More

    ಕೆಂಪು ಈರುಳ್ಳಿ ರಫ್ತಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬೆಳೆಗಾರರ ಸಂಘದ ಮನವಿ

    ಚಿಂತಾಮಣಿ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗೂ ಸಾಂಪ್ರದಾಯಿಕ ಬೆಳೆಯಾಗಿರುವ ಕೆಂಪು ಈರುಳ್ಳಿ ರಫ್ತಿಗೆ ಅವಕಾಶ ನೀಡುವಂತೆ ಬೆಳೆಗಾರರ ಸಂಘ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

    ಸಂಘದ ಜಿಲ್ಲಾಧ್ಯಕ್ಷ ಹಾಗೂ ಜಿಪಂ ಸದಸ್ಯ ಬುಕ್ಕನಹಳ್ಳಿ ಶಿವಣ್ಣ ನೇತೃತ್ವದಲ್ಲಿ ನವದೆಹಲಿಗೆ ತೆರಳಿದ್ದ ಸಂಘದ ಪದಾಧಿಕಾರಿಗಳು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಸಚಿವರು ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ, ರಫ್ತಿಗೆ ಅವಕಾಶ ಕೊಡಿಸಿಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

    ವಿಜಯವಾಣಿ ಜತೆ ಮಾತನಾಡಿದ ಬುಕ್ಕನಹಳ್ಳಿ ಶಿವಣ್ಣ, ರಫ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಲು ಸಂಘದ ಪದಾಧಿಕಾರಿಗಳೊಂದಿಗೆ ನವದೆಹಲಿಗೆ ಬಂದಿದ್ದೇವೆ, ಕೋಲಾರದ ಸಂಸದ ಎನ್.ಮುನಿಸ್ವಾಮಿಗೆ ಮನವಿ ಸಲ್ಲಿಸಿ ಬಳಿಕ ಕರ್ನಾಟಕ ಭವನದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

    10 ಸಾವಿರ ಟನ್ ದಾಸ್ತಾನು: ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂದಾಜು 10 ಸಾವಿರ ಟನ್ ಕೆಂಪು ಈರುಳ್ಳಿ ದಾಸ್ತಾನಿದ್ದು, ಬೇಡಿಕೆ ಇಲ್ಲವಾದ ಕಾರಣ ಕೊಳೆಯುತ್ತಿದೆ, ಇದರಿಂದ ನಷ್ಟಕ್ಕೊಳಗಾದ ರೈತರು ಕಂಗಾಲಾಗಿದ್ದಾರೆ ಎಂದು ಸದಾನಂದಗೌಡ ಅವರಿಗೆ ಮನವರಿಕೆ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬುಕ್ಕನಹಳ್ಳಿ ಶಿವಣ್ಣ ತಿಳಿಸಿದ್ದಾರೆ.
    ಈರುಳ್ಳಿ ಬೆಳೆಗಾರ ರೆಡ್ಡಪ್ಪ, ಆಲಪಲ್ಲಿ ಜಿ. ಕೃಷ್ಣಾರೆಡ್ಡಿ ಮತ್ತಿತರರು ಇದ್ದರು.

    ವಿದೇಶಗಳಲ್ಲೇ ಬಳಕೆ ಹೆಚ್ಚು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯುವ ಚಿಕ್ಕ ಗಾತ್ರದ ಕೆಂಪು ಈರುಳ್ಳಿಯನ್ನು ಭಾರತದಲ್ಲಿ ಬಳಸುವುದು ತುಂಬಾ ಕಡಿಮೆ. ಆದರೆ, ಮಲೇಷಿಯಾ, ಸಿಂಗಾಪುರ ಮತ್ತು ಇಂಡೋನೇಷಿಯಾದಲ್ಲಿ ಬಳಕೆ ಹೆಚ್ಚಾಗಿರುವ ಕಾರಣ, ಅಲ್ಲಿ ಹೆಚ್ಚಿನ ಬೇಡಿಕೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts