More

    ಕುಡಿಯುವ ನೀರು ಸಮಸ್ಯೆಯಾಗದಂತೆ ಎಚ್ಚರ ವಹಿಸಿ : ಮೈಸೂರು ಸಿಇಒ ಕೆ.ಎಂ. ಗಾಯತ್ರಿ ನಿರ್ದೇಶನ

    ಮೈಸೂರು: ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಜತೆಗೆ ಕುಡಿಯುವ ನೀರಿನ ಗುಣಮಟ್ಟದ ತಪಾಸಣೆ ನಡೆಸಿ ಕುಡಿಯಲು ಯೋಗ್ಯವಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಕಾರ್ಯನಿರ್ವಹಣಾಧಿ ಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯಿತ್ರಿ ನಿರ್ದೇಶನ ನೀಡಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಜಿಲ್ಲೆಯ ಎಲ್ಲ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ಮೇಲ್ತೊಟ್ಟಿ (ಓವರ್‌ಹೆಡ್ ಟ್ಯಾಂಕ್),ಕಿರುನೀರು ಸರಬರಾಜು ಯೋಜನೆ ನೀರಿನ ತೊಟ್ಟಿಗಳನ್ನು ಶುದ್ಧೀಕರಿಸಿ ಗುಣಮಟ್ಟದ ಕುಡಿಯುವ ನೀರಿನ ಪೂರೈಕೆ ಮಾಡಿ ವರದಿ ಸಲ್ಲಿಸಬೇಕು. ಜಾನುವಾರುಗ ಳಿಗೆ ಕುಡಿಯಲು ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

    ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2023-24ನೇ ಸಾಲಿನ ಕ್ರಿಯಾ ಯೋಜನೆ ಹಾಗೂ ಕಾಮಗಾರಿಗಳ ಪ್ರಗತಿ, 2023-24ನೇ ಸಾಲಿನ ಮಾನವ ದಿನಗಳ ಸೃಜನೆಯ ಪ್ರಗತಿ, ಅಮೃತ ಸರೋವರ ಯೋಜನೆ ಪ್ರಗತಿ ಹಾಗೂ ಸ್ವಚ್ಛ ಭಾರತ್ ಅಭಿಯಾನ, ವೈಯಕ್ತಿಕ ಶೌಚಗೃಹ, ಸಮುದಾಯ ಶೌಚಗೃಹ, ಘನತ್ಯಾಜ್ಯ ವಿಲೇವಾರಿ – ಘಟಕಗಳ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಮತ್ತು ಕಸ ಸಂಗ್ರಹಣೆ ಪ್ರಾರಂಭಿಸಿರುವ ಕುರಿತು ಚರ್ಚಿಸಿದರು.

    ಜಲಜೀವನ್ ಮಿಷನ್, ಕುಡಿಯುವ ನೀರು ಯೋಜನೆ, ಘನ ತ್ಯಾಜ್ಯ ವಿಲೇವಾರಿ ಸಂಬಂಧ ತರಬೇತಿ ಪಡೆದಿರುವ ಸ್ವಸಹಾಯ ಸಂಘದ ಮಹಿಳೆಯರಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕಸ ವಿಲೇವಾರಿಗೆ ವಾಹನ ಚಾಲನೆಗೆ ಅವಕಾಶ ನೀಡಲಾಗುವುದು ಎಂದರು.

    ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಇಲ್ಲದ ಕಡೆಗಳಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು. ಬಾಕಿ ಮತ್ತು ಪ್ರಸ್ತುತ ಸಾಲಿನ ಬೇಡಿಕೆ ತೆರಿಗೆ ವಸೂಲಾತಿ ಮಾಡಲು ಕಟ್ಟುನಿಟ್ಟಿನ ಕ್ರಮಹಿಸುವಂತೆ ಸೂಚಿಸಿದರು.

    ಸಭೆಯಲ್ಲಿ ಉಪಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಧನುಷ್, ಮುಖ್ಯಲೆಕ್ಕಾಧಿಕಾರಿ ಎಚ್.ಇ. ನಂದಾ, ಯೋಜನಾ ನಿರ್ದೇಶಕಿ ಸವಿತಾ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts