More

    ಕೆವಿಜಿ ಬ್ಯಾಂಕ್​ನಿಂದ ವಿಶೇಷ ಕೃಷಿ ಸಾಲ

    ಧಾರವಾಡ: ಕೃಷಿಕರ ಆರ್ಥಿಕ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಅರ್ಹ ರೈತರನ್ನು ಸೆಪ್ಟೆಂಬರ್ ಅಂತ್ಯದೊಳಗೆ ತಲುಪಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬದ್ಧವಾಗಿದ್ದು, ವಿಕಾಸ ವರ್ಷ ಎಂಬ ವಿಶೇಷ ಕೃಷಿ ಸಾಲ ಅಭಿಯಾನ ಪ್ರಾರಂಭಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ತಿಳಿಸಿದ್ದಾರೆ.

    ನಗರದಲ್ಲಿ ಬುಧವಾರ ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಈವರೆಗೆ ಸಾಲದಿಂದ ದೂರವಿರುವ ರೈತರ ಸಮೀಕ್ಷೆಯನ್ನು ಬ್ಯಾಂಕ್ ನಡೆಸಿದೆ. ಈ ಸಂಬಂಧ ರೈತಕೂಟ, ಸ್ವಯಂ ಸೇವಾ ಸಂಸ್ಥೆ ಹಾಗೂ ಕೃಷಿ ಇಲಾಖೆಗಳ ಸಹಾಯ ಪಡೆಯಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿ ಕೃಷಿ ಸಾಲವಾಗಿ 3,700 ಕೋಟಿ ರೂ. ವಿತರಿಸಲು ಬ್ಯಾಂಕ್ ಯೋಜನೆ ರೂಪಿಸಿದೆ. ಖಾತೆ ಇಲ್ಲ ಎಂಬ ಸಣ್ಣ ಕಾರಣಕ್ಕೆ ಸಾಲ ನಿರಾಕರಿಸಬಾರದು ಎಂದು ಎಲ್ಲ 633 ಶಾಖೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಮುಂಗಾರು ಪ್ರಾರಂಭದ ಉತ್ತಮ ಲಕ್ಷಣಗಳಿದ್ದು, ಅರ್ಹ ರೈತರು ಹೊಸ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಎಂದರು.

    ಈಗಾಗಲೇ ಬೆಳೆ ಸಾಲ ತುಂಬದಿರುವ ರೈತರು ತಮ್ಮ ಬೆಳೆ ಸಾಲ ಮರುಪಾವತಿಸಿ ಹೆಚ್ಚಿನ ಮಿತಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಅವಧಿಯೊಳಗೆ ಪಾವತಿಸುವ ರೈತರಿಗೆ ಸಾಲದ ಮಿತಿಗೆ ಅನುಸರಿಸಿ ಶೇ. 4ರವರೆಗೆ ಬಡ್ಡಿ ಸಹಾಯಧನ ಲಭ್ಯವಿದೆ. ಆದರೂ ಬಹುತೇಕ ರೈತರು ಅವಧಿಯೊಳಗೆ ಮರುಪಾವತಿಸದೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೃಷಿರಂಗಕ್ಕೆ ಸಾಲ ಸೌಲಭ್ಯದ ಮೊತ್ತವನ್ನು ಹೆಚ್ಚಿಸಲು ಬ್ಯಾಂಕ್ ಕೃಷಿ ಸಾಲ ಯೋಜನೆ ರೂಪಿಸಿದೆ. ಬೆಳೆ ಸಾಲ ವಿತರಣೆಗೆ ಚುರುಕು ನೀಡಲು ಮತ್ತು ಸಕಾಲಿಕ ಪರಾಮರ್ಶೆಗೆ ಬ್ಯಾಂಕ್ ಪ್ರತಿ ಪ್ರಾದೇಶಿಕ ಕಾರ್ಯಾಲಯದಲ್ಲೂ ಓರ್ವ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. ರೈತರು ಸಾಲ ಸಂಬಂಧಿ ಸಂಶಯಗಳನ್ನು ಪರಿಹರಿಸಿಕೊಳ್ಳಲು ಸಹಾಯವಾಣಿ ಮೊ: 9108699803 ಸಂರ್ಪಸಬೇಕು ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts