More

    ಗೂಳೂರು ಗಣೇಶ ಮೂರ್ತಿ ವಿಸರ್ಜನೆ ಸಂಪನ್ನ

    ತುಮಕೂರು :ಗೂಳೂರು ಮಹಾಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ವೈಭವಯುತವಾಗಿ ನೆರವೇರಿತು.

    ಬಲಿಪಾಢ್ಯಮಿಯಂದು ಕಣ್ಣುಧಾರಣೆಯೊಂದಿಗೆ ಆರಂಭವಾದ ಗಣೇಶ ಮಹೋತ್ಸವ ಪ್ರತೀ ವರ್ಷ 1 ತಿಂಗಳು ನಡೆಯುತ್ತಿತ್ತು. ಈ ಬಾರಿ ಗ್ರಾಪಂ ಚುನಾವಣೆ ಹಾಗೂ ಅಕಾಲಿಕ ಮಳೆ ಕಾರಣ 2 ತಿಂಗಳು ವಿಸರ್ಜನಾ ಮಹೋತ್ಸವ ಮುಂದೂಡಲಾಗಿತ್ತು. ಶನಿವಾರ ರಾತ್ರಿ ಆರಂಭವಾದ ಉತ್ಸವವು ಭಾನುವಾರ ಸಂಜೆ ಸಂಪನ್ನಗೊಂಡು, ಗೂಳೂರು ಕೆರೆಯಲ್ಲಿ ವಿಸರ್ಜಿಸಲಾಯಿತು. ವರ್ಣರಂಜಿತ ಸಿಡ್ಡಿಮದ್ದಿನ ಪ್ರದರ್ಶನ ಗಮನಸೆಳೆಯಿತು.

    ಶನಿವಾರ ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ದೇವಾಲಯಕ್ಕೆ ಕಳಸ ತಂದು ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. 18 ಕೋಮಿನ ಜನರು ಒಗ್ಗೂಡಿ ಮಹಾಗಣಪತಿಯನ್ನು ಅಲಂಕೃತ ವಾಹನದಲ್ಲಿ ಕೂರಿಸಿ ಮಧ್ಯರಾತ್ರಿವರೆಗೂ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

    ಭಾನುವಾರ ಮಧ್ಯಾಹ್ನದಿಂದ ನಂದಿ, ನವಿಲು, ಜಿರಾಫೆ, ಕವಾಡಿ ಡ್ಯಾನ್ಸ್, ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ಡೊಳ್ಳುಕುಣಿತ, ಪೂಜಾಕುಣಿತ, ಸೋಮನ ಕುಣಿತ ಸೇರಿ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು.

    ಪುಂಡರಿಗೆ ಪೊಲೀಸರ ಲಾಠಿ ರುಚಿ:ಶನಿವಾರ ತಡರಾತ್ರಿ ಉತ್ಸವದಲ್ಲಿ ತುಮಕೂರಿನ ಮರಳೂರುದಿಣ್ಣೆಯ ಕೆಲ ಪುಂಡರು ಹೆಣ್ಣುಮಕ್ಕಳನ್ನು ಕೆಣಕಿ ಸ್ಥಳೀಯರಿಂದ ಗೂಸಾ ತಿಂದಿದ್ದಾರೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿ ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts