More

    ಕಾರ್ಮಿಕರ ಬಾಕಿ ವೇತನ ಬಿಡುಗಡೆಗೆ ಆಗ್ರಹ


    ಯಾದಗಿರಿ: ಹೊರಗುತ್ತಿಗೆ ಅಧಾರದ ಮೇಲೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಬಾಕಿ ವೇತನ ಬಿಡುಗಡೆಗೊಳಿಸಲು ಆಗ್ರಹಿಸಿ ಗುರುವಾರ ನಗರದ ಜಿಲ್ಲಾಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯಗಳ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

    ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಯಾದಗಿರಿ ಮತ್ತು ಸುರಪುರ ತಾಲೂಕಿನ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಮೆಟ್ರಿಕ್ ಪೂರ್ವ ವಸತಿನಿಲಯ ಕಾರ್ಮಿಕರ ಫೆಬ್ರವರಿ, ಮಾರ್ಚ್ ಸೇರಿ 4 ತಿಂಗಳ ಬಾಕಿ ವೇತನ ಬಿಡುಗಡೆಗೊಳಿಸಿಲ್ಲ. ಇದರಿಂದ ಕಾಮರ್ಿಕರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನ ಹಾಸ್ಟೆಲ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ ವೇತನವು ಸರಿಯಾಗಿ ಜಮೆಯಾಗುತ್ತಿಲ್ಲ. ಸುರಪುರ ತಾಲೂಕಿನಲ್ಲಿ ಸಹ ಜನವರಿ ತಿಂಗಳಿಂದ ಜೂನ್ನ ವರೆಗೆ 6 ತಿಂಗಳ ವೇತನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹಲವು ಬಾರಿ ಸಂಘದಿಂದ ಅಕಾರಿಗಳ ಜತೆ ಮೌಖಿಕವಾಗಿ ಚರ್ಚೆಮಾಡಿದರೂ ಯಾವುದೆ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ವರ್ಷಕ್ಕೆ ಕೇವಲ 2 ಬಾರಿ ವೇತನ ನೀಡಿದರೆ ಬಡ ಕಾರ್ಮಿಕರ ಜೀವನ ನಡೆಸುವುದು ಸಾಧ್ಯವಿಲ್ಲ. ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದ ಅನೇಕ ಕಾರ್ಮಿಕರ ಸಂಸಾರುಗಳು ಇಂದು ವೇತನ ನೀಡದ ಕಾರಣ ಬೀದಿಗೆ ಬಂದಿವೆ. ಕೂಡಲೇ ಸಮಾಜಕಲ್ಯಾಣ ಇಲಾಖೆ ಬಾಕಿ ವೇತನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

    ಸಂಘದ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ಎಐಯುಟಿಯುಸಿ ಜಿಲ್ಲಾ ಕಾರ್ಯದಶರ್ಿ ರಾಮಲಿಂಗಪ್ಪ ಬಿ.ಎನ್., ಗಜಾನಂದ, ಶ್ರೀಕಾಂತ್, ರಮೇಶ್, ಭೀಮಾಶಂಕರ, ಶ್ರೀದೇವಿ, ಜಗದೇವಿ, ರೇಣುಕಾ, ಸರಿತಾ, ಮರೆಮ್ಮ, ನಾಗಮ್ಮ, ಪರಿಮಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts