More

    ಗೋಮಯ ಕಾಗದದ ವಿವಾಹ ಆಮಂತ್ರಣ ಬಿಡುಗಡೆ

    ಗೋಮಯ ಕಾಗದದ ವಿವಾಹ ಆಮಂತ್ರಣ ಬಿಡುಗಡೆ

    ಗೋಕರ್ಣ: ಗೋವಿನ ಉತ್ಪನ್ನಗಳ ಮೌಲ್ಯ ವರ್ಧನೆಯ ಉದ್ದೇಶದಿಂದ ಶ್ರೀಮಠದ ಕಾಮದುಘಾ ಯೋಜನೆ ಪ್ರಪ್ರಥಮ ಬಾರಿಗೆ ಪರಿಸರ ಸ್ನೇಹಿಯಾದ ರಾಸಾಯನಿಕ ರಹಿತ ಕಾಗದವನ್ನು ಸಿದ್ಧಪಡಿಸಿದೆ. ಶ್ರೀಮಠದ ಭಕ್ತರು ಮತ್ತು ಸಾರ್ವಜನಿಕರು ಇಂಥ ಪ್ರಯೋಗಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ಅಶೋಕೆಯಲ್ಲಿ ಸೋಮವಾರ ಗುರುಕುಲ ಚಾತುರ್ವಸ್ಯ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದಿಂದ ತಯಾರಾದ ವಿನೂತನವಾದ ಕಾಗದದ ವಿವಾಹ ಆಮಂತ್ರಣವನ್ನು ಬಿಡುಗಡೆಗೊಳಿಸಿ ಶ್ರೀಗಳು ಮಾತನಾಡಿದರು. ಭಾರತೀಯ ಗೋತಳಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಅರ್ಥಪೂರ್ಣ ಕಾರ್ಯವನ್ನು ಶ್ರೀಮಠದ ಕಾಮದುಘಾ ಯೋಜನೆ ಮತ್ತು ಸಂಶೋಧನಾ ಖಂಡ ಕೈಗೊಳ್ಳುತ್ತ ಬಂದಿದೆ. ಶ್ರೀಮಠ ಈ ಬಗೆಯ ಪರಿಸರ ಸ್ನೇಹಿ ಕಾಗದದ ಬಳಕೆಯನ್ನು ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ಮಾಡಲಿದೆ ಎಂದರು.

    ಕಾಮದುಘಾ ವಿಭಾಗದ ಡಾ.ವೈ.ವಿ. ಕೃಷ್ಣಮೂರ್ತಿ, ಸಂಶೋಧನಾ ಖಂಡದ ಡಾ. ರವಿ ಪಾಂಡವಪುರ, ಲೋಕ ಸಂಪರ್ಕ ವಿಭಾಗದ ಶಿಶಿರ ಹೆಗಡೆ, ಮಾಧ್ಯಮ ವಿಭಾಗದ ಉದಯಶಂಕರ ಮಿತ್ತೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts