More

    ಕೋಡಿಯಾಲ ಹೊಸಪೇಟೆ ನಿವಾಸಿಗಳಿಂದ ವಿನೂತನ ಪ್ರತಿಭಟನೆ

    ರಾಣೆಬೆನ್ನೂರ: ತಾಲೂಕಿನ ಕೋಡಿಯಾಲ ಹೊಸಪೇಟೆಯಿಂದ ಹರಿಹರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬ ನೀತಿ ವಿರೋಧಿಸಿ ಅಲ್ಲಿನ ನಿವಾಸಿಗಳು ಸೋಮವಾರ ‘ಯಮರಾಜನು ಈ ರಸ್ತೆಯಲ್ಲಿ ವಾಸಿಸುತ್ತಿದ್ದಾನೆ. ವಾಹನ ಚಾಲಕರು ಶಪಿಸುತ್ತ ಸಹಕರಿಸಬೇಕಾಗಿ ವಿನಂತಿ’ ಎಂಬ ಬ್ಯಾನರ್ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

    ನೇತೃತ್ವ ವಹಿಸಿದ್ದ ಧನ್ಯೋಸ್ಮಿ ಭರತಭೂಮಿ ಸಂಸ್ಥೆ ಗೌರವಾಧ್ಯಕ್ಷ ಡಾ. ಜಿ.ಜೆ. ಮೆಹೆಂದಳೆ ಮಾತನಾಡಿ, ಮನುಷ್ಯ ಜೀವನದ ಮೂಲಭೂತ ಸೌಕರ್ಯಗಳಲ್ಲಿ ರಸ್ತೆಯು ಪ್ರಮುಖ ಅಂಗವಾಗಿದೆ. ಕೋಡಿಯಾಲ ಹೊಸಪೇಟೆಯಿಂದ ಹರಿಹರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಾಮಗಾರಿಯು ಕಳೆದ 3 ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದು, ವಾಹನ ಚಾಲಕರು ಒಂದಿಲ್ಲೊಂದು ಅಪಘಾತದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಅಲ್ಲದೆ ರಸ್ತೆಯಿಂದ ಹೊರಹೊಮ್ಮುವ ದೂಳಿನಿಂದ ಸಾರ್ವಜನಿಕರು ಹಲವು ಶ್ವಾಸಕೋಶಗಳ ಸಂಬಂಧಿಸಿದ ರೋಗಗಳನ್ನು ಅನಿಭವಿಸುತ್ತಿದ್ದಾರೆ. ಅಲ್ಲದೆ ರಸ್ತೆಯ ಪಕ್ಕದಲ್ಲಿನ ವಾಗೀಶ ನಗರದ ನಿವಾಸಿಗಳ ಮನೆಗಳು ಸಂಪೂರ್ಣ ದೂಳುಮಯವಾಗಿದೆ. ಇವೆಲ್ಲ ತೊಂದರೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts