More

    ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ

    ಚಿತ್ರದುರ್ಗ: ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾಂಗ್ರೆಸ್‌ನ 138ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

    ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, 1885ರಲ್ಲಿ ಕಾಂಗ್ರೆಸ್ ಸಂಸ್ಥಾಪನೆಯಾಯಿತು. ಅಲ್ಲಿಂದ ಈವರೆಗೂ ಅನೇಕ ವರ್ಗದವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅದರಲ್ಲಿ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ ಪ್ರಮುಖರು ಎಂದರು.

    ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಸ್ಥಾಪನೆಯಾದ ಕಾಂಗ್ರೆಸ್ ಸ್ವಾತಂತ್ರೃ ನಂತರ ಪಂಚವಾರ್ಷಿಕ ಯೋಜನೆ, ಕೃಷಿ, ನೀರಾವರಿಗೆ ಉತ್ತೇಜನ, ವಿವಿಧ ಅಣೆಕಟ್ಟೆಗಳ ನಿರ್ಮಾಣ, ವಿಶ್ವವಿದ್ಯಾಲಯಗಳು, ಕೈಗಾರಿಕೆ, ಸ್ಟೀಲ್‌ಪ್ಲಾಂಟ್, ರೈಲ್ವೆ ಹೀಗೆ ಅನೇಕ ಯೋಜನೆ ಜಾರಿಗೊಳಿಸಿತು ಎಂದು ಹೇಳಿದರು.

    ಮುಖಂಡರಾದ ಕೆ.ಎಂ.ಹಾಲಸ್ವಾಮಿ, ಡಿ.ಎನ್.ಮೈಲಾರಪ್ಪ, ಎಸ್.ಎನ್.ರವಿಕುಮಾರ್, ಮುದಸಿರ್ ನವಾಜ್, ಲಕ್ಷ್ಮ್ಮಿಕಾಂತ್, ಭೂತೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts