More

    ಕಾಂಗ್ರೆಸ್​ಗೆ ಕೊತ್ತೂರು​ ಸೇರ್ಪಡೆ: ಎಐಸಿಸಿಯಿಂದ ಪಕ್ಷ ಬಲವರ್ಧನೆಗೆ ಸೂಚನೆ

    ಮುಳಬಾಗಿಲು: ಸೇರ್ಪಡೆ ಕಾರ್ಯಕ್ರಮದಲ್ಲಿ ಕೋಲಾರ ಕ್ಷೇತ್ರದ ಜೆಡಿಎಸ್​ ಶಾಸಕ ಕೆ.ಶ್ರೀನಿವಾಸಗೌಡ ಕೂಡ ಇದ್ದು ತಾಂತ್ರಿಕ ಕಾರಣಗಳಿಂದ ಅವರ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ, ಕೊತ್ತೂರು ಮಂಜುನಾಥ್​ ಮತ್ತು ಡಾ.ಸುಧಾಕರ್​ ಅವರಿಗೆ ಮುಳಬಾಗಿಲು ಮತ್ತು ಚಿಂತಾಮಣಿ ತಾಲೂಕಿನ ಕಾಂಗ್ರೆಸ್​ ಟಿಕೆಟ್​ ಸೇರಿ ಪಕ್ಷದ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಆದ್ಯತೆ ನೀಡುವ ಭರವಸೆಯನ್ನು ಎಐಸಿಸಿ ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ.ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ಹಾಗೂ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್​ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದ್ದಾರೆ. ದೆಹಲಿಯಲ್ಲಿ ಎಐಸಿಸಿ ವರಿಷ್ಠ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್​ ಗಾಂಧಿ ಸಮ್ಮುಖದಲ್ಲಿ ಬುಧವಾರ ಪಕ್ಷ ಸೇರಿದರು.

    ಇದರಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಮಾಜಿ ಸಂಸದ ಕೆ.ಎಚ್​.ಮುನಿಯಪ್ಪ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಕೋಲಾರ, ಮುಳಬಾಗಿಲು ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಶಾಸಕರು ಇಲ್ಲದಿರುವುದು ಈ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಲು ಗ್ರೀನ್​ ಸಿಗ್ನಲ್​ ಸಿಕ್ಕಂತಾಗಿದೆ. ಇದಕ್ಕೆ ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್​ಸಿಂಗ್​ ಸುರ್ಜೆವಾಲ ಸಹ ಒಪ್ಪಿಗೆ ಸೂಚಿಸಿದ್ದು ಜಿಲ್ಲೆಯಲ್ಲಿ ಮಾಜಿ ಸ್ಪೀಕರ್​, ಶ್ರೀನಿವಾಸಪುರ ಶಾಸಕ ಕೆ.ಆರ್​.ರಮೇಶ್​ ಕುಮಾರ್​ ತಂಡ ಮೇಲುಗೈ ಸಾಧಿಸಿದಂತಾಗಿದೆ.

    ಕಾಂಗ್ರೆಸ್​ಗೆ ಕೊತ್ತೂರು​ ಸೇರ್ಪಡೆ: ಎಐಸಿಸಿಯಿಂದ ಪಕ್ಷ ಬಲವರ್ಧನೆಗೆ ಸೂಚನೆ
    ದೆಹಲಿಯಲ್ಲಿ ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಜತೆ ಕೊತ್ತೂರು ಮಂಜುನಾಥ್​ ಚರ್ಚೆ ನಡೆಸಿದರು. ಶಾಸಕ ನಂಜೇಗೌಡ ಮತ್ತಿತರರಿದ್ದರು.


    ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ, ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್​ಸಿಗಳಾದ ನಸೀರ್​ಅಹ್ಮದ್​, ಎಂ.ಎಲ್​.ಅನಿಲ್​ಕುಮಾರ್​ ಅವರು ಮಂಜುನಾಥ್​, ಸುಧಾಕರ್​ ಸೇರ್ಪಡೆಗೆ ಸಾಥ್​ ನೀಡಿದ್ದಾರೆ.


    ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿಂತಾಮಣಿ, ಕೋಲಾರದಲ್ಲಿ ಜೆಡಿಎಸ್​ ಶಾಸಕರಿದ್ದರೆ ಮುಳಬಾಗಿಲಿನಲ್ಲಿ ಕಾಂಗ್ರೆಸ್​ ಬೆಂಬಲದಿಂದ ಪೇತರವಾಗಿ ಗೆದ್ದ ಎಚ್​.ನಾಗೇಶ್​ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ಈ 3 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರದಲ್ಲಿ ಕಾಂಗ್ರೆಸ್​ ಶಾಸಕರೇ ಇದ್ದು ಮುಂದಿನ ವಿಧಾನಸಭಾ ಚುನಾವಣೆಗೆ ಈ ಕ್ಷೇತ್ರಗಳಿಗೆ ಈಗಿನಿಂದಲೇ ತಯಾರಿಗೆ ಕಾಂಗ್ರೆಸ್​ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts