More

    ಗೃಹಬಳಕೆ ಸಿಲಿಂಡರ್ ದರ ಇಳಿಕೆ  -ರಕ್ಷಾಬಂಧನಕ್ಕೆ ಪ್ರಧಾನಿ ಕೊಡುಗೆ  -ಸಂಸದ ಜಿ.ಎಂ.ಸಿದ್ದೇಶ್ವರ 

    ದಾವಣಗೆರೆ: ಕೇಂದ್ರ ಸರ್ಕಾರ, ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ತಲಾ 200 ರೂ. ಇಳಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ, ದೇಶದ ಮಹಿಳೆಯರಿಗೆ ರಕ್ಷಾ ಬಂಧನ ಹಾಗೂ ಓಣಂ ಹಬ್ಬದ ಉಡುಗೊರೆ ನೀಡಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
    ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಸಂಪರ್ಕ ಪಡೆದವರಿಗೆ ಈಗಿರುವ ಸಬ್ಸಿಡಿ 200 ರೂ. ಜತೆಗೆ ಹೆಚ್ಚುವರಿ 200 ರೂ.ಸಬ್ಸಿಡಿ ಸೇರಿ ಒಟ್ಟು ಪ್ರತಿ ಸಿಲಿಂಡರ್‌ಗೆ 400 ರೂ. ಇಳಿಕೆಯಾಗಲಿದೆ.
    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 5 ಲಕ್ಷ ಗೃಹೋಪಯೋಗಿ ಎಲ್.ಪಿ.ಜಿ. ಸಂಪರ್ಕ ಪಡೆದ ಗ್ರಾಹಕರಿಗೆ ಈ ಲಾಭ ದೊರೆಯಲಿದೆ. ಇದರಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಉಜ್ವಲ ಯೋಜನೆಯ ಬಳಕೆದಾರರಿದ್ದು ಇವರಿಗೆ 400 ರೂ. ಸಬ್ಸಿಡಿ ಸಿಗಲಿದೆ.
    2014 ರಲ್ಲಿ 14.5 ಕೋಟಿ ಗೃಹೋಪಯೋಗಿ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗಳಿದ್ದರು. ಈ ಸಂಖ್ಯೆ ಈಗ 33 ಕೋಟಿಗೆ ತಲುಪಿದೆ. ಇದರಲ್ಲಿ ಸುಮಾರು 9.60 ಕೋಟಿ ಉಜ್ವಲ ಯೋಜನೆ ಫಲಾನುಭವಿಗಳಿದ್ದಾರೆ. ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಇನ್ನೂ ಹೆಚ್ಚುವರಿ 75 ಲಕ್ಷ ಉಜ್ವಲ ಸಂಪರ್ಕ ಕಲ್ಪಿಸಲು ಅನುಮೋದನೆ ನೀಡಲಾಗಿದೆ. ದರ ಇಳಿಸಿದ ಪ್ರಧಾನಿ ಹಾಗೂ ಇಂಧನ ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts