More

    ಕರೊನಾ ಮಧ್ಯೆ ಕೈಹಿಡಿದ ಉದ್ಯೋಗ ಖಾತ್ರಿ-ಹಿರೇಮಸಳಿ ಗ್ರಾಪಂನಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ‌‌‌ ಚಾಲನೆ

    ವಿಜಯಪುರ: ಮಹಾಮಾರಿ ಕರೊನಾ ಅಟ್ಟಹಾಸಕ್ಕೆ ಜನಜೀವನ ತತ್ತರಗೊಂಡಿದ್ದು ಉದ್ಯೋಗವಿಲ್ಲದೇ ಕಂಗಾಲಾದ ಕೂಲಿಕಾರರ ಕೈಗೆ ಕೆಲಸ ಕೊಡಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ದುಡಿಯೋಣ ಬಾ’ ಅಭಿಯಾನಕ್ಕೆ ಹಿರೇಮಸಳಿ ಗ್ರಾಪಂನಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ.
    ಹಲವಾರು ಕೂಲಿ ಕಾರ್ಮಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರಲ್ಲದೇ ಸರ್ಕಾರದ ಯೋಜನೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಳೆದೊಂದು ತಿಂಗಳಿಂದ ಕರೊನಾ ಹಿನ್ನೆಲೆ ಉದ್ಯೋಗಕ್ಕಾಗಿ ಗ್ರಾಪಂಗೆ ಕೂಲಿಕಾರರು ಅಲೆದಾಡಿದ್ದರು. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದು ತಮಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಲು ಬೇಡಿಕೆ ಇರಿಸಿದ್ದರು. ಕೂಲಿಕಾರರ ವಿವರ ಸಂಗ್ರಹಿಸಿದ ಪಿಡಿಒ ಸಿದ್ದರಾಮ ಸಿನಿಖೇಡ ಎಲ್ಲರಿಗೂ ಉದ್ಯೋಗವಕಾಶ ಕಲ್ಪಿಸಿದ್ದಾರೆ.
    ಬೇಸಿಗೆ ಕಾಲವಾದ್ದರಿಂದ ಗ್ರಾಮದ ಹಳ್ಳ ಸಂಪೂರ್ಣ ಬತ್ತಿ ಹೋಗಿದ್ದು ಎಲ್ಲೆಂದರಲ್ಲಿ ಮುಳ್ಳು ಕಂಟಿ ಆವರಿಸಿದೆ. ಆಳೆತ್ತರದ ಹುಲ್ಲು ಬೆಳೆದಿದ್ದರಿಂದ ಹಳ್ಳ ಸಂಪೂರ್ಣ ಹಾಳಾಗಿತ್ತು. ಅಲ್ಲದೇ, ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿತ್ತು. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದ್ದು ಇದರಿಂದ ಬರುವ ಬೇಸಿಗೆಯಲ್ಲಿ ನೀರು ಇಂಗಿಸಲು ಸಹ ಸಹಕಾರಿಯಾಗಲಿದ್ದು ಹಳ್ಳದ ನೀರು ಬಳಸಲು ಸಹಾಯವಾಗಲಿದೆ ಎಂದು ಪಿಡಿಒ ಸಿನಿಖೇಡ ತಿಳಿಸುತ್ತಾರೆ.
    ಗ್ರಾಪಂ ಸಿಬ್ಬಂದಿ ಗಂಗು ಮರಡಿ, ಗ್ರಾಪಂ ಅಧ್ಯಕ್ಷೆ ರಮಜಾನಬಿ ಗೂಗಿಹಾಳ, ಸದಸ್ಯೆ ಸವಿತಾ ಭಾಸಗಿ, ಸುಗಲಾಬಾಯಿ ಚಾಂದಕವಟೆ, ಸದಸ್ಯ ಅಶೋಕ ಮರಡಿ, ಶ್ರೀಕೃಷ್ಣ ಸುಣಗಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts