More

    ಕಾಶಿಗೆ ತೆರಳಿದ ರೋಣದ ರಥ

    ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನಲ್ಲಿ ನಿರ್ವಣಗೊಂಡಿರುವ ರಥ ಬುಧವಾರ ಮಧ್ಯಾಹ್ನ ವೀರಶೈವ ಸುಕ್ಷೇತ್ರ ಕಾಶಿಯಾತ್ರೆ ಆರಂಭಿಸಿತು. ಗದಗ ಜಿಲ್ಲೆಯ ಖ್ಯಾತ ರಥ ಶಿಲ್ಪಿ ಪಾಂಡುರಂಗ ಬಡಿಗೇರ ನೇತೃತ್ವದಲ್ಲಿ ನಿರ್ವಿುಸಲಾಗಿರುವ ರಥ ಕಾಶಿಯ ರಥ ಬೀದಿಯಲ್ಲಿ ಸಂಚರಿಸಲಿದೆ.

    ನೂತನವಾಗಿ ನಿರ್ವಿುಸಲಾದ ರಥಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ವಿಆರ್​ಎಲ್ ವಾಹನದ ಮೂಲಕ ವಾರಣಾಸಿಯ ಜಂಗಮವಾಡಿ ಮಠಕ್ಕೆ ಕಳುಹಿಸಲಾಯಿತು. ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನೂತನ ರಥವನ್ನು ನಿರ್ವಣಕ್ಕೆ ಸಂಕಲ್ಪ ಮಾಡಿದ್ದರು. ವಾರಣಾಸಿಯ ಜಂಗಮವಾಡಿ ಮಠದಲ್ಲಿನ ಹಳೆಯ ರಥ ಶಿಥಿಲಗೊಂಡಿರುವುದರಿಂದ ನೂತನ ರಥ ನಿರ್ವಿುಸುವಂತೆ ಭಕ್ತರಲ್ಲಿ ಕೇಳಿಕೊಂಡಿದ್ದರು.

    ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಕುಬೇರಗೌಡ ಹಿರೇಗೌಡರು ರಥಕ್ಕೆ ಬೇಕಾಗುವಷ್ಟು ಕಟ್ಟಿಗೆ ಸೇವೆ ಮಾಡುವುದಾಗಿ ಒಪ್ಪಿಕೊಂಡಿದ್ದರು. ಖ್ಯಾತ ಶಿಲ್ಪಿ ಪಾಂಡುರಂಗ ಬಡಿಗೇರ ರಥ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಹೊಳೆಆಲೂರು ಗ್ರಾಮದಿಂದ ವಾರಣಾಸಿಯ ಜಂಗಮವಾಡಿ ಮಠಕ್ಕೆ ರಥವನ್ನು ಮುಟ್ಟಿಸುವ ಜವಾಬ್ದಾರಿಯನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ತೆಗೆದುಕೊಂಡಿದ್ದಾರೆ.

    ಪಾಂಡುರಂಗ ಬಡಿಗೇರ ಸೇರಿ 15ಕ್ಕೂ ಹೆಚ್ಚು ಶಿಲ್ಪಿಗಳು ಸಾಗವಾನಿ ಮತ್ತು ದಪ್ಪ ಕರಿಮತ್ತಿ ಕಟ್ಟಿಗೆ ಬಳಸಿ ಅಷ್ಟಮೂಲಿ ಬ್ರಹ್ಮ ರಥವನ್ನು ನಿರ್ಮಾಣ ಮಾಡಿದ್ದಾರೆ. ಕಾಶಿಯ ಶ್ರೀ ಜಗದ್ಗುರು ವಿಶ್ವಾರಾಧ್ಯರು, ಗಣೇಶ, ವಾಸ್ತು ಪುರುಷ ಮೂರ್ತಿಗಳನ್ನು ಒಳಗೊಂಡು ವೀರಶೈವ ಸಂಪ್ರದಾಯ ಪದ್ಧತಿಯಂತೆ ರಥ ಸಿದ್ಧಪಡಿಸಿದ್ದಾರೆ.

    ರಥ ಹಾಗೂ ರಥದ ಚಕ್ರಗಳು ಹಾಗೂ ರಥಕ್ಕೆ ಬೇಕಾಗುವಂತಹ ಕಚ್ಚಾವಸ್ತುಗಳನ್ನು ವಿಆರ್​ಎಲ್ ವಾಹನದ ಮೂಲಕ ಕಳುಹಿಸಿ ಕೊಡಲಾಯಿತು. ಜಂಗಮವಾಡಿ ಮಠದಲ್ಲಿ ಬಾಕಿ ಇರುವ ಕೆಲಸ ಮುಗಿಸಿ ರಥವನ್ನು ಪರಿಪೂರ್ಣವಾಗಿ ನಿರ್ಮಾಣ ಮಾಡಲಾಗುವುದು. ಪ್ರತಿ ಶಿವರಾತ್ರಿಯಲ್ಲಿ ಜಂಗಮವಾಡಿ ಮಠದಿಂದ ಕಾಶಿ ವಿಶ್ವನಾಥ ಸನ್ನಿಧಿಯವರಿಗೆ ಭವ್ಯ ರಥೋತ್ಸವ ನಡೆಯಲಿದ್ದು, ಈ ಬಾರಿ ಗದಗ ಜಿಲ್ಲೆಯ ನೂತನ ರಥವನ್ನು ಎಳೆಯಲಾಗುವುದು.

    ರಾಜ್ಯ ಸೇರಿದಂತೆ ದೇಶದ ನಾನಾ ಕಡೆ ಈವರೆಗೆ 51 ರಥಗಳನ್ನು ನಿರ್ವಿುಸಿದ್ದು, ಈ ಬಾರಿ ಉಚಿತವಾಗಿ ರಥ ನಿರ್ವಿುಸಿ ಕಾಶಿ ಜಂಗಮವಾಡಿ ಮಠಕ್ಕೆ ಕಳುಹಿಸಿ ಕೊಟ್ಟಿದ್ದು, ತುಂಬಾ ಸಂತೋಷವಾಗಿದೆ.

    | ಪಾಂಡುರಂಗ ಬಡಿಗೇರ, ರಥ ಶಿಲ್ಪಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts