More

    ಕಲಾ ತಂಡಗಳ ಪ್ರದರ್ಶನಕ್ಕೆ ಮನಸೋತ ಜನ

    ಬೀದರ್: ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2022-23ನೇ ಸಾಲಿನ ಗಿರಿಜನ ಉಪ ಯೋಜನೆಯಡಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಗಿರಿಜನ ಉತ್ಸವದಲ್ಲಿ ಸಂಗೀತ ಸುಧೆಯೇ ಹರಿಯಿತು.
    ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಪರಿಶಿಷ್ಟ ಪಂಗಡದ ಕಲಾ ತಂಡಗಳ ಕಲಾವಿದರು ಜಾನಪದದ ವಿವಿಧ ಪ್ರಕಾರಗಳಲ್ಲಿ ಗಾಯನ ಪ್ರಸ್ತುತಪಡಿಸಿ, ಶ್ರೋತೃಗಳ ಮನ ತಣಿಸಿದರು. ಭಜನೆ, ಮಿಮಿಕ್ರಿ, ಜಾನಪದ ಜಾದೂ ಪ್ರದರ್ಶನ ಉತ್ಸವಕ್ಕೆ ಇನ್ನಷ್ಟು ಕಳೆ ತಂದುಕೊಟ್ಟವು.
    ಜಲಸಂಗಿಯ ಮಂಜುನಾಥ ಹಾಗೂ ತಂಡ ನಾಡಗೀತೆ, ಬೀದರ್‍ನ ಸೃಜನ್ಯ ಮತ್ತು ತಂಡ, ಜಲಸಂಗಿಯ ಸೋನಮ್ಮ ಹಾಗೂ ತಂಡ, ಹಳ್ಳಿಖೇಡದ ಶಿವಾನಂದ ಮತ್ತು ತಂಡದ ಜಾನಪದ ಗಾಯನ, ನಾಗೂರದ ಶಾಂತಮ್ಮ ಹಾಗೂ ತಂಡದ ಸಂಪ್ರದಾಯ ಪದ, ಡೊಣಗಾಪುರದ ಶಾಂತಮ್ಮ ಮತ್ತು ತಂಡದ ದಾಸರ ಪದ, ಚಳಕಾಪುರದ ಯಲ್ಲಾಲಿಂಗ ರೊಟ್ಟೆ ಹಾಗೂ ತಂಡದ ಶಾಸ್ತ್ರೀಯ ಸಂಗೀತ, ಕೌಠಾ(ಕೆ)ದ ಬೀರಪ್ಪ ಮತ್ತು ತಂಡ, ಬಸವಕಲ್ಯಾಣದ ನೀಲಕಂಠ ಹಾಗೂ ತಂಡ, ಹುಮನಾಬಾದ್‍ನ ಭವಾನಿ ಶಂಕರ ಮತ್ತು ತಂಡದ ಭಜನೆ, ಬೀದರ್‍ನ ಭಾಗ್ಯಶ್ರೀ ಹಾಗೂ ತಂಡ, ಹುಮನಾಬಾದ್‍ನ ನಿತಿನ್ ಮತ್ತು ತಂಡದ ತತ್ವಪದ, ಘಾಟಬೋರಾಳದ ಸುನೀಲ್ ಹಾಗೂ ತಂಡದ ಡಪ್ಪಿನ ಪದ, ಕಣಜಿಯ ಯಲ್ಲಾಲಿಂಗ ಮತ್ತು ತಂಡದ ಮಿಮಿಕ್ರಿ, ಎಕಲಾರದ ಸಂಗಮ್ಮ ಹಾಗೂ ತಂಡ, ಕಲವಾಡಿಯ ಕವಿತಾ ಮತ್ತು ತಂಡದ ಸಂಪ್ರದಾಯ ಪದಗಳು ನೆರೆದವರನ್ನು ಕಲಾ ಲೋಕದಲ್ಲಿ ತೇಲಾಡಿಸಿದವು.

    ಬುಡಕಟ್ಟು, ಜಾನಪದ ಕಲೆ ಉಳಿಸಿ: ಅಳಿವಿನ ಅಂಚಿನಲ್ಲಿ ಇರುವ ಬುಡಕಟ್ಟು ಹಾಗೂ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ನುಡಿದರು. ಗಿರಿಜನ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಸಿ ಕಲೆಗಳು ಮತ್ತೆ ಅರಳಲು ಕಲೆ ಹಾಗೂ ಕಲಾವಿದರಿಗೆ ವೇದಿಕೆ ಕಲ್ಪಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಲೆ, ಕಲಾವಿದರ ಉಳಿವಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
    ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಅಧಿಕ ಅನುದಾನ ಒದಗಿಸಬೇಕು. ಕಲಾವಿದರ ಮಾಸಾಶನ ವಯೋಮಿತಿ 58 ರಿಂದ 54ಕ್ಕೆ ಇಳಿಸಬೇಕು. ಮಾಸಾಶನ ರೂ. 2 ಸಾವಿರದಿಂದ ರೂ. 5 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
    ಮೊಬೈಲ್, ಟಿವಿಯಿಂದಾಗಿ ಜಾನಪದ ಕಲೆಗಳಿಗೆ ಕೇಳುವವರಿಲ್ಲವಾಗಿದೆ. ಇಲಾಖೆ ಕಲೆ ಹಾಗೂ ಕಲಾವಿದರ ಉಳಿವಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ದೇಸಿ ಸಂಸ್ಕøತಿಯ ಉಳಿವಿಗೆ ಶ್ರಮಿಸುತ್ತಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.
    ಜಿಲ್ಲೆಯ ಕಲಾವಿದರು ಕಲಾ ಕೌಶಲ ಹೆಚ್ಚಿಸಿಕೊಳ್ಳಬೇಕು. ನೆರೆ ಜಿಲ್ಲೆಗಳಲ್ಲೂ ಕಲೆ ಪ್ರದರ್ಶನಕ್ಕೆ ಪ್ರಯತ್ನಿಸಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಸಲಹೆ ಮಾಡಿದರು.
    ಗಿರಿಜನ ಉತ್ಸವ ಮೂಲಕ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪರಿಶಿಷ್ಟ ಪಂಗಡದ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ಹೇಳಿದರು.
    ಉದ್ಯಮಿ ಪೀರಪ್ಪ ಸಿಂಧೆ, ನಿವೃತ್ತ ಸೈನಿಕ ಸಿದ್ದು ಗೋಳಸಾರ, ಸಾಹಿತಿ ಸಂಜೀವಕುಮಾರ ಅತಿವಾಳೆ, ಮುಖಂಡ ಸುನೀಲ ಭಾವಿಕಟ್ಟಿ, ಸೋಮಶೇಖರ ಮೊದಲಾದವರು ಇದ್ದರು.

    ಮೆರುಗು ಹೆಚ್ಚಿಸಿದ ಮೆರವಣಿಗೆ

    ಗಿರಿಜನ ಉತ್ಸವ ನಿಮಿತ್ತ ನಗರದಲ್ಲಿ ನಡೆದ ಕಲಾ ತಂಡಗಳ ಮೆರವಣಿಗೆಯು ಉತ್ಸವದ ಮೆರುಗು ಹೆಚ್ಚಿಸಿತು. ಬಸವಕಲ್ಯಾಣದ ಶಂಭುಲಿಂಗ ಮತ್ತು ತಂಡ, ರಾಮಲಿಂಗ ಹಾಗೂ ತಂಡದ ಡೊಳ್ಳು ಕುಣಿತ, ಕೌಠಾದ ಶ್ರೀದೇವಿ ಮತ್ತು ತಂಡದ ಕೋಲಾಟ, ಜೇವರ್ಗಿಯ ಪ್ರಕಾಶ ಮದರೆ ಹಾಗೂ ತಂಡದ ಚಿಟ್ಟೆಮೇಳ, ಜಗದೇವಿ ಗೋಪಾಲ್ ಮತ್ತು ತಂಡದ ಲಮಾಣಿ ನೃತ್ಯ, ಬೀದರ್‍ನ ಶಿವಶರಣ ಗೌಳಿ ಹಾಗೂ ತಂಡದ ಹುಲಿ ಕುಣಿತ, ಬರೂರಿನ ನರಸಪ್ಪ ಮತ್ತು ತಂಡದ ಚಿಟಿಕೆ ಭಜನೆ ನೋಡುಗರ ಗಮನ ಸೆಳೆದವು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಡೊಳ್ಳು ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಶಿವಾಜಿ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ರೋಟರಿ ಕನ್ನಡಾಂಬೆ ವೃತ್ತದ ಮೂಲಕ ಹಾಯ್ದು ರಂಗ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts