More

    ಕಾನೂನು ಅರಿವು ಇರದಿದ್ದರೆ ಜೀವನ ನಿರ್ವಹಣೆ ಕಷ್ಟ

    ಐಗಳಿ, ಬೆಳಗಾವಿ: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯವಶ್ಯ. ಕನಿಷ್ಠ ಕಾನೂನು ತಿಳಿವಳಿಕೆ ಇರದಿದ್ದರೆ ಪ್ರತಿದಿನವೂ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಅಥಣಿ ವಕೀಲರ ಸಂಘದ ಉಪಾಧ್ಯಕ್ಷ ವಿ.ಎಸ್.ಪಾಟೀಲ ಹೇಳಿದರು. ಇಲ್ಲಿಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಕಂದಾಯ, ತಾಪಂ, ಶಿಶು ಅಭಿವೃದ್ಧಿ ಇಲಾಖೆ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಹಾಗೂ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಹಕರಿಗೆ ಖರೀದಿಯಲ್ಲಿ ಮೋಸವಾದರೆ ವ್ಯಾಪಾರಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂದರು. ಹಿರಿಯ ವಕೀಲ ಎಸ್.ಎಸ್.ಪಾಟೀಲ ಮಾತನಾಡಿ, ನಮ್ಮ ಹಕ್ಕು ಪಡೆಯುವ ಕೆಲಸ ಮಾಡಬೇಕು. ನೀರು, ಭೂಮಿ, ಗಾಳಿ, ನಿಸರ್ಗ ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಮತದಾನದ ಹಕ್ಕು ಮಾರಿಕೊಳ್ಳಬಾರದು. ವಾಹನ ಚಾಲನೆ ವೇಳೆ ನಿಯಮ ಮೀರಬಾರದು ಎಂದರು. ಗ್ರಾಪಂ ಅಧ್ಯಕ್ಷೆ ರಾಜಶ್ರೀ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ಕರಿಬಸಪ್ಪಗೋಳ, ನ್ಯಾಯವಾದಿ ಎಸ್.ಬಿ, ಮೇತ್ರಿ, ಆರ್.ಎನ್.ಹಳಿಂಗಳಿ, ವಿಠ್ಠಲ ಕಂಕಣವಾಡಿ, ಜಿ.ಎಸ್.ಪೂಜಾರಿ ಹಿರಿಯರಾದ ಸಿ.ಎಸ್.ನೇಮಗೌಡ, ಕಂದಾಯ ನಿರೀಕ್ಷಕ ಎಂ.ಎಂ.ಮುಜಾವರ, ಪಿಡಿಒ ರಾಜೇಂದ್ರ ಪಾಠಕ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹುನ್ನೂರ, ಶಿವಾನಂದ ಸಿಂಧೂರ, ಅಪ್ಪಾಸಾಬ ಮದಬಾವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts