More

    ಕರೊನಾ ಸೇನಾನಿಗಳ ಸೇವೆಗೆ ಶ್ಲಾಘನೆ

    ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ವೈದ್ಯರು ಹಾಗೂ ಶುಶ್ರೂಷಕಿಯರು, ಸಿಬ್ಬಂದಿ ಕೇಕ್ ಕತ್ತರಿಸಿ ದೀಪ ಬೆಳಗಿಸುವ ಮೂಲಕ ವಿಶ್ವ ದಾದಿಯರ ದಿನ ಆಚರಿಸಿದರು.

    ಕೋವಿಡ್-19 ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶುಶ್ರೂಷಕಿ ಯರನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಿರೀಶ ಮರಡ್ಡಿ ನೇತೃತ್ವದಲ್ಲಿ ಆಸ್ಪತ್ರೆಯ ಸಿಬ್ಬಂದಿ ಗೌರವಿಸಿ, ಶುಭಾಶಯಗಳನ್ನು ತಿಳಿಸಿದರು.

    ಡಾ. ಗಿರೀಶ ಮರಡ್ಡಿ ಮಾತನಾಡಿ, ಕರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಗಲು-ರಾತ್ರಿ ಕಾರ್ಯ ನಿರ್ವಹಿಸುತ್ತಿರುವ ಶುಶ್ರೂಷಕಿಯರ ಸೇವೆ ಶ್ಲಾಘನೀಯ. ಸಮಾಜದಲ್ಲಿ ದಾದಿಯರ ಪಾತ್ರದ ಬಗ್ಗೆ ಅರಿವು ಮೂಡಿಸುವ, ಆರೋಗ್ಯ ಸೇವೆ ನೀಡುವಲ್ಲಿ ಅವರ ಬದ್ಧತೆ ಮತ್ತು ಕೊಡುಗೆಯನ್ನು ವೃದ್ಧಿಸಿ, ಪ್ರೋತ್ಸಾಹ, ಪ್ರೇರಣೆ ನೀಡುವುದು ವಿಶ್ವ ದಾದಿಯರ ದಿನಾಚರಣೆಯ ಮೂಲ ಉದ್ದೇಶವಾಗಿದೆ. ಎಲ್ಲ ಸೇವೆಗಳಿಗಿಂತ ಆರೋಗ್ಯ ಸೇವೆ ಶ್ರೇಷ್ಠವಾದದ್ದು ಎಂದರು.

    ಹಿರಿಯ ವೈದ್ಯ ಡಾ. ದೇವೇಂದ್ರಪ್ಪ ಮಾತನಾಡಿ, ನರ್ಸಿಂಗ್ ಅತ್ಯಂತ ಪವಿತ್ರವಾದ ಕಾರ್ಯ. ವೈದ್ಯರಿಗೆ ಮತ್ತು ರೋಗಿಗಳಿಗೆ ಕೊಂಡಿಯಾಗಿ ದಾದಿಯರು ಕೆಲಸ ನಿರ್ವಹಿಸುತ್ತಾರೆ ಎಂದು ಹೇಳಿದರು. ಡಾ. ಗುರುರಾಜ, ಡಾ. ಪ್ರವೀಣ ಸಜ್ಜನರ, ಶಿವಯ್ಯ ಕುಲಕರ್ಣಿ, ಎಸ್.ಬಿ. ರಡ್ಡೇರ, ಹಿರಿಯ ಶುಶ್ರೂಷಕ ಅಧಿಕಾರಿ ಶಕುಂತಲಾ ನಾಗರಡ್ಡಿ, ಸಿ.ಎಫ್. ಮುಳಗುಂದ, ಗಂಗಾ ಪಾಟೀಲ, ಶ್ವೇತಾ, ಮಾಲತಿ, ಸಲ್ಮಾ, ರತ್ನಾ, ಸಂಧ್ಯಾ, ಆಶಾ, ರಾಜೇಶ್ವರಿ, ನಸೀಮಾ, ಇತರರಿದ್ದರು. ದಾದಿಯರನ್ನು ಶುಶ್ರೂಷಕ ಅಧಿಕಾರಿಗಳು ಎಂದು ಸರ್ಕಾರ ಘೊಷಣೆ ಮಾಡಿರುವುದಕ್ಕೆ ಎಲ್ಲರೂ ಹರ್ಷ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts