More

    ಗೂಂಡಾಗಿರಿ ಮಾಡ್ತಾರೆ ಅನ್ನೋ ಅಪಪ್ರಚಾರದಿಂದ ಸೋಲು

    ಕಂಪಲಾಪುರ: ಶಾಸಕನಾದರೆ ತಾಲೂಕಿನಲ್ಲಿ ಗೂಂಡಾಗಿರಿ ಮಾಡ್ತಾರೆ ಅನ್ನೋ ಅಪಪ್ರಚಾರದಿಂದ 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಸೋಲಾಯಿತು ಎಂದು ಶಾಸಕ ಕೆ.ಮಹದೇವ್ ಬೇಸರ ವ್ಯಕ್ತಪಡಿಸಿದರು.


    ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆ ಆದ ನೂರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.


    ಎರಡು ಚುನಾವಣೆಗಳಲ್ಲೂ ಕೆಲವರು ನನ್ನ ಮತ್ತು ಸಹೋದರನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದರು. ನಾನು ಅಧಿಕಾರಕ್ಕೆ ಬಂದರೆ ಕೋಮುಗಲಭೆ ನಡೆಯುತ್ತದೆ. ಮೂರು ಪೊಲೀಸ್ ಸ್ಟೇಷನ್ ಬದಲು 10 ಸ್ಟೇಷನ್ ಬೇಕಾಗುತ್ತವೆ ಎಂದು ಅಪಪ್ರಚಾರ ಮಾಡಿದರು. ಆದರೂ ಮತದಾರರು 3ನೇ ಬಾರಿಗೆ ನನ್ನ ಗೆಲ್ಲಿಸಿದರು ಎಂದು ಹೇಳಿದರು.


    ನಾನು ಶಾಸಕನಾದ ನಂತರ ತಾಲೂಕಿನಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ. ನನ್ನ ಕಾರ್ಯವೈಖರಿ ಮೆಚ್ಚಿ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆ ಆಗುತ್ತಿದ್ಧಾರೆ ಎಂದರು.


    ಜೆಡಿಎಸ್ ತಾಲೂಕು ಉಪಾಧ್ಯಕ್ಷ ಕೆ.ಕುಮಾರ್, ಮುಖಂಡರಾದ ಕೆ.ಎನ್.ಜಯಣ್ಣ, ಕೆ.ಎಂ.ಲಕ್ಷ್ಮಣ್, ಸೂರಿ, ಕೃಷ್ಣ , ಗಿರೀಶ್, ಆಸೀಫ್, ರಿಜ್ವಾನ್, ವಜೀರ್‌ಖಾನ್, ನಜು , ಮುಜಾಮಿಲ್, ನೂರ್‌ಖಾನ್, ಜಾವಿದ್, ಹನೀಫ್. ಎಂ.ಟಿ.ಕುಮಾರ್, ನಾರಾಯಣ್, ಸನಾವುಲ್ಲಾ, ಬಾಬು, ಅಶ್ರಫ್, ಹಿಮ್ಮು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts