More

    ಕಿರಣ್‌ಗೌಡ ನಾಮಪತ್ರಕ್ಕೆ ನಗರದ ವಿವಿಧ ದೇವಾಲಯದಲ್ಲಿ ಪೂಜೆ

    ಹಾಸನ: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಜಿಲ್ಲೆಯಲ್ಲಿ ತೀವ್ರ ವಿರೋಧ ನಡುವೆಯೇ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಅವರ ಪರಮಾಪ್ತ ಎಚ್.ಪಿ.ಕಿರಣ್‌ಗೌಡ ಶನಿವಾರ ನಾಮಪತ್ರಕ್ಕೆ ನಗರದ ವಿವಿಧ ದೇವಾಲಯಗಳಿಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾರೆ.
    ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದರೆ, ಹಾಸನದಲ್ಲಿ ಕೆಲವು ಕಡೆ ಕುಸ್ತಿ ಮುಂದುವರಿದೇ ಇದೆ. ಇದಕ್ಕೆ ಪುಷ್ಟಿ ಎಂಬಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವ ಕಿರಣ್‌ಕುಮಾರ್ ಶನಿವಾರ ನಗರದ ಸಿದ್ದೇಶ್ವರ ಸ್ವಾಮಿ ದೇವಾಲಯ ಹಾಗೂ ಇತರೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದರು.
    ಈ ವೇಳೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದ್ದರೂ ಹಾಸನ ಕ್ಷೇತ್ರದ ಅಭ್ಯರ್ಥಿ ಯಾರೆಂದು ಅಂತಿಮ ಆಗಿಲ್ಲ. ಹೀಗಾಗಿ ಟಿಕೆಟ್ ಆಕಾಂಕ್ಷಿಯಾಗಿರುವ ನಾನು, ನನಗೂ ಟಿಕೆಟ್ ಸಿಗಬಹುದು ಎಂಬ ವಿಶ್ವಾಸದಲ್ಲಿ ಪ್ರಚಾರ ಆರಂಭಿಸಿದ್ದೇನೆ ಎಂದರು.
    ಈಗಾಗಲೇ ನಾಮಪತ್ರ ಅರ್ಜಿ ತಂದಿದ್ದೇನೆ. ನಾನು ಈಗಲೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಕೊನೆ ಹಂತದಲ್ಲಿ ನನಗೆ ಅವಕಾಶ ಸಿಕ್ಕರೆ ತಯಾರಿ ಮಾಡಲು ಆಗಲ್ಲ ಎಂಬ ಕಾರಣದಿಂದ, ಈಗಿಂದಲೇ ತಯಾರಿ ಶುರು ಮಾಡಿದ್ದೇನೆ ಎಂದು ತಿಳಿಸಿದರು.
    ಈಗಲೂ ನನಗೇ ಟಿಕೆಟ್ ಸಿಗೋ ವಿಶ್ವಾಸ ಇದೆ. ನನ್ನ ರಾಜಕೀಯ ಗುರು ಪ್ರೀತಂಗೌಡ ಅವರು. ನಾನು ಇಂದಿನಿಂದ ಪ್ರಚಾರ ಶುರು ಮಾಡಿರುವುದರ ಹಿಂದೆ ಅವರು ಇಲ್ಲ, ಅವರ ಗಮನಕ್ಕೆ ತಾರದೇ ನಾನು ಪ್ರಚಾರ ಆರಂಭಿಸಿದ್ದೇನೆ ಎಂದು ತಿಳಿಸಿದರು.
    ನಮ್ಮ ಕಾರ್ಯಕರ್ತರ ಅಭಿಪ್ರಾಯದಂತೆ ನಾನು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೆನೆಯೇ ಹೊರತು, ಬಂಡಾಯ ಅಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
    ಜಿಲ್ಲೆಗೆ ಅಧಿಕೃತವಾಗಿ ಮೈತ್ರಿ ಅಭ್ಯರ್ಥಿ ಯಾರು ಎಂಬುದು ಖಾತ್ರಿಯಾಗಿಲ್ಲ. ಉಭಯ ಪಕ್ಷಗಳ ನಡುವೆ ಒಂದೇ ಒಂದು ಜಂಟಿ ಸಭೆ ಆಗಿಲ್ಲ. ಹಾಸನ ಮಾತ್ರವಲ್ಲ, ಮಂಡ್ಯದಲ್ಲೂ ಗೊಂದಲ ಇದೆ. ಹಾಗಾಗಿ ನಮಗೆ ಟಿಕೆಟ್ ಕೊಡಿ ಎಂದು ಕೇಳೋದು ನಮ್ಮ ಪ್ರಯತ್ನ.
    ಅದನ್ನು ಮಾಡುತ್ತಿದ್ದೇನೆ. ಪ್ರೀತಂಗೌಡ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದು ಸದ್ಯ ಬ್ಯುಸಿಯಾಗಿದ್ದಾರೆ. ಆದರೆ ಅವರ ಆಶೀರ್ವಾದ ನನ್ನ ಮೇಲೆ ಇದ್ದೇ ಇರುತ್ತೆ ಎಂದ ಅವರು, ಪಕ್ಷ ಏನು ಸೂಚನೆ ಕೊಡುತ್ತೋ ಅದನ್ನ ನಾನು ಮಾಡ್ತೇನೆ. ಇದು ಪಕ್ಷದ ವಿರುದ್ಧ ಬಂಡಾಯ ಅಲ್ಲ. ನಾನು ಬಿಜೆಪಿ ಪರ ಪ್ರಚಾರ ಶುರು ಮಾಡಿದ್ದೇನೆ. ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಎನ್ನೋದು ಜನರ ಭಾವನೆ ಇದೆ. ಹಾಗಾಗಿ ನಾವು ಪಕ್ಷದ ಪರ ಪ್ರಚಾರ ಆರಂಭಿಸಿದ್ದೇವೆ ಎಂದು ಹೇಳಿದರು.
    ಬಿಜೆಪಿ ಮುಖಂಡರಾದ ನಾರಾಯಣಗೌಡ, ದೀಕ್ಷಿತ್, ಪ್ರೀತಿ ವರ್ಧನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts