More

    ಕರೊನಾ ತಡೆಗೆ ಸ್ವಯಂ ನಿರ್ಬಂಧ ಹೇರಿಕೊಳ್ಳಿ

    ಧಾರವಾಡ: ಕರೊನಾ ತಡೆಗೆ ಜಾರಿಗೊಳಿಸಿದ ಲಾಕ್​ಡೌನ್ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿದೆ. ಜಿಲ್ಲಾಡಳಿತ, ಪೊಲೀಸ್, ಆರೋಗ್ಯ, ಮಹಾನಗರ ಪಾಲಿಕೆ ಸೇರಿ ವಿವಿಧ ಇಲಾಖೆಗಳ ಕಾರ್ಯ ತೃಪ್ತಿಕರವಾಗಿದೆ. ಸೋಂಕು ತಡೆಗೆ ಜನರು ಸ್ವಯಂ ಪ್ರೇರಣೆಯಿಂದ ಮನೆಗಳಿಂದ ಹೊರಬರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ತಾಳ್ಮೆ ಮತ್ತು ಸಮಾಧಾನದಿಂದ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲಾಕ್​ಡೌನ್ ಜಾರಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಿಮ್ಸ್​ನಲ್ಲಿ ಕಫ ಸಂಗ್ರಹದ ಪ್ರಯೋಗಾಲಯ ಆರಂಭವಾಗಿದ್ದು, ಚಿಕಿತ್ಸೆ ನೀಡುವ ವೈದ್ಯರು ಮತ್ತು ಸಿಬ್ಬಂದಿಗೆ ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್​ವೆುಂಟ್, ಎನ್-95 ಮಾಸ್ಕ್​ಗಳು, ಸ್ಯಾನಿಟೈಸರ್, ಗ್ಲೌಸ್​ಗಳು, ಫೇಸ್ ಶೀಲ್ಡ್​ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸಂಗ್ರಹಿಸಬೇಕು. ಗುಣಮಟ್ಟದಲ್ಲಿ ವ್ಯತ್ಯಾಸ ಆಗದಂತೆ ಎಚ್ಚರ ವಹಿಸಬೇಕು. ಜಿಲ್ಲೆಯಲ್ಲಿ ಸದ್ಯ ಪಾಸಿಟಿವ್ ಪ್ರಕರಣಗಳಿಲ್ಲ ಎಂದು ಮೈಮರೆಯಬಾರದು ಎಂದರು.

    ಹತ್ತಿ ಖರೀದಿ ಕುರಿತು ಏ. 9ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಶೆಟ್ಟರ್ ಹೇಳಿದರು.

    ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿದರು.

    ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಗ್ರಾಣದಲ್ಲಿ ಸದ್ಯ 3 ಲಕ್ಷದಷ್ಟು ಮೂರು ಲೇಯರ್​ಗಳ ಸರ್ಜಿಕಲ್ ಮಾಸ್ಕ್​ಗಳು, 11,500 ಎನ್-95 ಮಾಸ್ಕ್​ಗಳಿವೆ. 1530 ಪಿಪಿಇ ಕಿಟ್​ಗಳಿವೆ. ಕಿಮ್ಸ್​ನಲ್ಲಿ 817 ಪಿಪಿಇ ಕಿಟ್​ಗಳು ಲಭ್ಯ ಇವೆ ಎಂದರು.

    ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ದೀಪಾ ಚೋಳನ್, ಹು-ಧಾ ಪೊಲೀಸ್ ಆಯುಕ್ತ ಆರ್.ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್ ಇತರರು ಇದ್ದರು.

    ಒಟಿಪಿ ಬಳಕೆ ಸೂಕ್ತ

    ಸರ್ಕಾರ 3 ತಿಂಗಳ ಪಡಿತರ ವಿತರಣೆ ಆರಂಭಿಸಿದೆ. ವಿತರಣೆಗೆ ಮೊಬೈಲ್ ಓಟಿಪಿ ಬಳಕೆಯ ವಿನಾಯಿತಿ ನೀಡಲಾಗಿದೆಯಾದರೂ, ಸೋಂಕು ತಡೆಗಟ್ಟಲು ಒಟಿಪಿ ಬಳಕೆಯೇ ಸೂಕ್ತ. ಕಾಗದದ ಮೇಲೆ ಸಹಿ ಹಾಕಿಸಿಕೊಂಡು, ಹೆಬ್ಬೆಟ್ಟಿನ ಗುರುತು ಪಡೆಯುವುದು ಬೇರೆ ಪರಿಣಾಮಗಳಿಗೆ ಅವಕಾಶ ಕಲ್ಪಿಸಬಹುದು. ಸಾಧ್ಯವಾದಷ್ಟು ಒಟಿಪಿ ಆಧಾರಿತ ಪಡಿತರ ವಿತರಣೆಯನ್ನೇ ಉತ್ತೇಜಿಸಿ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಚಿಕಿತ್ಸೆಗೆ ಸಹಕರಿಸದಿದ್ದರೆ ಕಾನೂನು ಕ್ರಮ

    ಹುಬ್ಬಳ್ಳಿ: ಎಲ್ಲ ಧರ್ಮ, ಜಾತಿಯವರು ಕರೊನಾ ಸೋಂಕು ಪರೀಕ್ಷೆಗೆ ಸಹಕರಿಸಬೇಕು. ಯಾರು ದೆಹಲಿಯ ನಿಜಾಮುದ್ದೀನ್ ಮಸೀದಿಗೆ ಹೋಗಿದ್ದರೋ ಅವರು ಸ್ವಯಂ ಪ್ರೇರಣೆಯಿಂದ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಎಲ್ಲ ಪರೀಕ್ಷೆಗೂ ಅವರು ಸಹಕರಿಬೇಕು. ಸಹಕಾರ ಕೊಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಎಚ್ಚರಿಕೆ ನೀಡಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಸ್​ನಲ್ಲಿ ಕೋವಿಡ್ 19 ಪರೀಕ್ಷಾ ಕೇಂದ್ರ ಆರಂಭಿಸಲು ಐಸಿಎಂಆರ್ ಒಪ್ಪಿಗೆ ನೀಡುರುವುದು ಖುಷಿಯಾಗಿದೆ. ಗಂಟಲ ದ್ರವ ಮಾದರಿ ಪರೀಕ್ಷೆಗೆ ಶಿವಮೊಗ್ಗ ಮತ್ತು ಬೆಂಗಳೂರನ್ನು ನೆಚ್ಚಿಕೊಳ್ಳಬೇಕಿತ್ತು. ಈಗ ಇಲ್ಲಿಯೇ ಸ್ಥಾಪಿಸಲಾಗುತ್ತಿರುವುದರಿಂದ ಶೀಘ್ರವಾಗಿ ವೈದ್ಯರ ಕೈಗೆ ವರದಿ ಸಿಗಲಿದೆ. ಆರ್​ಎನ್​ಎ ಎಕ್ಸ್​ಟ್ರಾಕ್ಟ್ ಯಂತ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕೇಂದ್ರದಲ್ಲಿ ಅಳವಡಿಸಿದರೆ 100 ಜನರ ಪರೀಕ್ಷಾ ವರದಿಯನ್ನು ಒಂದೇ ದಿನಕ್ಕೆ ಪಡೆಯಬಹುದು ಎಂದರು.

    ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮ

    ಧಾರವಾಡ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹೇಳಿದರು.

    ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲೆಯ ವಿವಿಧ ತಾಲೂಕಿನ ಧಾರ್ವಿುಕ ಮುಖಂಡರ, ಧಾರ್ವಿುಕ ಸಂಸ್ಥೆಗಳ ಪ್ರಮುಖರೊಂದಿಗೆ ಶಾಂತಿ ಪಾಲನೆ ಹಾಗೂ ಸಮಾಲೋಚನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೆಲವರು ಸಮಾಜದಲ್ಲಿ ಶಾಂತಿಭಂಗ ಉಂಟುಮಾಡುವ ಸುಳ್ಳು ಸುದ್ದಿಗಳನ್ನು ಬಿತ್ತರಿಸುವ, ಫಾರ್ವರ್ಡ್ ಮಾಡುವ ಕೃತ್ಯ ಮಾಡುತ್ತಿದ್ದಾರೆ. ಇಂತಹವರ ಕುರಿತು ದೂರು ಬಂದಲ್ಲಿ ಅಥವಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಲ್ಲಿ ಎನ್​ಡಿಆರ್​ಎಫ್ ಕಾಯ್ದೆ ಹಾಗೂ ಐಪಿಸಿ 188 ಮತ್ತು 295 ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸುವುದಾಗಿ ಎಚ್ಚರಿಸಿದರು.

    ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಚನೆಗಳನ್ನು ಪಾಲಿಸದೆ, ಕರ್ತವ್ಯನಿರತ ಅಧಿಕಾರಿಗಳಿಗೆ ಸ್ಪಂದಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಎಲ್ಲ ಧರ್ಮಗಳ ಹಬ್ಬಗಳು ಪ್ರತಿ ವರ್ಷ ಬರುತ್ತವೆ. ಸದ್ಯ ನಿಷೇಧಾಜ್ಞೆ ಇರುವುದರಿಂದ ಹಬ್ಬಗಳ ಆಚರಣೆ ಬೇಡ. ಈ ಬಾರಿ ಮನೆಯಲ್ಲೇ ಇದ್ದು ಹಬ್ಬ ಆಚರಿಸಿ ಎಂದು ವಿನಂತಿಸಿದರು.

    ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಗದ ಗ್ರಾಮದ ಎಸ್.ಎಸ್. ಪೀರಜಾದೆ, ಕುಂದಗೋಳದ ಮಲ್ಲಿಕಾರ್ಜುನ ಕಿರೇಸೂರ, ರಾಜೇಸಾಬ ಕಳ್ಳಿಮನಿ, ಅಣ್ಣಿಗೇರಿಯ ಎಚ್.ಎಚ್. ಗುಡನಾಯಕ್, ನವಲಗುಂದದ ಅಬ್ಬಾಸ್ ದೇವರಿಡು, ಬ್ಯಾಹಟ್ಟಿಯ ಮಂಜುನಾಥ ಮಲ್ಹಾರಿ, ಹಸನಸಾಬ್ ತಡಸದ, ಉಪ್ಪಿನ ಬೆಟಗೇರಿ ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ಗ್ರಾಮೀಣ ಸಿಪಿಐ ಎಸ್.ಸಿ. ಪಾಟೀಲ, ಪಿಎಸ್​ಐ ಮಹೇಂದ್ರ ನಾಯಕ, ಇತರರು ಇದ್ದರು. ಕಲಘಟಗಿ ಸಿಪಿಐ ವಿಜಯ ಬಿರಾದಾರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts