More

    ಕ್ರಿಸ್ತ ಜಯಂತಿ ಗೀತ ಗಾಯನ ಸ್ಪರ್ಧೆ ವಿಜೇತರು

    ಸುಂಟಿಕೊಪ್ಪ: ಕೊಡಗು ಜಿಲ್ಲಾ ಮಟ್ಟದ ಕ್ರಿಸ್ತ ಜಯಂತಿ ಗೀತ ಗಾಯನ ಸ್ಪರ್ಧೆಯಲ್ಲಿ ಹಿರಿಯ ವಿಭಾಗದಲ್ಲಿ ಕುಶಾಲನಗರದ ಸಂತ ಸೆಬಾಸ್ಟೀನ್ ದೇವಾಲಯ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

    ಸುಂಟಿಕೊಪ್ಪ ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಮಟ್ಟದ ಕ್ರಿಸ್ತ ಜಯಂತಿ ಗೀತ ಗಾಯನ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಧರ್ಮ ಕೇಂದ್ರಗಳಿಂದ 25 ತಂಡಗಳು ಭಾಗವಹಿಸಿದ್ದವು. ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ವಿಭಾಗದಲ್ಲಿ ಸಂತ ಮೈಕಲ್ ಶಾಲೆ ಮಡಿಕೇರಿ ಪ್ರಥಮ, ಫಾತಿಮಾ ಕಾನ್ವೆಂಟ್ ಕುಶಾಲನಗರ ದ್ವಿತೀಯ, ನಿರ್ಮಲ ವಿದ್ಯಾಭವನ ಹಟ್ಟಿಹೊಳೆ ತೃತೀಯ ಸ್ಥಾನ ಪಡೆದುಕೊಂಡಿತು.

    ಪದವಿಪೂರ್ವ ಹಾಗೂ ಪದವಿ ಕಾಲೇಜು ವಿಭಾಗದಲ್ಲಿ ಸೈಂಟ್ ಅನ್ನಸ್ ಕಾಲೇಜು ವಿರಾಜಪೇಟೆ ಪ್ರಥಮ, ಸಂತ ಮೈಕಲ್ಸ್ ವಿದ್ಯಾಸಂಸ್ಥೆ ಮಡಿಕೇರಿ ದ್ವಿತೀಯ, ಸೆಂಟ್ ಜೋಸೆಫ್ ಕಾನ್ವೆಂಟ್ ಮಡಿಕೇರಿ ತೃತೀಯ ಸ್ಥಾನ ಪಡೆದುಕೊಂಡಿತು. ಹಿರಿಯರ ವಿಭಾಗದಲ್ಲಿ ಸಂತ ಸಬಾಸ್ಟೀನ್ ದೇವಾಲಯ ಕುಶಾಲನಗರ ಪ್ರಥಮ, ವಿರಾಜಪೇಟೆ ಸೈಂಟ್ ಆನ್ಸಾಸ್ ದೇವಾಲಯ ದ್ವಿತೀಯ ಹಾಗೂ ಹಟ್ಟಿಹೊಳೆಯ ಹೋಲಿ ರೋಸ್ಸಾರಿ ದೇವಾಲಯ ತೃತೀಯ ಸ್ಥಾನ ಪಡೆದುಕೊಂಡಿತು.

    ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ರೋಮನ್ ಕ್ಯಾಥೋಲಿಕ್ ಅಶೋಷಿಯನ್ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಮಾತನಾಡಿದರು. ಹಟ್ಟಿಹೊಳೆಯ ಹೋಲಿ ರೋಸ್ಸಾರಿ ದೇವಾಲಯದ ಧರ್ಮಗುರು ಗಿಲ್ಬರ್ಟ್ ಡಿಸಿಲ್ವಾ, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ.ಫಾ.ಅರುಳ್‌ಸೆಲ್ವಕುಮಾರ್, ರೇ.ಫಾ.ರತ್ನಾಕರ್, ರೇ.ಫಾ.ನವೀನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜರ್ಮಿಡಿಸೋಜ, ರೋಮನ್ ಕ್ಯಾಥೋಲಿಕ್ ಅಶೋಷಿಯನ್ ಸ್ಥಾಪಕ ಅಧ್ಯಕ್ಷ ವಿ.ಎ.ಲಾರೆನ್ಸ್, ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀ ನಿರ್ಮಲಾ, ರೋಮನ್ ಕ್ಯಾಥೋಲಿಕ್ ಅಶೋಷಿಯನ್ ಉಪಾಧ್ಯಕ್ಷ ಜಾನ್ಸ್‌ನ್ ಪೀಂಟೋ, ವಿನ್ಸಿ ಡಿಸೋಜ, ಕೂಡಿಗೆ ಗ್ರಾಪಂ ಸದಸ್ಯೆ ಫಿಲೋಮಿನಾ, ಗ್ರೇಸಿ, ರೋಸ್‌ಮೇರಿ ರಾಡ್ರಿಗಸ್, ನಿವೃತ್ತ ಪೊಲೀಸ್ ಎಎಸ್‌ಐ ಅಂತೋಣಿ ಡಿಸೋಜ, ಪಿ.ಎಂ.ಬಿಜು, ತೋಮಸ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts