More

    ಗೊಲ್ಲರ ಹಟ್ಟಿಗಳಿಗಿನ್ನು ಕಂದಾಯ ಗ್ರಾಮ ಸ್ವರೂಪ  * ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿಕೆ 

    ದಾವಣಗೆರೆ: ಜಿಲ್ಲೆಯ ಗೊಲ್ಲರಹಟ್ಟಿ, ತಾಂಡ ಮೊದಲಾದ ದಾಖಲೆರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು

    ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಜಿಲ್ಲೆಯಲ್ಲಿ 75 ದಾಖಲೆ ರಹಿತ ಗ್ರಾಮಗಳನ್ನು ಗುರ್ತಿಸಿದ್ದು, ಅದರಲ್ಲಿ 39 ಅಂತಿಮ ಸೂಚನೆ ಹಂತಕ್ಕೆ ಬಂದಿವೆ. 25 ಗ್ರಾಮಗಳ ಸರ್ವೆ ನಂ ಬದಲಾಯಿಸಲಾಗುತ್ತಿದೆ. ಖಾಸಗಿ ಸರ್ವೆ ನಂಬರ್‌ಗಳಲ್ಲಿನ ಗ್ರಾಮಗಳ ಸರ್ವೆ ನಂ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೂ ಗೊಲ್ಲರು ಸೇರಿ ಎಲ್ಲಾ ಜನಾಂಗಗಳಿಗೆ ಸ್ಮಶಾನ ಭೂಮಿ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
    ಜಿಪಂ ಸಿಇಒ ಡಾ.ಎ.ಚನ್ನಪ್ಪ ಮಾತನಾಡಿ, ಭಾರತೀಯರ ಕಲ್ಪನೆಯ ಅನಕ್ಷರಸ್ಥ ಸಮಾಜದ, ಅಲಿಖಿತ ಸಂವಿಧಾನ ಭಗವದ್ಗೀತೆ ನೀಡಿದವನು ಶ್ರೀಕೃಷ್ಣ. ಸಮಾಜವನ್ನು ಮುನ್ನಡೆಸುವ ಬಗೆ ಗೀತೆಯಲ್ಲಿದೆ. 5 ಸಾವಿರ ವರ್ಷಗಳ ಹಿಂದೆ ನೀಡಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದರು.
    ಉಪನ್ಯಾಸ ನೀಡಿದ ಸೀತಾ ನಾರಾಯಣೆ ಉಪನ್ಯಾಸ ನೀಡಿದರು. ಯಾದವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಮೇಯರ್ ಜಯಮ್ಮ ಗೋಪಿನಾಯ್ಕ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್ ಬಸನಗೌಡ ಕೋಟೂರ, ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ನಜ್ಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts