More

    ಕಾಡು, ಔಷಧೀಯ ಸಸ್ಯಗಳ ಸಂರಕ್ಷಿಸುವ ಕೆಲಸವಾಗಲಿ

    ಚಿತ್ರದುರ್ಗ: ಸುಸ್ಥಿರ ಜೀವನೋಪಾಯಕ್ಕಾಗಿ ಜೀವವೈವಿಧ್ಯತೆಯ ಜ್ಞಾನದ ಅಗತ್ಯವಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.
    ರಾಜ್ಯ ಔಷಧ ಗಿಡಮೂಲಿಕೆ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಅರಣ್ಯಇಲಾಖೆ ಸಹಯೋಗದಲ್ಲಿ ಜಿಪಂ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಔಷಧ ಸಸ್ಯ ಹಾಗೂ ಜೀವವೈವಿಧ್ಯ ಕುರಿತು ಚಿತ್ರದುರ್ಗ ವಿಭಾಗ ಮಟ್ಟದ ಅರಣ್ಯಾಧಿಕಾರಿಗಳ ಮತ್ತು ಮುಂಚೂಣಿ ಸಿಬ್ಬಂದಿ ಸಾಮರ್ಥ್ಯವರ್ಧನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಜೀವವೈವಿಧ್ಯವು ಭೂಮಿ ಮೇಲಿನ ಜೀವನದ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ವಿವರಿಸುತ್ತದೆ. ಇದು ಭೂಮಿಯ ಅತ್ಯಂತ ಸಂಕೀರ್ಣ ಮತ್ತು ಪ್ರಮುಖ ಲಕ್ಷಣವಾಗಿದೆ. ಪರಿಸರ ಮತ್ತು ಆರ್ಥಿಕ ಮಹತ್ವವೂ ಇದಕ್ಕೆ ಇದೆ. ಜೀವನಕ್ಕೆ ಆಧಾರವಾದ ಹಲವು ಸಂಪನ್ಮೂ ಲಗಳನ್ನು ಒದಗಿಸುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿರುವ ಕಾಡು, ಔಷಧ ಸಸ್ಯಗಳನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ ಎಂದರು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಮಾತನಾಡಿ, ಜೀವವೈವಿಧ್ಯತೆ ಸಂರಕ್ಷಣೆ ಅಗತ್ಯತೆಯನ್ನು ಪ್ರತಿಪಾದಿಸಿದರು. ಸಾಮಾಜಿಕ ಅರಣ್ಯ ಉಪಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಮಾತನಾಡಿ, ಅಳಿವಿನಂಚಿಗೆ ತಲುಪಿರುವ ಹಲವು ಔಷಧೀಯ ಸಸ್ಯಗಳನ್ನು ಕಾಪಾಡಿ ಕೊಳ್ಳಬೇಕಿದೆ ಎಂದರು.
    ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್, ಜೋಗಿಮಟ್ಟಿ ವನ್ಯಜೀವಿಧಾಮದಲ್ಲಿರುವ ಔಷಧ ಸಸ್ಯಗಳ ಕುರಿತು ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿ ಡಾ.ನಿರಂಜನ್ ಅವರು ಔಷಧೀಯ ಸಸ್ಯಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
    ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ಜೀವ ವೈವಿಧ್ಯಮಂಡಳಿ ಸದಸ್ಯ ಕಾರ್ಯದರ್ಶಿ ಜಗತ್‌ರಾಮ್,ಮಂಡಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜೆ.ಗೋವರ್ಧನ್,ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಜಿ.ಎ.ಸುದರ್ಶನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ, ಬಳ್ಳಾರಿ ವೃತ್ತ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮತ್ತಿತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts