More

    ಕಿಮ್್ಸ ವೈದ್ಯರ ಪ್ರತಿಭಟನೆ

    ಹುಬ್ಬಳ್ಳಿ: 7ನೇ ವೇತನ ಆಯೋಗದ ವರದಿಯಂತೆ ಶೀಘ್ರವೇ ಹಿಂಬಾಕಿ ಸಮೇತ ಸಂಬಳ ಕೊಡಬೇಕು ಎಂದು ಒತ್ತಾಯಿಸಿ ಕಿಮ್್ಸ ಟೀಚರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಇಲ್ಲಿನ ಕಿಮ್್ಸ ಮುಂದೆ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೋಮವಾರ ಪ್ರತಿಭಟನೆ ನಡೆಸಿದರು.

    ಹಿಂಬಾಕಿ ಸಮೇತ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಸಂಬಳ ಕೊಟ್ಟಿಲ್ಲ. ರಾಜ್ಯದ ಇತರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಈಗಾಗಲೇ ಕೊಡಲಾಗಿದೆ. ಆದರೆ, ಕಿಮ್ಸ್​ನಲ್ಲಿ ಇದುವರೆಗೆ ಜಾರಿಯಾಗಿಲ್ಲ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಶೀಘ್ರವೇ ಸಂಬಳ ನೀಡಬೇಕು. ಇಲ್ಲವಾದರೆ ಸೆ. 28ರಿಂದ ತುರ್ತಚಿಕಿತ್ಸೆ ಹೊರತುಪಡಿಸಿ ಇತರ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ಅವರಿಗೆ ಮನವಿಪತ್ರ ರವಾನಿಸಿದರು.

    ಅಸೋಸಿಯೇಷನ್ ಅಧ್ಯಕ್ಷ ಡಾ. ಎಸ್.ಎಸ್. ಶಿರೋಳ, ಕಾರ್ಯದರ್ಶಿ ಡಾ. ಅರುಣ ವಾಳ್ವೇಕರ, ಡಾ. ಈಶ್ವರ ಹೊಸಮನಿ, ಡಾ. ಸೂರ್ಯಕಾಂತ ಕಲ್ಲೂರಾಯ, ಡಾ. ಪ್ರಕಾಶ ವಾರಿ, ಡಾ. ಮಂಜುನಾಥ ನೇಕಾರ, ಡಾ. ಸುರೇಶ ಹುಚ್ಚಣ್ಣವರ, ಡಾ. ವೆಂಕಟೇಶ ಮೊಗೇರ, ಡಾ. ಜಿ.ಸಿ. ಪಾಟೀಲ, ಡಾ. ರಾಜಶಂಕರ ಎಸ್., ಡಾ. ಜಯದೀಪ ಕರತ್ಕಲ್, ಡಾ. ಗೋಪಾಲಕೃಷ್ಣ ಮಿತ್ರ, ಡಾ. ರವೀಂದ್ರ ಖಾಸನೀಸ, ಡಾ. ಶಿಲ್ಪಾ ಹುಚ್ಚಣ್ಣವರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts