More

    ಕಾರ್ ಖರೀದಿ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ

    ಕೆಂಭಾವಿ : ಮಳೆ ಇಲ್ಲದೆ ರೈತರು ಸಾಕಷ್ಟು ತೊಂದರೆಯಲ್ಲಿದ್ದು, ಸರ್ಕಾರ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆಗ್ರಹಿಸಿದರು.

    ಕೆಂಭಾವಿ ವಲಯದಲ್ಲಿ ಶಾಸಕ ಅರವಿಂದ ಬೆಲ್ಲದ ನೇತೃತ್ವದ ಬಿಜೆಪಿ ಪಕ್ಷದ ಬರಗಾಲ ಅಧ್ಯಯನ ತಂಡ ಶುಕ್ರವಾರ ಐನಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾರ್ ಮತ್ತು ಪಲ್ಲಂಗ ಖರೀದಿ ಬಿಟ್ಟು ಕೂಡಲೇ ರೈತರಿಗೆ ಬರ ಪರಿಹಾರದ ಹಣ ನೀಡುವಲ್ಲಿ ಹೆಚ್ಚಿನ ಗಮನ ಹರಿಸಬೇಕು. ರಾಷ್ಟಿçÃಯ ವಿಪತ್ತು ನಿರ್ವಹಣಾ ನಿಧಿಯಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡಿದ್ದರೂ ಸರ್ಕಾರ ಅದನ್ನು ವಿನಿಯೋಗಿಸಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

    ಪಕ್ಷದ ವತಿಯಿಂದ ೮ ತಂಡಗಳನ್ನು ರಚಿಸಿ ಬರಗಾಲ ಅಧ್ಯಯನ ಕೈಗೊಂಡಿದ್ದು, ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಗ್ರಾಮದ ಬಸಯ್ಯ ಸ್ವಾಮಿ ಅವರ ಹೊಲದಲ್ಲಿ ಹಾಳಾದ ಹತ್ತಿ ಬೆಳೆಯನ್ನು ವೀಕಿಷಿಸಿದರು.

    ಸಂಸದ ಅಮರೇಶ್ವರ ನಾಯಕ, ಮಾಜಿ ಶಾಸಕ ನರಸಿಂಹ ನಾಯಕ (ರಾಜುಗೌಡ), ಪಕ್ಷದ ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ), ಡಾ.ಚಂದ್ರಶೇಖರ ಸುಬೇದಾರ, ಅಮೀನರೆಡ್ಡಿ ಯಾಳಗಿ, ಸುರೇಶ ಸಜ್ಜನ್, ಕೆ.ಕರೆಪ್ಪ, ಎಚ್.ಸಿ.ಪಾಟೀಲ್, ಗುರು ಕಾಮಾ, ರಾಜುಗೌಡ ಉಕಿನಾಳ, ರಾಜು ಗೂಗಲ್, ಅಡಿವೆಪ್ಪ ಜಾಕಾ, ಶ್ರೀದೇವಿ ಶೆಟ್ಟಿಹಾಳ, ದೇವೇಂದ್ರ ಕಾನಿಹಾಳ, ಭೀಮರಾಯ ಭಂಡಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts