More

    ಕಾರ್ವಿುಕರ ನೋಂದಣಿಗೆ ಪೋರ್ಟಲ್

    ಚಿಕ್ಕಮಗಳೂರು: ನಕಲಿ ಆಧಾರ್ ಸಂಖ್ಯೆ ಬಳಸಿ ಬಾಂಗ್ಲಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ವಲಸಿಗರು ಕಾಫಿನಾಡಿಗೆ ಆಗಮಿಸುತ್ತಿರುವ ದೂರು ದಾಖಲಾಗಿರುವುದರಿಂದ ಜಿಲ್ಲೆಯಲ್ಲಿ ಅಕ್ರಮ, ಕ್ರಿಮಿನಲ್ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ‘ಕಾರ್ವಿುಕ ಪೋರ್ಟಲ್ ’ ಹೊಸ ಸಾಫ್ಟ್​ವೇರ್ ಪರಿಚಯಿಸಿ ಕಾಫಿ ತೋಟಕ್ಕೆ ಕೆಲಸ ಅರಸಿ ಬರುವ ಕಾರ್ವಿುಕರ ಮೇಲೆ ಹದ್ದಿನ ಕಣ್ಣಿಡಲು ಸಜ್ಜಾಗಿದೆ.  ಎಸ್ಪಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹಾಗೂ ಎಸ್ಪಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಕಾಫಿ ಬೆಳೆಗಾರರ ಸಭೆಯಲ್ಲಿ ಕಾಫಿ ಪ್ಲಾಂಟರ್ ‘ಕಾರ್ವಿುಕ ಪೋರ್ಟಲ್’ ಹೊಸ ಸಾಫ್ಟ್​ವೇರ್ ಪರಿಚಯಿಸಿದ್ದು ಜಿಲ್ಲಾಡಳಿತದ ಕ್ರಮಕ್ಕೆ ಕಾಫಿ ಬೆಳೆಗಾರರು ಬೆಂಬಲ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಬಾಂಗ್ಲಾ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಿಂದ ವಲಸಿಗರು ಬಂದ ಕಾರ್ವಿುಕರು ತಪ್ಪು ಆಧಾರ್ ಸಂಖ್ಯೆ ನೀಡಿ ಕಾಫಿ ತೋಟಗಳಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆಂದು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಜಿಲ್ಲೆಗೆ ಬರುವ ಎಲ್ಲ ಕಾರ್ವಿುಕರ ವಿವರ ಕಲೆಹಾಕಲು ಪ್ರಾರಂಭಿಕವಾಗಿ ಕಾರ್ವಿುಕರ ನೋಂದಣಿ ವ್ಯವಸ್ಥೆ ಮಾಡಿದ್ದು, ಸದ್ಯಕ್ಕೆ ಕಾಫಿ ತೋಟಗಳಿಗೆ ಮಾತ್ರ ನೂತನ ಸಾಫ್ಟ್​ವೇರ್ ಅನ್ವಯವಾಗಲಿದ್ದು ಮುಂದಿನ ದಿನಗಳಲ್ಲಿ ಇತರೆ ಕಾರ್ವಿುಕರಿಗೂ ಅಳವಡಿಸಲು ಅವಕಾಶವಿದೆ ಎಂದು ತಿಳಿಸಿದರು.

    ಕಾಫಿ ತೋಟಗಳಿಗೆ ಬರುವ ಕಾರ್ವಿುಕರ ಸಂಪೂರ್ಣ ಮಾಹಿತಿ ಕಲೆಹಾಕಿ ಕೆಲಸಕ್ಕೆ ಸೇರಿಸಿಕೊಂಡರೆ ರಕ್ಷಣೆ ಹಿತದೃಷ್ಟಿಯಿಂದ ಬೆಳೆಗಾರರು, ಕಾರ್ವಿುಕರು, ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಗೂ ಅನುಕೂಲವಾಗುತ್ತದೆ. ನಕಲಿ ಆಧಾರ್ ಸಂಖ್ಯೆ ಬಳಸಿ ಬಾಂಗ್ಲಾ, ಪಾಕಿಸ್ತಾನದಿಂದ ಕಾರ್ವಿುಕರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರ ರಕ್ಷಣೆ ಹಿತದೃಷ್ಟಿಯಿಂದ ಇತ್ತೀಚೆಗೆ ಸಭೆ ನಡೆಸಲಾಗಿತ್ತು. ಕಾಫಿ ತೋಟಗಳಿಗೆ ಕೆಲಸ ಅರಸಿ ಬರುವ ಕಾರ್ವಿುಕರ ವಿವರವನ್ನು ಮಾಲೀಕರು ನೋಂದಣಿ ಮಾಡುವ ಮೂಲಕ ಅವರ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ. ತೋಟಗಳಲ್ಲಿ ಅಕ್ರಮ ಚಟುವಟಿಕೆ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಪತ್ತೆಹಚ್ಚಿ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ. ಕಾರ್ವಿುಕರಿಗೆ ವೋಟರ್ ಐಡಿ, ಆಧಾರ್ ನೋಂದಣಿ ಮಾಡಿಸಿ ಸರ್ಕಾರಿ ಯೋಜನೆಗಳನ್ನು ನೀಡಲೂ ನೂತನ ಸಾಫ್ಟ್ ವೇರ್ ಸಹಕಾರಿಯಾಗಲಿದೆ ಎಂದರು.

    ಜಿಲ್ಲಾಡಳಿತ, ಪೊಲೀಸ್, ಕಾರ್ವಿುಕ ಇಲಾಖೆ ಸಹಯೋಗದಲ್ಲಿ ಸಾಫ್ಟ್​ವೇರ್ ಪ್ರಾರಂಭಿಸಿದ್ದು 7 ದಿನ ಪ್ರಾಯೋಗಿಕ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಬೆಳೆಗಾರರು ಎಲ ್ಲೕತಿ ಪ್ರಯೋಗ ಮಾಡಿ ಸಾಫ್ಟ್​ವೇರ್ ಕುರಿತು ತಿಳಿದುಕೊಳ್ಳಬಹುದು. ಕಾಫಿ ಬೋರ್ಡ್ ಡಿಡಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು ಬೆಳೆಗಾರರು ಸ್ವಯಂಪ್ರೇರಿತವಾಗಿ ಮುಂದೆ ಬಂದು ನೀಡಿದ ಸಲಹೆ, ಸೂಚನೆಗಳನ್ನು ಅಳವಡಿಸಿ ಮುಂದಿನ 15 ದಿನದಲ್ಲಿ ಜಿಲ್ಲೆಯಲ್ಲಿ ಅಧಿಕೃತವಾಗಿ ಸಾಫ್ಟ್​ವೇರ್ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದ್ದು ಮುಂದೆ ಈ ವ್ಯವಸ್ಥೆ ರಾಜ್ಯ ಹಾಗೂ ದೇಶವ್ಯಾಪಿ ವಿಸ್ತರಿಸಬಹುದು ಎಂದು ವಿವರಿಸಿದರು.  ಲಾಗಿನ್​ನಲ್ಲಿ ಪ್ಲಾಂಟರ್​ಗಳೇ ಕಾರ್ವಿುಕರ ವಿವರ ದಾಖಲಿಸಬೇಕು. ಅಧಿಕಾರಿ, ಸಿಬ್ಬಂದಿ ಮೇಲ್ವಿಚಾರಣೆ ಮಾತ್ರ ಮಾಡುತ್ತಾರೆ. ಮಾಹಿತಿಯನ್ನು ಯಾರಿಗೂ ಶೇರ್ ಮಾಡುವ ವ್ಯವಸ್ಥೆಯಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts