೇ ವಾಹನಗಳು ಸಂಚರಿಸಬೇಕಾಗಿದೆ.

    ಮಳೆಗಾಲಕ್ಕೆ ಬೇಕು ಮುಂಜಾಗ್ರತೆ: ಮಳೆಗಾಲ ಪ್ರಾರಂಭವಾಗಿದ್ದು, ಈಗಾಗಲೇ ಬಹುತೇಕ ಕೆರೆಗಳಲ್ಲಿ ಮುಕ್ಕಾಲು ಭಾಗ ನೀರು ತುಂಬಿದೆ. ಮಳೆ ಬಂದರೆ ಕೆರೆಗಳು ತುಂಬಲಿವೆ. ಪ್ರಮುಖ ರಸ್ತೆಗಳು ಸೇರಿದಂತೆ ಗ್ರಾಮೀಣ ಸಂಪರ್ಕ ರಸ್ತೆಗಳು ಕೆರೆ-ಕಟ್ಟೆಗಳ ಮೇಲೆಯೇ ಹೋಗುವ ರಸ್ತೆಗಳು ಜಿಲ್ಲೆಯಲ್ಲಿ ಶೇ.80 ಇದ್ದರೂ ತಡೆಗೋಡೆಗಳನ್ನು ನಿರ್ಮಿಸಲು ಇಲಾಖೆಯವರು ಮುಂದಾಗುತ್ತಿಲ್ಲ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಹಣ ಬಿಡುಗಡೆಯಾಗುತ್ತಿಲ್ಲ ಎಂದು ಇಲಾಖೆ ಇಂಜಿನಿಯರ್ ನೆಪ ಹೇಳುತ್ತಿದ್ದಾರೆ. ಈ ವಿಚಾರವಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರನ್ನು ವಿಚಾರಿಸಿದರೆ ಕೆರೆ-ಕಟ್ಟೆಗಳ ಮೇಲೆ ಹೋಗುವ ರಸ್ತೆಗಳಿಗೆ ತಡೆಗೋಡೆ ನಿರ್ಮಾಣ ಕಾರ್ಯ ನಮ್ಮದಲ್ಲ ಎಂದು ಹೇಳಿ ಜವಾಬ್ದಾರಿಯಿಂದ ಪಾರಾಗುತ್ತಿದ್ದಾರೆ.

    ಕೆರೆ-ಕಟ್ಟೆಗಳ ಮೇಲೆ ನಿರ್ಮಾಣಗೊಂಡಿರುವ ರಸ್ತೆಗಳಿಗೆ ಕ್ರಾಸ್ ಬ್ಯಾರಿಯರ್ ನಿರ್ಮಾಣ ಮಾಡಬೇಕಾದರೆ ಅಪಘಾತ ವಲಯ ಎಂದು ಪೊಲೀಸ್ ಇಲಾಖೆಯವರು ಪ್ರಸ್ತಾವನೆ ಸಲ್ಲಿಸಿದರೆ, ಅದನ್ನು ನಾವು ಬೆಂಗಳೂರಿನಲ್ಲಿ ಇರುವ ಫ್ರಾನ್ಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಅಪಘಾತ ವಲಯಗಳಲ್ಲಿ ರಸ್ತೆಗಳಿಗೆ ತಡೆಗೋಡೆ ನಿರ್ಮಿಸುವುದು, ತಿರುವುಗಳನ್ನು ಅಗಲೀಕರಣ ಗೊಳಿಸುವುದು ್ರಾನ್ಸಿ ಇಲಾಖೆಯ ಜವಾಬ್ದಾರಿ.
    ರಾಮಸ್ವಾಮಿ, ಕಾರ್ಯಪಾಲ ಅಭಿಯಂತ ಲೋಕೋಪಯೋಗಿ ಇಲಾಖೆ ಕೋಲಾರ

    ಆಯ ತಪ್ಪಿದರೆ ವಾಹನ ಗುಟ್ಟೂರು ಕೆರೆಗೆ
    ಜಿ.ನಾಗರಾಜ, ಬೂದಿಕೋಟೆ:
    ಬಂಗಾರಪೇಟೆ ತಾಲೂಕಿನಾದ್ಯಂತ 521ಕ್ಕೂ ಅಧಿಕ ಕೆರೆಗಳಿವೆ. ಬಹುತೇಕ ಕೆರೆಗಳಿಗೆ ತಡೆಗೋಡೆ ನಿರ್ಮಾಣವಾಗದ ಕಾರಣ ಅಪಾಯದ ಸ್ಥಳಗಳಾಗಿವೆ. ಸರ್ಕಾರ ಪ್ರತಿ ವರ್ಷ ಕೆರೆಗಳ ಅಭಿವೃದ್ಧಿಗೆಂದು ಕೋಟ್ಯಂತರ ರೂ.ಗಳನ್ನು ಆಯವ್ಯಯದಲ್ಲಿ ಮೀಸಲಿಡುತ್ತಿದೆ. ಆದರೆ, ಗ್ರಾಮೀಣ ಭಾಗದ ಕೆರೆಗಳು ಮಾತ್ರ ಬದಲಾಗಿಲ್ಲ. ತಡೆಗೋಡೆಗಳು ಇಲ್ಲದ ಕೆರೆ ಏರಿ ಮೇಲೆ ಸಂಚರಿಸುವಂತಹ ವಾಹನಗಳು ಅವಡಕ್ಕೆ ಸಿಲುಕುತ್ತಿವೆ.
    ತಾಲೂಕಿನ ಗುಟ್ಟೂರು ಸಮೀಪದ ಕೆರೆ ಮೇಲಿನ ರಸ್ತೆಯು ತಮಿಳುನಾಡು ಮತ್ತು ಆಂಧ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ವಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಕೆರೆ ಏರಿ ಮೇಲೆ ಮುಂಜಾಗ್ರತೆ ವಹಿಸಿಲ್ಲ. ಸ್ವಲ್ಪ ಆಯ ತಪ್ಪಿದರೆ ವಾಹನಗಳು ನೇರವಾಗಿ ಕೆರೆಗೆ ಉರುಳುವುದು ಗ್ಯಾರಂಟಿ. ಈ ಹಿಂದೆ ನಿರ್ಮಿಸಿದ್ದ ಸಣ್ಣ ಸಣ್ಣ ಕಲ್ಲುಗಳೂ ಮುರಿದು ಹೋಗಿವೆ. ಕಟ್ಟೆಯ ಮೇಲಿನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಮೊಣಕಾಲುದ್ದದ ಗುಂಡಿಗಳು ನಿರ್ವಾಣವಾಗಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವ ಕೆಲಸಕ್ಕೂ ಮುಂದಾಗಿಲ್ಲ. ಇದರಿಂದ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋದರೆ, ಕೆರೆಗೆ ಅಥವಾ ಕಟ್ಟೆಯ ಮತ್ತೊಂದು ಭಾಗಕ್ಕೆ ಬೀಳುವುದು ಖಚಿತ. ಇಲ್ಲಿ ಸುರಕ್ಷೆ ಲಕ ಕೂಡ ಅಳವಡಿಸದಿರುವುದು ದುರಂತ.

    ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳ ಮೇಲೆ ತಡೆಗೋಡೆಗಳನ್ನು ನಿರ್ಮಿಸಲು ಅಧಿಕಾರಿಗಳು ಮುಂದಾಗಿಲ್ಲ. ಇದರಿಂದಾಗಿ ವಾಹನ ಅಪಘಾತಗಳು ಹೆಚ್ಚಾಗುತ್ತಿವೆ. ಅನಾಹುತಗಳು ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಹೆಚ್ಚಿನ ಪ್ರವಾಣದಲ್ಲಿ ಅವಡಗಳು ನಡೆಯುವುದಕ್ಕೆ ಮೊದಲು ತಡೆಗೋಡೆಗಳು ಅವಶ್ಯ ಇರುವ ಕಡೆ ನಿರ್ಮಿಸಬೇಕು. ಕಡ್ಡಾಯವಾಗಿ ಸೂಚನಾ ಫಲಕಗಳನ್ನು ಅಳವಡಿಸಬೇಕು.
    ಮುನಿರಾಜು ವಾಹನ ಸವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts