More

    ಕೋಡಿ ಕನ್ಯಾಣದಲ್ಲಿ ಮೂರು ನಾಮಪತ್ರ ಸಲ್ಲಿಕೆ

    ಕೋಟ: ಹಕ್ಕುಪತ್ರ ಹಾಗೂ ಜೆಟ್ಟಿ ನಿರ್ಮಾಣ ವಿಳಂಬ ವಿರೋಧಿಸಿ ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿ ನಾಗರಿಕರು ಒಟ್ಟಾಗಿ ಚುನಾವಣಾ ಬಹಿಷ್ಕಾರ ಘೋಷಿಸಿದ್ದು, ಈ ಮಧ್ಯೆ ಶುಕ್ರವಾರ ನಾಮಪತ್ರ ಸಲ್ಲಿಕೆ ಅವಕಾಶದ ಕೊನೇ ಘಳಿಗೆಯಲ್ಲಿ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

    ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿಯುವಂತೆ ಗುರುವಾರ ಜಿಲ್ಲಾಧಿಕಾರಿ ಗ್ರಾಮದಲ್ಲಿ ಸಭೆ ನಡೆಸಿ ಮನವಿ ಮಾಡಿದ್ದರು. ಶುಕ್ರವಾರ ಗ್ರಾಪಂ ನಾಲ್ಕನೇ ವಾರ್ಡ್ ಕೋಡಿ ಬೆಂಗ್ರೆ ಭಾಗದಿಂದ ಸಾಮಾನ್ಯ 1, ಹಿಂದುಳಿದ ವರ್ಗ ಅ. 1, ಸಾಮಾನ್ಯ ಮಹಿಳೆ ನಾಮಪತ್ರ ಸಲ್ಲಿಸಿದ್ದಾರೆ. ಈ ವಾರ್ಡ್‌ನಲ್ಲಿ ನಾಲ್ಕು ಸ್ಥಾನಗಳಿದ್ದು, ಪರಿಶಿಷ್ಟ ಪಂಗಡ (ಎಸ್‌ಟಿ) ಮಹಿಳೆ ಮೀಸಲಿರಿಸಿದ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮಪತ್ರ ಹಿಂತೆಗೆಯಲು 14 ಕೊನೆಯ ದಿನವಾಗಿದೆ. ಪಂಚಾಯಿತಿಯಲ್ಲಿ ಒಟ್ಟು ನಾಲ್ಕು ವಾರ್ಡ್‌ಗಳಿಗೆ 12 ಸದಸ್ಯ ಸ್ಥಾನಗಳಿದ್ದು, ಪ್ರಸ್ತುತ ನಾಲ್ಕನೇ ವಾರ್ಡ್‌ನ ಮೂರು ಸ್ಥಾನಗಳಿಗೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿದೆ.

    ಕೊನೇ ಗಳಿಗೆಯಲ್ಲಿ ನಾಮಪತ್ರ!: ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಅಪರಾಹ್ನ 3 ಗಂಟೆಗೆ ಕೊನೆಯಾಗಿದ್ದು ಕೋಡಿ ಕನ್ಯಾಣ ಗ್ರಾಪಂ ವ್ಯಾಪ್ತಿಯ ಚುನಾವಣಾ ಬಹಿಷ್ಕಾರದ ನಡುವೆ ಬೆಂಗ್ರೆ ಭಾಗದಿಂದ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕುರಿತು ಬೆಳಗ್ಗೆಯಿಂದಲೇ ಗುಸು ಗುಸು ಸುದ್ದಿ ಹರಡಿತ್ತು. ಆದರೆ ಅಪರಾಹ್ನ 2.30ಕ್ಕೆ ದಿಢೀರ್ ಆಗಿ ಮೂವರು ಅಭ್ಯರ್ಥಿಗಳು ಆಗಮಿಸಿ ನಾಮಪತ್ರ ಸಲ್ಲಿಸಿದರು. ಇನ್ನೊಂದೆಡೆ ಅಲ್ಲಿನ ಸ್ಥಳೀಯ ನಾಯಕರು ಅವರ ಮನವೊಲಿಸುವ ಪ್ರಯತ್ನ ನಡೆಸಿದರೂ ಕೊನೆಗೂ ಫಲಿಸಲಿಲ್ಲ. ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ ,ಗ್ರಾಮಲೆಕ್ಕಿಗ ಗಿರೀಶ್, ಚುನಾವಣಾಧಿಕಾರಿ ಜಾನ್ಸನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts