More

    ಕಾಮಣ್ಣನ ಅಗ್ನಿ ಸ್ಪರ್ಶಕ್ಕೂ ಸ್ಪರ್ಧೆ

    ಕಲಘಟಗಿ: ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯನ್ನು ಪ್ರತಿವರ್ಷದಂತೆ ಈ ಬಾರಿಯೂ ಸಾಂಪ್ರದಾಯಿಕ ಧಾರ್ವಿುಕ ವಿಧಿ-ವಿಧಾನಗಳೊಂದಿಗೆ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.

    ಗ್ರಾಮದಲ್ಲಿ ಅನಾದಿಕಾಲದಿಂದ ಹೋಳಿ ಹುಣ್ಣಿಮೆಯನ್ನು ವಿಶೇಷ ಹಬ್ಬವನ್ನಾಗಿ ಆಚರಿಸಲಾಗá-ತ್ತದೆ. ಹುಣ್ಣಿಮೆ ಹಿಂದಿನ ದಿನ ಗ್ರಾಮದ ಗೌಡಕಿ ಮನೆತನವಾದ ಸಂಗನಗೌಡ ತಿಪ್ಪನಗೌಡ ಪಾಟೀಲ ಅವರು ಈ ಕಾಮಣ್ಣನ ಕುತ್ತಿಗೆಯನ್ನು ಮಾಡಿಸಿ ಗ್ರಾಮದ ಗ್ರಾಮ ಪಂಚಾಯಿತಿ ಸನಿಹದಲ್ಲಿ ಕೂರಿಸುತ್ತಾರೆ. ಇದಕ್ಕೆ ಸರಕಾರಿ ಕಾಮಣ್ಣ ಎಂದು ಕರೆಯಲಾಗುತ್ತದೆ.

    ಹುಣ್ಣಿಮೆ ಹಿಂದಿನ ದಿನ ಸಂಜೆ ಸá-ಮಾರು 7 ಗಂಟೆಗೆ ಗೌಡಕಿ ಮನೆತನದಿಂದ ಸರಕಾರಿ ಕಾಮಣ್ಣನಿಗೆ ಸಕ್ಕರಿಮಾಲೆ, ಬಾಸಿಂಗ, ಹೋಳಿಗೆ, ಕಡುಬುಗಳನ್ನು ನೈವೇದ್ಯ ಮಾಡಲಾಗá-ತ್ತದೆ. ತಮಟೆ, ಭಜನೆ ಮತ್ತಿತರ ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಮೆರವಣಿಗೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗá-ತ್ತದೆ. ನಂತರ ಗ್ರಾಮಸ್ಥರು ನೈವೇದ್ಯ ತೆಗೆದುಕೊಂಡು ಹೋಗá-ವ ಪದ್ಧತಿ ರೂಢಿಯಲ್ಲಿದೆ.

    ಹೋಳಿ ಹುಣ್ಣಿಮೆ ಆಚರಣೆಗೆ ಕಟ್ಟಿಗೆ, ಕುಳ್ಳು ಕದ್ದು ತರá-ವುದು ಹಿಂದಿನಿಂದಲೂ ರೂಢಿಯಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಅದು ಕ್ಷೀಣಿಸುತ್ತ ಬಂದಿರುವುದರಿಂದ ಗ್ರಾಮದ ಹರಿಜನ ಸಮುದಾಯದವರು ಹುಣ್ಣಿಮೆ ಹಿಂದಿನ ದಿನ ಮನೆ-ಮನೆಗೆ ತೆರಳಿ ಕಟ್ಟಿಗೆ ಕುಳ್ಳನ್ನು ತೆಗೆದುಕೊಂಡು ಬಂದು ಕಾಮಣ್ಣನ ಅಗ್ನಿ ಸ್ಪರ್ಶಕ್ಕೆ ಸಜ್ಜುಗೊಳಿಸುತ್ತಾರೆ.

    ಬೆಂಕಿ ಹಿಡಿದು ಓಡá-ವ ಸ್ಪರ್ಧೆ: ಹುಣ್ಣಿಮೆ ದಿನ ಕಾಮಣ್ಣನನ್ನು ಕೂರಿಸá-ವ ಸ್ಥಳದಿಂದ 1500 ಮೀಟರ್ ಅಂತರದಿಂದ ಓಟದ ಸ್ಪರ್ಧೆ ಆಯೋಜಿಸಲಾಗುತ್ತದೆ. ಗ್ರಾಮದ ಯುವಕರು ಒಂದೆಡೆ ಸೇರಿಕೊಂಡು ನಿಂತಿರುವಾಗ ಹರಿಜನ ಸಮá-ದಾಯದವರು ಕುಳ್ಳನ್ನು ಸುಟ್ಟು ಬೆಂಕಿ ಕೆಂಡ ಮಾಡಿ ಯುವಕರ ಮೇಲೆ ತೂರುತ್ತಾರೆ. ಈ ಬೆಂಕಿಯನ್ನು ಗಿಡಗಳ ಎಲೆಗಳ ಸಹಾಯದಿಂದ ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗಿ ಕಾಮಣ್ಣನ ಸಮೀಪ ಬಂದು ಯಾರು ಅಗ್ನಿ ಸ್ಪರ್ಶ ಮಾಡುತ್ತಾರೋ ಆ ಯುವಕನನ್ನು ಗ್ರಾಮಸ್ಥರು ಮೆರವಣಿಗೆ ಮಾಡಿ, ಕಾಮಣ್ಣನ ತಲೆ ಮೇಲಿಟ್ಟ ಡಜನ್ ಬಾಳೆ ಹಣ್ಣು ನೀಡಿ ಗೌರವಿಸá-ತ್ತಾರೆ.

    ಈ ಸಂಪ್ರದಾಯ ಇಂದಿಗೂ ನಡೆಯುತ್ತ ಬಂದಿದೆ. ಸೋಮವಾರ ನಡೆದ ಈ ಸ್ಪರ್ಧೆಯ್ಲ ಪ್ರಥಮ ಸ್ಥಾನ ಗಳಿಸಿದ ಗ್ರಾಮದ ಯುವಕ ಚನ್ನಯ್ಯ ಬಸಯ್ಯ ಸಂಗೆದೇವರಕೊಪ್ಪ ಅವರಿಗೆ ಗ್ರಾಮಸ್ಥರು ಮೆರವಣಿಗೆ ಮಾಡಿ ಗೌರವಿಸಿದರು.

    ಯುವಕರನ್ನು ಹುರಿದುಂಬಿಸುವ ಜೊತೆಗೆ ಪ್ರೋತ್ಸಾಹವನ್ನು ನೀಡಲು ಈ ಹೋಳಿ ಹುಣ್ಣಿಮೆ ಸಾಕ್ಷಿಯಾಗಿದೆ. ನಮ್ಮ ಮುತ್ತಜ್ಜನ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ತಾಲೂಕಿನಲ್ಲಿಯೇ ನಮ್ಮ ಗ್ರಾಮ ಹೋಳಿ ಹುಣ್ಣಿಮೆಗೆ ಹೆಸರುವಾಸಿಯಾಗಿದೆ. | ರುದ್ರಯ್ಯ ಗೊಡಿಮನಿ, ತುಮರಿಕೊ್ಪ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts