More

    ಗುಡಸ ಪಿಕೆಪಿಎಸ್‌ನಿಂದ ಶೇ.24 ಲಾಭಾಂಶ ವಿತರಣೆ

    ಹುಕ್ಕೇರಿ, ಬೆಳಗಾವಿ: ಗುಡಸ ಪಿಕೆಪಿಎಸ್ ಕಳೆದ ವರ್ಷಾಂತ್ಯಕ್ಕೆ 1.6 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಲಾಭಾಂಶದ ಶೇ. 24 ಹಂಚಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಸದಾನಂದ ಮಲ್ಲಯ್ಯ ಹಿರೇಮಠ ಹೇಳಿದರು.

    ತಾಲೂಕಿನ ಗುಡಸ ಗ್ರಾಮದ ಪಿಕೆಪಿಎಸ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 93ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಶೂನ್ಯ ಬಡ್ಡಿದರ ಯೋಜನೆಯಲ್ಲಿ 2,261 ಸದಸ್ಯರಿಗೆ ಕ್ರಮದ ಪತ್ತು 19.90 ಕೋಟಿ ರೂ. ಮತ್ತು ಮಧ್ಯಮಾವಧಿ ಟ್ರ್ಯಾಕ್ಟರ್ ಸಾಲ ಯೋಜನೆಯಡಿ 22 ಸದಸ್ಯರಿಗೆ 1.10 ಕೋಟಿ ರೂ. ಸಾಲ ಮಂಜೂರು ಮಾಡಿಸಿದ್ದಾರೆ ಎಂದು ತಿಳಿಸಿದರು. ಒಟ್ಟು 34.07 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಂಘವು 2,763 ಸದಸ್ಯರಿಂದ 1.63 ಕೋಟಿ ರೂ. ಷೇರು ಸಂಗ್ರಹಿಸಿ, 52.21 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿರುವ ಸಂಘ, 28.78 ಕೋಟಿ ರೂ. ಠೇವು ಸಂಗ್ರಹಿಸಿದೆ ಎಂದು ತಿಳಿಸಿದರು.

    ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಈಚೆಗೆ ನಿಧನರಾದ ಸಚಿವ ಉಮೇಶ ಕತ್ತಿ ಹಾಗೂ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಪಾಧ್ಯಕ್ಷ ಅಡಿವೆಪ್ಪ ಮಗದುಮ್ಮ, ನಿರ್ದೇಶಕರಾದ ಸಿದಗೌಡ ಪಾಟೀಲ, ರಾಯಪ್ಪ ಡೂಗ, ಮಲ್ಲಿಕಾರ್ಜುನ ನರಸಣ್ಣವರ, ಅಲಗೌಡ ದೊಡದಣ್ಣವರ, ಬಾಬು ಜಾರಕಿಹೊಳಿ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ, ಶಿವನಗೌಡ ಪಾಟೀಲ, ಗುರುಲಿಂಗ ಮಲ್ಲಾಪುರೆ, ಭೀಮಗೌಡ ಪಾಟೀಲ, ರಾಜಶೇಖರ ಕರೋಶಿ, ಕೆ.ಎಲ್. ಪಾಟೀಲ, ಸದಾಶಿವ ತೇಲಿ, ಬಸವರಾಜ ಲಿಂಗನ್ನವರ, ಗ್ಯಾನಪ್ಪ ಡೂಗ, ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಮಲ್ಲಾಪುರೆ, ಆರ್.ಜಿ.ನೇರ್ಲಿ,
    ಬಸವರಾಜ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts