More

    ಗದಗ: ಶಿಗ್ಲಿ ಗ್ರಾಪಂನಲ್ಲಿ ಅಕ್ರಮ ಇಸ್ವತ್ತು?

    ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿಯಲ್ಲಿ ಬೇನಾಮಿ ಮತ್ತು ಅನರ್ಹ ಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿ, ಅಕ್ರಮವಾಗಿ ಇಸ್ವತ್ತು ಮಾಡಿಕೊಟ್ಟ ಗಂಭೀರ ಆರೋಪ ಕೇಳಿ ಬಂದಿದೆ. ಗ್ರಾಪಂನಲ್ಲಿ ಅಧ್ಯಕ್ಷ ಮತ್ತು ಪಿಡಿಒಗಳು ಸೇರಿ 2016 ರಿಂದ 2022ರ ವರೆಗೆ ಈ ಅಕ್ರಮ ಜರುಗಿದೆ ಎಂದು 6 ತಿಂಗಳ ಹಿಂದೆಯೇ ದೂರು ಸಲ್ಲಿಕೆಯಾಗಿದೆ. ಕಾನೂನು, ನಿಯಮಾನುಸಾರ ಅಕ್ರಮ ತನಿಖೆಗೆ ನಡೆಸಲು ಸಿಎಂ ಕಚೇರಿಯಿಂದ ನೋಟೀಸ್​ ಬಂದರೂ ಕೂಡ ಗ್ರಾಪಂ ಮತ್ತು ಜಿಪಂ ವಿಳಂಬ ನೀತಿ ಅನುಸರಿಸುತ್ತಿದೆ. ಈ ನಡೆ ಅಕ್ರಮಕ್ಕೆ ಪುಷ್ಠಿ ನೀಡುವಂತಿದೆ. ವಿಳಂಬ ನೀತಿಯಿಂದ ಪ್ರಕರಣ ತೆರೆಮರೆಗೆ ಸರಿಯುತ್ತಿದೆ. ಅರ್ಹ ಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

    ಏನಿದು ಪ್ರಕರಣ?:
    ನಿವೇಶನ ರಹಿತ ಕಡು ಬಡವರಿಗೆ ಮನೆ ನಿಮಿರ್ಸಿಕೊಳ್ಳಲು ಶಿಗ್ಲಿ ಗ್ರಾಮದಲ್ಲಿ 2013ಕ್ಕೂ ಮೊದಲು ಸರ್ವೇ ನಂ 55, 123/8, 49/1 ಮತ್ತು 49/4 ಜಮೀನನ್ನು ಗ್ರಾಪಂ ನಿಂದ ದಾನವಾಗಿ ಪಡೆಯಲಾಗಿತ್ತು. 2016 ರಿಂದ 2022ರ ವರೆಗೆ 630 ನಿವೇಶನ ಸೃಷ್ಟಿಸಿ ಹಂಚಿಕೆ ಮಾಡಲಾಗಿತ್ತು. ಆದರೆ, ಹಂಚಿಕೆ ಪ್ರಕ್ರಿಯೆಯಲ್ಲಿ ಅಕ್ರಮ ಜರುಗಿದೆ ಎಂಬುದು ಈಗಿರುವ ಆರೋಪ. ಅದರಲ್ಲೂ ನಿವೇಶನ ಪಡೆದವರು 20 ವರ್ಷಗಳ ವರೆಗೆ ಪರಭಾರೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಸಹ ನಿವೇಶನದ ಹಕ್ಕಪತ್ರ(ಪಟ್ಟಾ) ಪಡೆಯದೇ ಪ್ರಭಾವ ಬಳಸಿ ಪಂಚಾಯಿತಿಯಿಂದ ಅಕ್ರಮವಾಗಿ ಇಸ್ವತ್ತು ಪಡೆದು ನೂರಾರು ನಿವೇಶನಗಳು ಕಡಿಮೆ ಬೆಲೆಯಲ್ಲಿ ಪ್ರಭಾವಿಗಳಿಗೆ ಮಾರಾಟ ಆಗಿವೆ ಎಂಬುದು ಗಂಭೀರ ಆರೋಪ ಕೇಳಿ ಬಂದಿದೆ.

    ದೂರಿನಲ್ಲಿ ಏನಿದೆ?
    ಬಡವರಿಗೆ ಮೀಸಲಿಟ್ಟ ನಿವೇಶನ ಹಂಚಿಕೆ ಮತ್ತು 2016 & 22 ರ ಅವಧಿಯಲ್ಲಿ ನಡೆದ ನಿವೇಶನಗಳ ಅಕ್ರಮ ಪರಭಾರೆ ಕುರಿತು ಸ್ಥಳಿಯರು ಕಳೆದ ವರ್ಷವೇ ಸಿಎಂ ಕಚೇರಿಗೆ ದೂರು ಸಲ್ಲಿಸಿದ್ದರು. ನಿವೇಶನದ ನೀಲಿ ನೆ ತಯಾರಿಸದೇ ಪ್ರತಿ ಲಾನುಭವಿಗಳಿಂದ 15 ರಿಂದ 20 ಸಾವಿರ ರೂ ಪಡೆದು ನಮೂನೆ 1 ಮತ್ತು 11ಇ ವಿತರಿಸಲಾಗಿದೆ. ಹಾಗೂ ರಾಜೀವಗಾಂಧಿ ವಸತಿ ಯೋಜನೆಯ ಅನುಮತಿ ಪಡೆಯದೇ ಮೀಸಲಿಟ್ಟ ನಿವೇಶನಗಳನ್ನು 1 ರಿಮದ 2 ಲಕ್ಷಕ್ಕೆ ಅನರ್ಹ ಲಾನುಭವಿಗಳಿಗೆ ಮಾರಿಕೊಂಡಿದ್ದಾರೆ. ಇ ಸ್ವತ್ತು ಪಡೆದುಕೊಂಡ ಅನರ್ಹವರು ಮತ್ತೊಮ್ಮೆ 3 ರಿಂದ 4 ಲಕ್ಷಕ್ಕೆ ನಿವೇಶನಗಳನ್ನು ಪರಾಭಾರೆ ಮಾಡಿ ಅರ್ಹ ಲಾನುಭವಿಗಳಿಗೆ ವಂಚಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದೂರು ಸಲ್ಲಿಕೆ ಆಗಿತ್ತು. ಅದಕ್ಕೂ ಮೊದಲು ಸ್ಥಳಿಯರು ಹಲವು ಬಾರಿ ಗ್ರಾಪಂ ಎದರು ಪ್ರತಿಭಟನೆ ಮಾಡಿದ್ದರು.

    ಸಮಿತಿ ರಚನೆ:
    ದೂರಿನ ಅನ್ವಯ ಸಿಎಂ ಕಚೇರಿಯಿಂದ ಜಿಲ್ಲಾಡಳಿತಕ್ಕೂ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಲಾಗಿದೆ. ಸಿಎಂ ಆದೇಶನ್ವ ಯೋಜನಾ ನಿರ್ದೇಶಕರು ಮತ್ತು ತಾಪಂ ಇಇಒ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎರಡೂ ತಿಂಗಳ ಹಿಂದೆಯೇ ಸಮಿತಿ ರಚನೆ ಮಾಡಲಾಗಿತ್ತು. ಇತ್ತಿಚೆಗೆ ಶಿಗ್ಲಿ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ತನಿಖೆಗೆ ಮುಂದಾದಾಗ, ರಾಜಿ ಸಂಧಾನದ ಮೂಲಕ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂಬುದಾಗಿ ಅಧಿಕಾರಿಗಳ ಮೇಲೆ ಸ್ಥಳಿಯ ಹಿರಿಯರು ಪ್ರಭಾವ ಬೀರಿದ್ದಾರೆ. ಹೀಗಾಗಿ ತನಿಖೆಯೂ ಅರ್ಪೂಣಗೊಂಡಿದೆ ಎಂಬ ಆರೋಪ ಪ್ರಭಲವಾಗಿ ಕೇಳಿ ಬರುತ್ತಿದೆ.

    ಬಾಕ್ಸ್​:
    ಅಕ್ಕಮ್ಮ ಕೆರೂರು ಪಿಡಿಒ ಆಗಿದ್ದ ಸಂದರ್ಭದಲ್ಲಿ ಸರ್ವೇ ನಂ 55 ರಲ್ಲಿ 314 ಲಾನುಭವಿಗಳ ಆಯ್ಕೆ, ರಾಧಕ್ಕ ಮುದಗಲ್ಲ ಅವಧಿಯಲ್ಲಿ 123/8 ಮತ್ತು 49/1 ರಲ್ಲಿ ಕ್ರಮವಾಗಿ 59 , 127 ಲಾನುಭವಿಗಳು, ಡಿ.ವೈ. ಹುನಗುಂದ ಅವರ ಅವಧಿಯಲ್ಲಿ ಸರ್ವೇ ನಂಬರ್​ 49/4 ರಲ್ಲಿ 122 ಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.

    ಕೋಟ್​:
    ಕೆಲ ದಿನಗಳಿಂದ ಈ ಪ್ರಕರಣ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿರುವುದು ಸತ್ಯ. ಅರ್ಹ, ಅನರ್ಹರ ಕುರಿತು ಅಧಿಕಾರಿಗಳೇ ಪಟ್ಟಿ ಸಿದ್ದಪಡಿಸಿ ವರದಿ ಸಲ್ಲಿಸಲಿದ್ದಾರೆ.
    ಎಸ್​.ಎಸ್​. ಹುನುಗುಂದ
    ಸಹಾಯಕ ನಿರ್ದೇಶಕರು ತಾಲ್ಲೂಕು ಪಂಚಾಯಿತಿ ಲಕ್ಷ್ಮೇಶ್ವರ

    ಕೋಟ್​:
    ತನಿಖೆ ನಡೆಸಿ ವರದಿ ಸಲ್ಲಿಸಲು ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಆದಷ್ಟು ಬೇಗ ವರದಿ ನೀಡುವಂತೆ ಮತ್ತೊಮ್ಮೆ ಸೂಚಿಸುತ್ತೇನೆ
    ಬಸವರಾಜ ಅಡವಿಮಠ
    ಉಪ ಕಾರ್ಯದರ್ಶಿ, ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts