More

    ಗುರುವಿನ ಅನುಗ್ರಹದಿಂದ ಉನ್ನತಿ

    ಧಾರವಾಡ: ಇಲ್ಲಿನ ಶಂಕರಾಚಾರ್ಯ ಸಂಸ್ಕೃತ ಪಾಠ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುತ್ರಯರ ಶತಮಾನೋತ್ಸವದಲ್ಲಿ ಜಿ.ಆರ್. ಪಾಟೀಲ ರಚನೆಯ ‘ನೈಷ್ಕರ್ವ್ಯುಸಿದ್ಧಿ’ ಕನ್ನಡ ಭಾಷಾಂತರ ಕೃತಿಯನ್ನು ಹೆಬ್ಬಳ್ಳಿ ಸದ್ಗುರು ದತ್ತಾವಧೂತರು ಲೋಕಾರ್ಪಣೆ ಮಾಡಿದರು.

    ನಂತರ ಆಶೀರ್ವಚನ ನೀಡಿದ ಅವರು, ಮನುಷ್ಯನಾಗಿ ಹುಟ್ಟಿ ನಾವು ಜೀವನದಲ್ಲಿ ಯಾವುದೇ ಸಾಧನೆ ಮಾಡಬಹುದು. ಆದರೆ, ಗುರುವಿನ ಪಾದಪದ್ಮಕ್ಕೆ ಶರಣು ಹೋಗದಿದ್ದರೆ ಅವುಗಳಿಗೆ ಮಹತ್ವವೇ ಇರುವುದಿಲ್ಲ. ವೇದ ಶಾಸ್ತ್ರಗಳನ್ನು ಓದಿ ಕವಿತ್ವವನ್ನು ಗಳಿಸಿ ಹಲವಾರು ಕೃತಿಗಳನ್ನು ರಚಿಸಬಹುದು. ರಾಜ ಮಹಾರಾಜರು ಕಾಲಿಗೆ ಬೀಳುವಷ್ಟು ವಿದ್ವತ್ತಿದ್ದರೂ, ಯಶಸ್ಸು ದಶ ದಿಕ್ಕುಗಳಲ್ಲಿ ವ್ಯಾಪಿಸಿದ್ದರೂ ಒಬ್ಬ ಗುರುವಿನ ಪಾದಪದ್ಮಕ್ಕೆ ಶರಣು ಬಾರದಿದ್ದರೆ ಈ ಸೌಭಾಗ್ಯಗಳು ಯಾಕಾಗಿ ಇರುವವು ಎಂದು ಪ್ರಶ್ನಿಸಿದರು.

    ಬೆಂಗಳೂರಿನ ಶ್ರೀ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ವಿದ್ವಾನ್ ಮಧುಸೂದನ ಶಾಸ್ತ್ರಿ ಹಂಪಿಹೊಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ವಾಚಸ್ಪತಿ ಶಾಸ್ತ್ರಿ ಅವರು ಶಾಂಕರಭಾಷ್ಯ ಪ್ರವಚನ ನೀಡಿದರು. ಇದೇ ವೇಳೆ ವೇಣಿಮಾಧವ ಶಾಸ್ತ್ರಿ ರಚಿಸಿದ ದಾಸೋಹಂ ನಾಟಕವನ್ನು ಶಂಕರ ಭಜನಾ ಮಂಡಳದ ಸದಸ್ಯರು ಪ್ರಸ್ತುತಪಡಿಸಿದರು. ಭೀಮಾಶಂಕರ, ಚಂದ್ರಶೇಖರ ಶಾಸ್ತ್ರಿ, ನಾಗೇಶ ಶಾಸ್ತ್ರಿ, ವೇಣಿಮಾಧವ ಶಾಸ್ತ್ರಿ, ರಮೇಶ ಕುಲಕರ್ಣಿ, ಎಸ್.ಪಿ. ಭಟ್, ಶಂಕರ ಕುಲಕರ್ಣಿ, ಆರ್.ಎಸ್. ಜೋಶಿ, ಕೆ. ಬಾಗಲವಾಡಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts