More

    ಕರ್ನಾಟಕ ನಾಮಕರಣಕ್ಕೆ 50ರ ಸಂಭ್ರಮ ! ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರಿಂದ ಕಾರ್ಯಕ್ರಮಗಳ ಸಿದ್ಧತಾ ಸಭೆ

    ಗದಗ: ಮೈಸೂರು ರಾಜ್ಯಕ್ಕೆ 1973ರಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಲಾಗಿದೆ. ಮರುನಾಮಕರಣ ಮಾಡಿ 50 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ನವೆಂಬರ 3 ರಂದು ಗದಗ ನಗರದಲ್ಲಿ ಅದ್ಧೂರಿ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನವೆಂಬರ 2 ರಂದು ಹಂಪಿಯಲ್ಲಿ ಹಾಗೂ ನವೆಂಬರ 3 ರಂದು ಗದಗನಲ್ಲಿ ಕರ್ನಾಟಕ ನಾಮಕರಣಕ್ಕೆ 50 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

    ನವೆಂಬರ 3 ರಂದು ಬೆಳಗ್ಗೆ ನಗರದ ವೀರನಾರಾಯಣ ದೇವಸ್ಥಾನದಿಂದ ವಿವಿಧ ಕಲಾತಂಡಗಳೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದೆ. 30ಕ್ಕೂ ಅಧಿಕ ವಿಶೇಷ ಕಲಾತಂಡಗಳಿಂದ ಪ್ರದರ್ಶನ ಜರುಗಲಿದೆ. ಮೆರವಣಿಗೆಯು ಜಾಮಿಯಾ ಮಸಿದಿ, ಬಸವೇಶ್ವರ ವೃತ್ತ, ಕೆ.ಎಚ್.ಪಾಟೀಲ ವೃತ್ತ, ಪಂ. ಪುಟ್ಟರಾಜು ವೃತ್ತ, ಜನರಲ್ ಕರಿಯಪ್ಪ ವೃತ್ತದ ಮೂಲಕ ನಗರದ ಕಾಟನ ಸೇಲ್ ಸೋಸೈಟಿಗೆ ತಲುಪಲಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕಾ ಇಲಾಖೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಪಂಚಾಯತ ಗಳಿಂದ ನಾಡಿನ ಹಾಗೂ ಜಿಲ್ಲೆಯ ಇತಿಹಾಸ, ಸಂಸ್ಕøತಿ ಪ್ರತಿಬಿಂಬಿಸುವ ರೂಪಕಗಳನ್ನು ತಯಾರಿಸಿ ಪ್ರದರ್ಶಿಸಬೇಕು. ನಗರದ ಪ್ರಮುಖ ವೃತ್ತಗಳನ್ನು ವಿಧ್ಯುತ ದೀಪಗಳಿಂದ ಅಲಂಕರಿಸಬೇಕು. ಬಿದಿಗಳನ್ನು ಸುಂದರೀಕರಣಗೊಳಿಸುವಲ್ಲಿ ನಗರಸಭೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

    ಗದಗನಲ್ಲಿ ಜರುಗುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಸಂಪುಟದ ಸಚಿವರುಗಳು ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಶಿಷ್ಟಾಚಾರ ಪಾಲನೆಯಡೆಗೆ ಅಧಿಕಾರಿಗಳು ಗಮನಹರಿಸಬೇಕು. ಅಕ್ಟೋಬರ 31 ರಿಂದ ನವೆಂಬರ 3 ರ ವರೆಗೆ ಸರ್ಕಾರಿ ಕಟ್ಟಡ ಹಾಗೂ ವೃತ್ತಗಳನ್ನು ದೀಪಾಲಂಕರಗೊಳಿಸಬೇಕು. ಸ್ವಚ್ಛತೆಗೆ ಆದ್ಯತೇ ನೀಡುವಂತೆ ಸೂಚಿಸಿದರು.

    ಕಾಟನ ಸೇಲ್ ಸೋಸೈಟಿಯಲ್ಲಿ ಜರುಗುವ ಬೃಹತ ವೇದಿಕೆ ಕಾರ್ಯಕ್ರಮದಲ್ಲಿ ಕಲಾತಂಡಗಳಿಂದ ಪ್ರದರ್ಶನ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಾಟನ ಸೇಲ್ ಸೋಸೈಟಿ ಆವರಣವನ್ನು ಶುಚಿಗೊಳಿಸುವದರೊಂದಿಗೆ ಮೆರವಣಿಗೆಯ ಮಾರ್ಗ ಹಾಗೂ ಮುಖ್ಯಮಂತ್ರಿಗಳು ತೆರಳುವ ಮಾರ್ಗದಲ್ಲಿ ಸೂಕ್ತ ಭದ್ರತೆ ಹಾಗೂ ಅಗತ್ಯ ಸೌಂದರ್ಯಿಕರಣಕ್ಕೆ ಮುಂದಾಗುವಂತೆ ತಿಳಿಸಿದರು.

    ನಗರದಲ್ಲಿ ಅಲ್ಲಲ್ಲಿ ನಡೆದಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಕಾರ್ಯಕ್ರಮಕ್ಕೆ ಅಪಾರ ಜನಸ್ತೋಮ ಆಗಮಿಸುವ ನೀರಿಕ್ಷೆಯಿದ್ದು ಸಂಚಾರಿ ದಟ್ಟಣೆ ಸಮರ್ಪಕವಾಗಿ ಪೋಲಿಸ ಇಲಾಖೆ ನಿರ್ವಹಿಸಬೇಕು. ಪೋಲಿಸ್ ಇಲಾಖೆಯೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ನಿರ್ದೇಶಿಸಿದರು.

    ಸಭೆಯಲ್ಲಿ ಆಮಂತ್ರಣ ಪತ್ರಿಕೆ, ಶಿಷ್ಟಾಚಾರ, ಕಲಾತಂಡಗಳ ಆಯ್ಕೆ, ವೇದಿಕೆ ಕಾರ್ಯಕ್ರಮ, ಪ್ರಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

    ಸಭೆಯ ನಂತರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರುಗಳು ಅಧಿಕಾರಿಗಳೊಂದಿಗೆ ಮೆರವಣಿಗೆಯ ಮಾರ್ಗ, ವೇದಿಕೆ ಕಾರ್ಯಕ್ರಮ ಸ್ಥಳ, ಮುಖ್ಯಮಂತ್ರಿಗಳ ತೆರಳುವ ಮಾರ್ಗಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

    ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ನಗರಾಭಿವೃದ್ಧಿ ಕೋಶದ ಯೋಜನಾ ನೀರ್ದೇಶಕ ಮಾರುತಿ ಬ್ಯಾಕೋಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಜಂಟಿಕೃಷಿ ನಿರ್ದೇಶಕಿ ತಾರಾಮಣಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ನಗರಸಭೆ ಪೌರಾಯುಕ್ತ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts