More

    ಕರೊನಾ ತಡೆಗೆ ವಲ್ಲೇಪುರ ಮಾದರಿ

    ಮಲ್ಲಪ್ಪ ಗೌಡ ಔರಾದ್

    ಕರೊನಾ ಸೋಂಕು ಹರಡದಂತೆ ವಲ್ಲೇಪುರ ಗ್ರಾಮಸ್ಥರು ಮಾದರಿ ಹೆಜ್ಜೆ ಇಟ್ಟಿದ್ದಾರೆ. ಎಲ್ಲರೂ ಸ್ವಯಂ ನಿರ್ಬಂಧ ಹೇರಿಕೊಳ್ಳುವ ಜತೆಗೆ ಗ್ರಾಮಕ್ಕೆ ವೈರಾಣು ಪ್ರವೇಶಿಸದಂತೆ ಚೆಕ್ಪೋಸ್ಟ್ ಸಹ ಮಾಡಿಕೊಂಡಿದ್ದಾರೆ. ಊರವರ್ಯಾರೂ ಹೊರಗಡೆ ಹೋಗುವಂತಿಲ್ಲ. ಹೊರಗಿನವರ್ಯಾರೂ ಗ್ರಾಮಕ್ಕೆ ಪ್ರವೇಶಿಸದಂತೆ ದೃಢ ನಿಧರ್ಾರ ಕೈಗೊಂಡಿದ್ದಾರೆ. ಗ್ರಾಮಸ್ಥರ ಈ ಕ್ರಮ ಇತರರಿಗೂ ಮಾದರಿ ಎನಿಸಿದೆ.
    ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಗಿಡ-ಗಂಟೆ, ಮುಳ್ಳು, ಕಲ್ಲುಗಳನ್ನು ಹಾಕಿ ಬಂದ್ ಮಾಡಿದ್ದಾರೆ. ಇವುಗಳನ್ನೇ ಚೆಕ್ಪೋಸ್ಟ್ಗಳಂತೆ ಮಾಡಿ ಯಾರೂ ಒಳಗೆ ಪ್ರವೇಶಿಸದಂತೆ ಕಾವಲು ಹಾಕಿದ್ದಾರೆ.
    ಊರವರು ಸ್ವಯಂ ದಿಗ್ಬಂಧನ ಮಾಡಿಕೊಂಡಿದ್ದಾರೆ. ಒಂದು ತಿಂಗಳು ಗ್ರಾಮದಿಂದ ಯಾರೂ ಹೊರ ಹೋಗದಂತೆ ಮತ್ತು ಹೊರಗಿನಿಂದ ಗ್ರಾಮಕ್ಕೆ ಯಾರಿಗೂ ಪ್ರವೇಶ ನೀಡದಂತೆ ನಿರ್ಬಂಧ ವಿಧಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲ ಕಡೆ ಚೆಕ್ಪೋಸ್ಟ್ ಹಾಕಿ ನಜರ್ ಇಟ್ಟಿದ್ದಾರೆ. ಇಲ್ಲಿ ಸ್ಥಳೀಯರೇ ಕಾವಲು ಕಾಯುವ ಕೆಲಸವನ್ನೂ ಮಾಡುತ್ತಿದ್ದಾರೆ.
    ಗ್ರಾಮದಲ್ಲಿ ಉತ್ಪಾದನೆ ಆಗುವ ಹಾಲು, ತರಕಾರಿಯನ್ನು ಊರಿನ ಎಲ್ಲ ಮನೆಗಳಿಗೆ ಹಂಚಿಕೆ ಮಾಡುವುದು. ಎಲ್ಲರೂ ಸೇರಿ ಗ್ರಾಮವನ್ನು ಪ್ರತಿದಿನ ಸ್ವಚ್ಛಗೊಳಿಸುವುದು. ಅಗತ್ಯವಿರುವ ವಸ್ತುಗಳನ್ನು ತಂದು ಸಂಗ್ರಹಿಸಿ ಇಟ್ಟುಕೊಳ್ಳುವುದು. ನಂತರ ಬೇರೆ ಊರಿನಲ್ಲಿರುವ ಕುಟುಂಬ ಸದಸ್ಯರನ್ನು ವಾಪಸ್ ಕರೆಸಲು ಯೋಚಿಸಿದ್ದಾರೆ. ಗ್ರಾಮದಲ್ಲಿ ಸಂಗ್ರಹವಾಗುವ ಹಸುವಿನ ಗಂಜಲ ಸಿಂಪಡಿಸುವುದು ಸೇರಿ ನಾನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
    ವಲ್ಲೇಪುರ ಗ್ರಾಮ ತೆಲಂಗಾಣ ಹತ್ತಿರದಲ್ಲಿದೆ. ಅಲ್ಲಿಂದ ಜನರು ಬರುವ ಸಾಧ್ಯತೆ ಇದೆ. ಅಲ್ಲದೆ ಜಿಲ್ಲೆಯ ವಿವಿಧೆಡೆ ಜನ ಇಲ್ಲಿಗೆ ಬಂದು ನೆಲೆಸಿದರೆ ಅಪಾರ ಕಟ್ಟಿಟ್ಟ ಬುತ್ತಿ ಎಂಬ ಮುಂದಾಲೋಚನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕರೊನಾ ಗ್ರಾಮದತ್ತ ಸುಳಿಯದಂತೆ ಎಲ್ಲ ಕ್ರಮ ಕೈಗೊಂಡಿದ್ದಾರೆ. ಪ್ರತಿ ಗ್ರಾಮಸ್ಥರು ಇಂಥ ವ್ಯವಸ್ಥೆ ಮಾಡಿಕೊಂಡರೆ ಕರೊನಾಕ್ಕೆ ಕಡಿವಾಣ ಬೀಳುವುದು ಖಚಿತ ಎನ್ನಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts