More

    ಕಾರವಾರ ನಗರಸಭೆ ಅಧ್ಯಕ್ಷರಾಗಿ ಡಾ.ನಿತಿನ್ ಪಿಕಳೆ ಆಯ್ಕೆ

    ಕಾರವಾರ: ಇಲ್ಲಿನ ನಗರಸಭೆಯ ಅಧ್ಯಕ್ಷರಾಗಿ ಬಿಜೆಪಿಯ ಡಾ.ನಿತಿನ್ ಪಿಕಳೆ ಹಾಗೂ ಪಕ್ಷೇತರವಾಗಿ ಗೆದ್ದು, ಬಿಜೆಪಿಗೆ ಬೆಂಬಲ ನೀಡಿದ ಪ್ರಕಾಶ ನಾಯ್ಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

    ಎಸಿ ಪ್ರಿಯಾಂಗಾ ಎಂ.ಅವರ ನೇತೃತ್ವದಲ್ಲಿ ಭಾನುವಾರ ಚುನಾವಣೆ ಆಯೋಜಿಸಲಾಗಿತ್ತು. ಬಿಜೆಪಿಯಿಂದ ಪೂರ್ವ ನಿಯೋಜಿತ ಇಬ್ಬರು ಅಭ್ಯರ್ಥಿಗಳು ಸಕಾಲಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಕಾಂಗ್ರೆಸ್ ನಿಂದ ಆಕಾಂಕ್ಷಿಗಳು ವಿಳಂಬವಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರಿಂದ ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸಲಿಲ್ಲ. ನಂತರ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೊಷಿಸಿದರು. ಬಿಜೆಪಿಯ ಎಲ್ಲ 11 ಸದಸ್ಯರು, ಜೆಡಿಎಸ್​ನ ನಾಲ್ವರು, ಹಾಗೂ ಐವರು ಪಕ್ಷೇತರ ಅಭ್ಯರ್ಥಿಗಳು ಸೇರಿ 20 ಕೌನ್ಸಿಲರ್​ಗಳು ಹಾಜರಿದ್ದರು. ಕಾಂಗ್ರೆಸ್ ಸದಸ್ಯರು ಈ ಸಂದರ್ಭದಲ್ಲಿ ಗೈರಾಗಿದ್ದರು.

    ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೊಷಣೆಗೂ ಮುನ್ನವೇ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಭಿನಂದನೆ ಸಲ್ಲಿಸಿದರು. ಶಾಸಕಿ ರೂಪಾಲಿ ನಾಯ್ಕ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಭೇಟಿಯಾಗಿ ಅಭಿನಂದಿಸಿದರು. ‘ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರವಿದ್ದು, ನಗರದಲ್ಲಿ ಬಿಜೆಪಿ ಆಡಳಿತ ಬಂದಿರುವುದು ಇನ್ನಷ್ಟು ಖುಷಿಯಾಗಿದೆ. ಇದು ನಗರದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ’ ಎಂದು ಹೇಳಿದರು.

    ಶಾಸಕಿ ರೂಪಾಲಿ ನಾಯ್ಕ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ಉಳ್ವೇಕರ್ ಅವರ ನೇತೃತ್ವದಲ್ಲಿ ನನಗೆ ಅಧ್ಯಕ್ಷ ಸ್ಥಾನ ದೊರಕಿದೆ. ನನ್ನ ಅವಧಿಯಲ್ಲಿ ಕಾರವಾರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಿದ್ದೇನೆ.

    ಡಾ.ನಿತಿನ್ ಪಿಕಳೆ, ಕಾರವಾರ ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts