More

    ಗದಗ: 169 ಕೋಟಿ ವೆಚ್ಚದ ಬಜೆಟ್​ ಮಂಡಿಸಿದ ಅಧ್ಯಕ್ಷೆ ಉಷಾ ದಾಸರ, -ಬಜೆಟ್​ ಮಂಜೂರಾತಿಗೆ ಬಹುಮತವೋ? ಸರ್ವಾನುಮತವೋ?

    ಗದಗ: ನಕಲಿ ಠರಾವು ಹೊಂದಾಣಿಕೆ, ಟೆಂಡರ್​ ಪ್ರಕ್ರಿಯೆ, ಬೀದಿ ದೀಪ ನಿರ್ವಹಣೆ, ತೆರೆಮರೆ ರಾಜಕಾರಣದಲ್ಲಿ ಒಂದಾಗುವ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಗುರುವಾರ ಜರುಗಿದ ಸಾಮಾನ್ಯ ಸಭೆಯ ಬಜೆಟ್​ ಮಂಡನೆ ವೇಳೆ ಒಬ್ಬರಿಗೊಬ್ಬರು ದಿಕ್ಕಾರ ಕೂಗಿ ವಿರೋಧ ವ್ಯಕ್ತಪಡಿಸಿದರು.
    ಸದಸ್ಯರ ಕೆಸೆರೆರಚಾಟದಲ್ಲಿ ಜನಮರಳೋ ಜಾತ್ರೆ ಮರಳೋ ಎಂಬ ಸನ್ನಿವೇಶ ನಗರಸಭೆ ಪ್ರಾಂಗಣದಲ್ಲಿ ಸೃಷ್ಟಿಯಾಯಿತು. ಬಜೆಟ್​ ಮಂಡನೆಗೆ ಬಿಜೆಪಿ ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದರೆ, ಮಂಡನೆಗೆ ವಿರೋಧ ವ್ಯಕ್ತಪಡಿಸಲು ಈ ಮೊದಲೇ ಸಿದ್ಧಗೊಂಡಿದ್ದ ಕಾಂಗ್ರೆಸ್​ ಸದಸ್ಯರು ಆಡಳಿತ ಪಕ್ಷದ ಬಜೆಟ್​ ವಿರೋಧಿಸಿದರು ಮತ್ತು ಬಜೆಟ್​ ಗೆ ಮನ್ನಣೆ ನೀಡಬಾರದು ಎಂದು ಆಗ್ರಹ ವ್ಯಕ್ತಪಡಿಸಿದರು. ಈ ಕೋಲಾಹಲದ ನಡುವೆ ಬಜೆಟ್​ ಮಂಜೂರಾತಿಗೆ ಬಹುಮತ ಅಗತ್ಯವೋ ಅಥವಾ ಸರ್ವಾನುಮತ ಅಗತ್ಯವಿದೆಯೇ ಎಂಬ ಹೊಸ ಚರ್ಚೆಯನ್ನು ಕಾಂಗ್ರೆಸ್​ ಸದಸ್ಯರು ಹುಟ್ಟುಹಾಕಿದರು.
    ನಗರಸಭೆ ಅಧ್ಯಕ್ಷೆ ಉಷಾ ದಾಸರ ಬಜೆಟ್​ ಮಂಡನೆಗೆ ಮುಂದಾಗುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಎಲ್​.ಡಿ. ಚಂದಾವರಿ, ಈಗಾಗಲೇ ಪಟ್ಟಿ ಮಾಡಿರುವ 192 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್​ ಪ್ರಕ್ರಿಯೆಗೆ ಸೂಚಿಸಿ ಬಜೆಟ್​ ಮಂಡನೆ ಮಾಡುವಂತೆ ಆಗ್ರಹಿಸಿ ಸದನದ ಬಾವಿಗಿಳಿದರು. ಕಾಂಗ್ರೆಸ್​ ಸದಸ್ಯರೆಲ್ಲರೂ ಸದನದ ಬಾವಿಗಿಳಿದು ಲ್​.ಡಿ. ಚಂದಾವರಿ ಅವರನ್ನು ಬೆಂಬಲಿಸಿದರು. ಅಧ್ಯೆ ಉಷಾ ದಾಸರ ಒಂದೆಡೆ ಬಜೆಟ್​ ಮಂಡಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್​&ಬಿಜೆಪಿ ಸದಸ್ಯರು ಪರಸ್ಪರ ದಿಕ್ಕಾರ ಕೂಗಿ, ಸದನ ಗಾಂಭಿರ್ಯತೆ ಕಳೆದುಕೊಂಡಿತು. ಕೇವಲ 20 ನಿಮಿಷದಲ್ಲಿ ಬಜೆಟ್​ ಮಂಡನೆ ರ್ಪೂಣಗೊಂಡಿತು. ತದನಂತರ ಅಧ್ಯೆ ಮತ್ತು ಉಪಾಧ್ಯೆ ಸೇರಿದಂತೆ ಬಿಜೆಪಿ ಸದಸ್ಯರೆಲ್ಲರೂ ಸಭೆಯಿಂದ ಹೊರನಡೆದರು.

    ಕಾಂಗ್ರೆಸ್​ ಆರೋಪ:
    ಸರ್ವಾನುಮತದಿಂದ ಬಜೆಟ್​ ಗೆ ಅನುಮೋದನೆ ದೊರೆಯಬೇಕೆ ವಿನಹ ಬಹುಮತದಿಂದಲ್ಲ ಎಂಬುದು ಕಾಂಗ್ರೆಸ್​ ಸದಸ್ಯರ ಪ್ರಮುಖ ಆರೋಪವಾಗಿತ್ತು. ಇದು ಕೊರತೆಯ ಬಜೆಟ್​ ಆಗಿದೆ. ಕಳೆದ ಬಾರಿಯ ಶಿಲ್ಕು 47 ಕೋಟಿಯನ್ನು ಪ್ರಸಕ್ತ ಸಾಲಿನ ಬಜೆಟ್​ ಗೆ ಸೇರಿಸಲಾಗಿದೆ. ಆದಾಯ 125 ಕೋಟಿ, ಖರ್ಚು 169 ಕೋಟಿ ತೋರಿಸಿದ್ದಾರೆ. ಈ ಹಿನ್ನೆಲೆ ಇದೆ ಪ್ರಸಕ್ತ ಸಾಲಿನಲ್ಲಿ 40 ಕೋಟಿಗೂ ಹೆಚ್ಚು ಕೊರತೆ ಕಾಣಿಸುತ್ತಿದೆ. 24/7 ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ನಿರ್ವಹಣೆಯನ್ನು ನಗರಸಭೆಗೆ ಹಸ್ತಾಂತರ ಪಡೆದುಕೊಂಡಿದ್ದರೂ ಈ ಎರೆಡೂ ಯೋಜನೆಗೆ ಈ ಬಜೆಟ್​ ನಲ್ಲಿ ಹಣವೇ ಮೀಸಲಿಟ್ಟಿಲ್ಲ. ಹಾಗಾಗಿ ಮತ್ತೊಮ್ಮೆ ಪರಮಾರ್ಶೆ ಮಾಡಬೇಕು ಎಂದು ಕಾಂಗ್ರೆಸ್​ ಸದಸ್ಯರು ಆರೋಪಿಸಿದ್ದಾರೆ.

    ಬಾಕ್ಸ್​:
    ಬಜೆಟ್​ ಮಂಡನೆಗಾಗಿ ನಗರಸಭೆ ಹಾಲ್​ಗೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಇದನ್ನು ಟೀಕಿಸಿದ ಪ್ರತಿಪಕ್ಷದ ನಾಯಕ ಎಲ್​.ಡಿ. ಚಂದಾವರಿ, ಆಡಳಿತ ಪಕ್ಷ ಕಿವಿಗೆ ಹೂ ಇಡುವ ಬದಲಾಗಿ ಟೆಬಲ್​ ಮೇಲೆ ಹೂ ಇಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

    ಬಹುಮತೋ? ಸರ್ವಾನುಮತವೋ?
    ಬಜೆಟ್​ ಮಂಜೂರಾತಿಗೆ ಬಹುಮತಕ್ಕಿಂತ ಸರ್ವಾನುಮತದ ಒಪ್ಪಿಗೆ ಅಗತ್ಯವಿದೆ. ಇದು ನಗರಸಭೆ ನಿಯಮದಲ್ಲೇ ಇದೆ. ಈ ನಿಯಮ ಉಲ್ಲಂಸಿ ಮಂಜೂರಾತಿ ನೀಡುವುದು ನಿಯಮ ಬಾಹಿರ ಎಂದು ಕಾಂಗ್ರೆಸ್​ ಆರೋಪಿಸಿದೆ. ಕಾಂಗ್ರೆಸ್ಸಿನ ಈ ಹೇಳಿಕೆ ಹಲವು ನಗರಸಭೆ ಸದಸ್ಯರನ್ನು ಗೊಂದಲಕ್ಕೆ ದೂಡಿತು. ಈ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳಿಂದ ಸ್ಪಷ್ಟಿಕರಣವನ್ನು ಕೇಳಲಾಯಿತು. ನಗರಸಭೆ ಅಕೌಂಟೆಟ್​ ಅವರನ್ನು ವೇದಿಕೆಗೆ ಕರೆದು “ಬಜೆಟ್​ ಮಂಜೂರಾತಿಗೆ ಸರ್ವಾನುಮತದ ಒಪ್ಪಿಗೆಯೋ? ಅಥವಾ ಬಹುಮತದ ಆಯ್ಕೆಯೋ? ಎಂಬುದನ್ನು ಪ್ರಶ್ನಿಸಿದರು. ಇದನ್ನು ಕಾನೂನು ವ್ಯಾಪ್ತಿಯ ತನಿಖೆಗೆ ಒಳಪಡಿಸಬೇಕು ಎಂದು ಅಕೌಂಟೆಂಟ್​ ಮರುತ್ತರಿಸಿದರು.

    ಶಿಷ್ಠಾಚಾರ ಉಲ್ಲಂಘನೆ?

    ಬಜೆಂಡ್​ ಮಂಡನೆ ನಂತರ ಶಿಷ್ಠಾಚಾರ ಉಲ್ಲಂನೆ ಪ್ರಸಂಗಗಳು ಜರುಗಿದವು. ವೇದಿಕೆ ಮೇಲೆ ಕುಳಿತಿದ್ದ ನಗರಸಭೆ ಪೌರಾಯುಕ್ತರು ಹೊರ ನಡೆಯುತ್ತಿದ್ದಂತೆ ಕೆಲ ಕಾಂಗ್ರೆಸ್​ ಸದಸ್ಯರು ಏಕವಚನ ಸಂಭೋದನೆ ಮಾಡಿ ಮರಳಿ ಬಂದು ರ್ಕುಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರಲ್ಲದೇ ಬಜೆಟ್​ ಕುರಿತು ನಾನಾ ಪ್ರಶ್ನಾವಳಿಗಳನ್ನು ಕೇಳಿದರು.

    ಬಜೆಟ್​ ಮಂಡನೆ:
    – ನೈರ್ಮಲ್ಯ ಮತ್ತು ಆರೋಗ್ಯಕ್ಕೆ 1.48 ಕೋಟಿ
    – ಪಿಂಕ್​ ಶೌಚಾಲಯ ನಿರ್ಮಾಣಕ್ಕೆ 25 ಲಕ್ಷ ರೂ.,
    – ಮುನ್ಸಿಪಲ್​ ಹೈಸ್ಕೂಲ್​ ದುರಸ್ಥಿಗೆ 25 ಲಕ್ಷ ರೂ.
    – ಫಾರಂ 3 ವಿತರಣೆ ಸರಳೀಕರಣ ಮತ್ತು ಡಿಜಟಲೀಕರಣಕ್ಕಾಗಿ 15 ಲಕ್ಷ ರೂ.,
    – ಹೊಸದಾದ ಶವಗಾರ(ಶ್ರದ್ಧಾಂಜಲಿ) ವಾಹನ ಖರೀದಿಗೆ 27 ಲಕ್ಷ ರೂ.,
    – ಸ್ಮಶಾನ ಮತ್ತು ಶವಸಂಸ್ಕಾರ ಸ್ಥಳಗಳ ನಿರ್ವಹಣೆಗೆ 25 ಲಕ್ಷ ರೂ.,
    – ಈಜುಕೊಳಗಳನ್ನು ರ್ಪೂಣಗೊಳಿಸಲು 70 ಲಕ್ಷ ರೂ.,
    – ಈಗಿರುವ ಈಜುಕೊಳಗಳ ನಿರ್ವಹಣೆಗೆ 4 ಲಕ್ಷ ರೂ.,
    – ಅವಳಿ ನಗರದಲ್ಲಿ ಹೊಸದಾಗಿ ರಸ್ತೆ ನಿರ್ಮಾಣಕ್ಕೆ 6.20 ಕೋಟಿ ರೂ.
    – ರಸ್ತೆ ದುರಸ್ಥಿಗಾಗಿ 63.96 ಲಕ್ಷ ರೂ.
    – ಚರಂಡಿ ನಿರ್ವಹಣೆಗೆ 11 ಲಕ್ಷ ರೂ.
    – ಹೊಸ ಚರಂಡಿ ನಿಮಿರ್ಸುವುದಕ್ಕಾಗಿ 2.92 ಕೋಟಿ ರೂ.
    – ಒಳಚರಂಡಿ ನಿರ್ಮಾಣಕ್ಕಾಗಿ 40 ಲಕ್ಷ ರೂ.
    – ಅಮೃತ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ ಹೊಸ ಉದ್ಯಾನವನ ನಿಮಿರ್ಸುವುದಕ್ಕೆ 89.19 ಲಕ್ಷ ರೂ.
    – ಸಾಮಾಜಿಕ ಅರಣ್ಯೀಕರಣದಡಿ ಗಿಡ ನೆಡುವ ಕಾರ್ಯಕ್ರಮಕ್ಕೆ 8 ಲಕ್ಷ ರೂ.
    ಸಾರ್ವಜನಿಕ ನಾಗರಿಕ ಸೌಲಭ್ಯಗಳನ್ನು ಒದಗಿಸಲು 8 ಲಕ್ಷ ರೂ.

    – ಅಮೃತ ನಿರ್ಮಲ ನಗರ ಯೋಜನೆಯಡಿ ಬಿಡುಗಡೆಯಾಗಿದ್ದ 50 ಲಕ್ಷ ರೂ. ಅನುದಾನದಡಿ ಸ್ವಚ್ಚತೆ ಮತ್ತು ನೈರ್ಮಲ್ಯತೆಗೆ ಆದ್ಯತೆ.

    ಕೋಟ್​:
    ನಗರಸಭೆ ಅಧ್ಯಕ್ಷರಿಗೆ ಬಜೆಟ್​ ಮಂಡಿಸುವ ಬಗ್ಗೆ ಪೂರ್ವಾಪರ ಜ್ಞಾನವಿಲ್ಲ. ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಓದುತ್ತಾರೆ. 40 ಕೊಟಿ ಕೊರತೆ ಬಜೆಟ್​ ಮಂಡಿಸಿದ್ದು ನಗರಸಭೆ ಇತಿಹಾಸದಲ್ಲೇ ಇಲ್ಲ
    – ಎಲ್​.ಡಿ. ಚಂದಾವರಿ, ನಗರಸಭೆ ಪ್ರತಿಪಕ್ಷದ ನಾಯಕ

    ಕೋಟ್​:
    ಆರು ಬಾರಿ ನಗರಸಭೆ ಸದಸ್ಯರಾದ ಎಲ್​.ಡಿ. ಚಂದಾವರಿಗೆ ಬಜೆಟ್​ ಮಂಡನೆ ವೇಳೆ ಹೇಗೆ ವತಿರ್ಸಬೇಕು ಎಂಬ ಪ್ರಜ್ಞೆ ಇಲ್ಲ. ಅವರಿಂದ ಕಲಿಯಬೇಕಾದದ್ದು ಏನು ಇಲ್ಲ. ವಿರೊಧ ವ್ಯಕ್ತಪಡಿಸುವುದೇ ಅವರ ಕಾಯಕ
    – ಉಷಾ ದಾಸರ, ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts